ಬೆಂಗಳೂರು,ಫೆ.20- ಕೇಂದ್ರ ಹಾಗೂ ರಾಜ್ಯ ಬಜೆಟ್ ಮುಗಿದ ಬೆನ್ನಲ್ಲೇ ಬಹುನಿರೀಕ್ಷಿತ ಬಿಬಿಎಂಪಿ ಆಯವ್ಯಯ ಮಂಡನೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಕೂಡಿ ಕಳೆದು ಬಜೆಟ್‍ನ ಲೆಕ್ಕಾಚಾರ ಕಾರ್ಯ ಮುಗಿಸಿದ ಪಾಲಿಕೆ ಅಧಿಕಾರಿಗಳು ಇದೇ 22 ರಂದು ಸಿಎಂಗೆ ಅಯುವ್ಯಯದ ಪಟ್ಟಿ ಸಲ್ಲಿಸಲಿದ್ದಾರೆ.
ಮಾರ್ಚ್ 3ರಂದು ಪಾಲಿಕೆ ಬಜೆಟ್ ಮಂಡನೆಗೆ ಮುಹೂರ್ತ ನಿಗದಿಯಾಗಲಿದೆ. ಬಿಬಿಎಂಪಿಯ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ ರಾಯಪುರ ಅವರು ಬಜೆಟ್ ಮಂಡಿಸಲಿದ್ದಾರೆ.
ಈ ಬಾರಿಯೂ ಕೂಡ ಬಜೆಟ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಕೂಡ ಆನ್‍ಲೈನ್ ಮುಖಾಂತರವೇ ಆಯವ್ಯಯ ಮಂಡನೆಮಾಡಲಾಗುತ್ತಿತ್ತು.
ಕಳೆದ ವರ್ಷದ ಕೆಲ ಯೋಜನೆಗಳ ಪುನರಾವರ್ತನೆಗೆ ಹಾಗೂ ಕಾಮಗಾರಿ ಪೂರ್ಣ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಪಾಲಿಕೆಯಿಂದ ಹಲವು ಸಂಘ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅನುದಾನಕ್ಕೂ ಬ್ರೇಕ್ ಬೀಳಲಿದೆ.
ಮಾರ್ಚ್ 3ರಂದು ಬಜೆಟ್ ಮಂಡನೆಗೆ ಅನುಮತಿ ಕೋರಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅಧಿಕೃತ ದಿನಾಂಕ ಪ್ರಕಟವಾಗಲಿದೆ.
ಬಜೆಟ್‍ನಲ್ಲಿ ಏನಿರಲಿದೆ?
ಈ ಬಾರಿಯ ಬಜೆಟ್‍ನಲ್ಲಿ ಹೊಸ ಯೋಜನೆಗಳ ಬಂಪರ್ ಹರಿದುಬರಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 11 ಹೊಸ ಪ್ಲೈಓವರ್ ನಿರ್ಮಾಣ, ಬಿ ಖಾತೆಯ ಆಸ್ತಿಗಳಿಗೆ ಎ ಖಾತೆ ಹಂಚಿಕೆಯ ಕ್ರಮ, ಕಳೆದ ವರ್ಷದ ಕೆಲ ಯೋಜನೆಗಳ ಪುನರಾವರ್ತನೆಗೆ ಹಾಗೂ ಕಾಮಗಾರಿ ಪೂರ್ಣ ಮಾಡಲು ಬಿಬಿಎಂಪಿ ಚಿಂತನೆ, ಪಾಲಿಕೆಯಿಂದ ಹಲವು ಸಂಘ ಸಂಸ್ಥೆಗಳಿಗೆ ನೀಡಲಾಗುತ್ತಿದ್ದ ಅನುದಾನಕ್ಕೂ ಬ್ರೇಕ್ ಹಾಕಲಿದೆ.
ಡಿಜಿಟಲ್ ಮೀಟರ್ ಅಳವಡಿಕೆಯಿಂದ ದುಪ್ಪಟ್ಟಾಯ್ತು ಕರೆಂಟ್ ಬಿಲ್..!
ಈ ಬಾರಿಯೂ ಕೂಡ ಬಜೆಟ್‍ನಲ್ಲಿ ಇಂದಿರಾ ಕ್ಯಾಂಟೀನ್ ಹೊರೆಹೊತ್ತ ಪಾಲಿಕೆ, ಕಸ ವಿಲೇವಾರಿಗೆ ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ನೀಡದ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಕಸ ವಿಲೇವಾರಿ ಸಂಪೂರ್ಣ ಜವಾಬ್ದಾರಿ ಪಾಲಿಕೆಯದ್ದಾಗಿರುತ್ತದೆ. ಹೀಗಾಗಿ ಈ ಬಜೆಟ್‍ನಲ್ಲಿ ಕಸ ವಿಲೇವಾರಿಗೆ ಅತಿ ಹೆಚ್ಚು ಅನುದಾನ ಮೀಸಲಿಡುವ ಸಾಧ್ಯತೆ ಇದೆ.
2023-24ನೇ ಸಾಲಿನಲ್ಲಿ ಇಂದಿರಾ ಕ್ಯಾಂಟೀನ್ ಗೆ 50 ಕೋಟಿ ಅನುದಾನವಿಟ್ಟು, ರಸ್ತೆ ಅಭಿವೃದ್ಧಿ, ಶಿಕ್ಷಣ, ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಿದೆ. ಕೆರೆ, ರಾಜಕಾಲುವೆ, ಪಾರ್ಕ್ ಗಳ ಉನ್ನತ್ತೀಕರಣಕ್ಕೆ ಆದ್ಯತೆ ನೀಡಲಾಗುವುದು.
ಪಾಲಿಕೆ ಅಸ್ತಿಗಳ ರಕ್ಷಣೆಗೆ ಒತ್ತು, ಬಿಬಿಎಂಪಿಯಿಂದ ಈ ಬಾರಿ 9 ಸಾವಿರ ಕೋಟಿ ಗಾತ್ರದ ಬಜೆಟ್ ಮಂಡನೆಯ ನಿರೀಕ್ಷೆಯಿದೆ. ಕೆಂಪೇಗೌಡರ ಜಯಂತಿ, ಕರಗ ಮಹೋತ್ಸವ, ಅಂಬೇಡ್ಕರ್ ಜಯಂತಿಗೂ ಕೋಟಿ ಕೋಟಿ ಅನುದಾನ, ಈ ಬಾರಿಯ ಬಜೆಟ್ ನಲ್ಲೂ ಪಾಲಿಕೆಯಿಂದ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ, ಪಾಲಿಕೆ ವ್ಯಾಪ್ತಿಯ ಹೊಸ 110 ಹಳ್ಳಿಗಳಿಗೆ ಕಾವೇರಿ ನೀರು ಸರಬರಾಜಿಗೆ ಹೆಚ್ಚಿನ ಒತ್ತು ನೀಡಲಾಗುವುದು.
ರಾಮನಗರದ ರಾಮಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ ಯೋಗಿ
ಆರ್ಥಿಕ ಸಂಕಷ್ಟದಲ್ಲಿರುವ ಪಾಲಿಕೆಗೆ ಹೊಸ ಯೋಜನೆ ಘೋಷಣೆಗೆ ಹಿಂದೇಟು, 4,000 ಕೋಟಿ ಆಸ್ತಿ ತೆರಿಗೆಯಿಂದ ಆದಾಯ ನಿರೀಕ್ಷೆ, ಉಳಿದಂತೆ ಜಾಹೀರಾತು, ಖಾತಾ ವರ್ಗಾವಣೆ ಶುಲ್ಕ ಸೇರಿದಂತೆ ಇತರೆ ಮೂಲಗಳಿಂದ 2,000 ಕೋಟಿ ಆದಾಯ, ಒಟ್ಟು ಪಾಲಿಕೆಯಿಂದ ಪ್ರಸಕ್ತ ಸಾಲಿನಲ್ಲಿ 6,000 ಕೋಟಿ ಆದಾಯ ಸಂಗ್ರಹ, ರಾಜ್ಯ ಸರ್ಕಾರದಿಂದ 3,000 ಕೋಟಿ ಅನುದಾನದ ನಿರೀಕ್ಷೆಯಲ್ಲಿದೆ.
BBMP, budget, February 22,