ಬೆಂಗಳೂರು ಸಂಚಾರ ದಟ್ಟಣೆಗೆ ನಿಯಂತ್ರಣಕ್ಕೆ ಬಿಬಿಎಂಪಿ ಮಹತ್ವದ ನಿರ್ಣಯ

Social Share

ಬೆಂಗಳೂರು,ಮಾ.2-ಬೆಂಗಳೂರಿನ ಹೃದಯ ಭಾಗದಲ್ಲಿ ಜನ ಸಾಮಾನ್ಯರನ್ನು ಕಾಡುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳಲು ಬಿಬಿಎಂಪಿ ಮಹತ್ವದ ನಿರ್ಣಯ ಕೈಗೊಂಡಿದ್ದು, ಪ್ರಮುಖ ಸ್ಥಳಗಳಲ್ಲಿ ಮೇಲು ಸೇತುವೆ ಹಾಗೂ ಕೆಳ ಸೇತುವೆಗಳ ಮೂಲಕ ಸಿಗ್ನಲ್‍ಫ್ರೀ ಕಾರಿಕಾಡಾರ್ ನಿರ್ಮಾಣವನ್ನು ಪ್ರಸ್ತಾಪಿಸಲಾಗಿದೆ.

ಬೆಂಗಳೂರು ನಗರದಲ್ಲಿ 42 ಮೇಲ್ಸೇತುವೆ ಮತ್ತು 28 ಕೆಳಸೇತುವೆಗಳಿದ್ದು ಈ ವರ್ಷದಲ್ಲಿ ಮತ್ತೆ ನಾಲ್ಕು ಮೇಲ್ಸೇತುವೆಗಳು ಮತ್ತು ನಾಲ್ಕು ಕೆಳಸೇತುವೆಗಳು ಸೇರ್ಪಡೆಯಾಗಬಹುದಾಗಿದ್ದು, ಪಾದಚಾರಿ ಸುರಂಗ ಮಾರ್ಗ ಸೇರಿದಂತೆ ಈ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ವಹಣಗೆ 20 ಕೋಟಿ ರೂಗಳನ್ನು ಮೀಸಲಿರಿಸಲಾಗಿದೆ.

ಬೆಂಗಳೂರಿನ ಸಂಚಾರ ದಟ ್ಟಣೆಯ ಹಾಗೂ ಜಂಕ್ಷನ್‍ಗಳಲ್ಲಿ ನಿಧಾನಗತಿಯ ಸಂಚಾರ ತೊಂದರೆಯನ್ನು ನಿವಾರಿಸಲು ಸಿಗ್ನಲ್… ರಹಿತ ಸಂಚಾರಿ ಕಾರಿಡಾರ್‍ಗಳನ್ನು ನಿರ್ಮಿಸುವ ಅಗತ್ಯವಿದೆ. ಈ ನಿಟಿ ್ಟನಲ್ಲಿ ಹಲವೆಡೆ ಮೇಲ್ಸೇತುವೆ, ಕೆಳಸೇತುವೆ ಯೋಜನೆಗಳನ್ನು 2023-24 ರಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು ಎಂದು ಬಜೆಟ್‍ನಲ್ಲಿ ತಿಳಿಸಲಾಗಿದೆ.

ಗೋಕುಲ ರಸ್ತೆಯ ಮತ್ತಿಕೆರೆ ತಿರುವಿನಲ್ಲಿ ಐ.ಐ.ಎಸ್.ಸಿ. ಒದಗಿಸುತ್ತಿರುವ ಭೂಮಿಯನ್ನು ಬಳಸಿಕೊಂಡು 40 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ಸೇತುವೆಯನ್ನು, ಜಾಲಹಳ್ಳಿಯ ಬಳಿಯ ಹೊರವರ್ತುಲ ರಸ್ತೆಯ ಪೈಪ್‍ಲೈನ್ ಜಂಕ್ಷನ್‍ನಲ್ಲಿ 40 ಕೋಟಿ ರೂಪಾಯಿ ವೆಚ್ಚದಲ್ಲಿ ಮೇಲ್ಸೇತುವೆ, ಮೇಖ್ರಿವೃತ್ತ ಕೆಳಸೇತುವೆ ಮೇಲ್ಭಾಗದಲ್ಲಿ ಜಯಮಹಲ್ ರಸ್ತೆಯಲ್ಲಿ 65 ಕೋಟಿ ರೂ ಗಳ ವೆಚ್ಚದಲ್ಲಿ ಮೇಲ್ಸೇತುವೆ, ಸದಾಶಿವನಗರ ಪೋಲಿಸ್ ಸ್ಟೇಷನ್ ವೃತ್ತದಲ್ಲಿ 40 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾವ ಮಾಡಲಾಗಿದೆ.

ಸಿದ್ದರಾಮಯ್ಯ ವಿಡಿಯೋ ವೈರಲ್, ರೊಚ್ಚಿಗೆದ್ದ ಬಿಜೆಪಿ

ಯಲಹಂಕ ರೈತ ಸಂತೆ ರಸ್ತೆಯ ಬಳಿಯಲ್ಲಿ ರಾಷ್ಟ್ರೀಯ ಹೆದಾ ್ದರಿಗೆ ಹೆಚ್ಚುವರಿಯಾಗಿ ಕೆಳಸೇತುವೆ ಮಾರ್ಗಗಳನ್ನು ರಚಿಸಲು ಎನ್.ಹೆಚ್.ಎ.ಐ. ಠೇವಣಿ ಕೊಡುಗೆಗಾಗಿ 25 ಕೋಟಿ ರೂ ಗಳನ್ನು ನೀಡಲು ನಿರ್ಧರಿಸಲಾಗಿದೆ.

ಜಂಕ್ಷನ್‍ಗಳಲ್ಲಿ ನಿಧಾನಗತಿಯ ಸಂಚಾರ ವೇಗವನ್ನು ಚುರುಕುಗೊಳಿಸಲು ಬೆಂಗಳೂರಿನ 75 ಪ್ರಮುಖ ಜಂಕ್ಷನ್‍ಗಳ ಅಭಿವೃದ್ದಿ ಹಾಗೂ ಅದೇ ರೀತಿಯಲ್ಲಿ 60 ಅಡಿ ಅಥವಾ ಅದಕ್ಕೂ ಕಡಿಮೆ ಇರುವ ಯಾವುದೇ ಜನ ಬಳಕೆಯ ಸಂಚಾರ ಸಂಚಾರ ದಟ ್ಟಣೆಯ ರಸ್ತೆಗಳ ಬಾಟಲ್‍ನೆಕ್ ಪರಿಸ್ಥಿತಿ ನಿವಾರಣೆಗೆ 150 ಕೋೀಟಿ ರೂಪಾಯಿ ಮೀಸಲಿಟ್ಟು ರಸ್ತೆ ಅಗಲೀಕರಣ ಹಾಗೂ ರಸ್ತೆ ಅಗಲದ ಸಮತೋಲನ ಕಾಪಾಡಿಕೊಳ್ಳಲು ಅನುವು ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.

ಹೊಸ ಯೋಜನೆಗಳ ಜೊತೆಗೆ ಈಗಾಗಲೇ ಕೈಗೆತ್ತಿಗೊಂಡಿರುವ 9 ಯೋಜನೆಗಳಿಗೆ 2023-24ನೇ ವರ್ಷದಲ್ಲಿ ಹೆಚ್ಚುವರಿ ಅನುದಾನ ಒದಗಿಸಲಾಗಿದೆ. ಅವುಗಳಲ್ಲಿ ತುಮಕೂರು ರಸ್ತೆಯಿಂದ ನಾಯಂಡಹಳಿ ್ಳ ಜಂಕ್ಷನ್ ವರೆಗೆ ಸಿಗ್ನಲ್ ಮುಕ್ತ ಕಾರಿಡಾರ್‍ಗಾಗಿ 70 ಕೋಟಿ ರೂ., ವೆಸ್ಟ್ ಆಫ್ ಕಾರ್ಡ್ ರಸ್ತೆಯಿಂದ ಕುರುಬರಹಳ್ಳಿ, ಮಹಾಲಕ್ಷ್ಮೀ ಲೇಔಟ್, ಆರ್.ಆರ್.ನಗರ ಹಾಗೂ ಮಾಗಡಿ ರಸ್ತೆಯವರೆಗಿನ ತಡೆರಹಿತ ಕಾರಿಡಾರ್‍ಗಾಗಿ 190 ಕೋಟಿ ರೂ., ಯಶವಂತಪುರ ರೈಲೆ ್ವ ನಿಲ್ದಾಣ ಬಳಿ ಕೆಳ ಸೇತುವೆಗಾಗಿ 125 ಕೋಟಿ ರೂ.,

ಬನ್ನೇರುಘಟ್ಟ ರಸ್ತೆಯ ಅಗಲೀಕರಣಕ್ಕೆ 70 ಕೋಟಿ ರೂ., ವಿಲ್ಸನ್ ಗಾರ್ಡನ್ ಮೇಲ್ಸೇತುವೆಯ ಗ್ರೇಡ್ ಸೆಪರೇಟರ್‍ಗೆ 85 ಕೋಟಿ ರೂಪಾಯಿ, ಯಲಹಕ ಮೇಲ್ಸೇತುವೆಯ ಗ್ರೇಡ್ ಸೆಪರೇಟರ್‍ಗೆ 60 ಕೋಟಿ ರೂಪಾಯಿ, ಹೂಡಿ ಜಂಕ್ಷನ್, ಐ.ಟಿ.ಪಿ.ಎಲ್ ಬಿಗ್-ಬಜಾರ್ ಜಂಕ್ಷನ್ ಹಾಗೂ ಹೂಪ್-ಫಾರಂ ಜಂಕ್ಷನ್‍ಗಳಲ್ಲಿನ ಮೇಲ್ಸೇತುವೆಗೆ 124 ಕೋಟಿ ರೂಪಾಯಿ,

ಮಿನರ್ವ್ ಜಂಕ್ಷನ್ ಗ್ರೇಡ್ ಸೆಪೆರೇಟರ್‍ಗೆ 137 ಕೋಟಿ ರೂಪಾಯಿ, ಹಳೆ ಮದರಾಸು ರÀಸ್ತೆಯ ಸುರಂಜನ್ ದಾಸ್ ಜಂಕ್ಷನ್‍ನಲ್ಲಿಯ ಮೇಲ್ಸೇತುವೆಗೆ 104 ಕೋಟಿ ರೂಪಾಯಿ ಸೇರಿ ಈ 9 ಕಾಮಗಾರಿಗಳಿಗೆ ಒಟ್ಟು 965 ಕೋಟಿ ರೂಪಾಯಿ ಒದಗಿಸಲಾಗುತ್ತಿದೆ. ಈ ಹಣದಲ್ಲಿ 770 ಕೋಟಿ ರೂ ಗಳನ್ನು ಕೆ.ಯು.ಐ.ಡಿ.ಎಫ್.ಸಿ.ಯಿಂದ ಸಾಲದ ರೂಪದಲ್ಲಿ ಪಡೆದು ಉಳಿದ 195 ಕೋಟಿ ರೂಪಾಯಿಗಳನ್ನು ಪಾಲಿಕೆಯಿಂದಲೇ ಭರಿಸಿ ಯೋಜನೆಗಳನ್ನು ಅನುಷಾ ್ಠನಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ಕಟ್ಟಣ ನಿರ್ಮಾಣ ಪರವಾನಗಿ ಸಂಪೂರ್ಣ ಗಣಕೀಕರಣ

ಬೈಯಪ್ಪನಹಳಿ ್ಳಯ ಸರ್.ಎಂ.ವಿಶ್ವೇಶ್ವರಯ್ಯ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು 345 ಕೋಟಿ ರೂಪಾಯಿ ವೆಚ್ಚದಲ್ಲಿ ಎಲಿವೇಟೆಡ್ ರೋಟರಿ ಫ್ಲೈ-ಓವರ್ ಹಾಗೂ ತಡೆರತ ಸಂಪÀರ್ಕ ಸೇತುವೆಯನ್ನು ನಿರ್ಮಿಸಲಾಗುವುದು. 110 ಹಳ್ಳಿಗಳಲ್ಲಿ ಬೆಂಗಳೂರು ಒಳಚರಂಡಿ ಮತ್ತು ಜಲ ಮಂಡಳಿಯಿಂದ ಅಗೆಯಲ್ಪಟ್ಟ ರಸ್ತೆಗಳ ಪುನರ್ ನಿರ್ಮಾಣಕ್ಕೆ 300 ಕೋಟಿ ರೂಗಳನ್ನು ನಿಗದಿಪಡಿಸಲಾಗಿದೆ. ಸಬ್-ಅರ್ಬನ್ ರೈಲ್ವೆಯೊಂದಿಗಿನ ಸಹಯೋಗದಲ್ಲಿ ಯಶವಂತಪುರ ರೈಲ್ವೆ ನಿಲಾ ್ದಣದಿಂದ ನ್ಯೂ-ಬಿ.ಇ.ಎಲ್ ರಸ್ತೆಯವರೆಗೆ ಇಂಟಿಗ್ರೇಟೆಡ್ ಮೇಲು ಸೇತುವೆ ನಿರ್ಮಾಣದಿಂದ ಯಶವಂತಪುರದಿಂದ ಮತ್ತಿಕೆರೆ ಹಾಗೂ ಸಂಜಯನಗರಕ್ಕೆ ನೇರ ಸಂಪರ್ಕ ಸಾಸಲು 2023-24ನೇ ವರ್ಷದಲ್ಲಿ 200 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.

2023-24ನೇ ಸಾಲಿನಲ್ಲಿ 1410 ಕೋಟಿ ರೂ ವೆಚ್ಚದಲ್ಲಿ 150 ಕಿಲೋ ಮೀಟರ್ ರಸ್ತೆಗೆ ವೈಟ್‍ಟಾಪಿಂಗ್ ಕಾಂಕಿಟ್ರೀಕರಣ ಮಾಡಲಾಗುವುದು. ಅದೇ ರೀತಿಯಲ್ಲಿ 350 ಕಿ.ಮೀ. ಅರ್ಟೀರಿಯಲ್ ಹಾಗೂ ಸಬ್ ಅರ್ಟೀರಿಯಲ್ ರಸ್ತೆಗಳ ಲೈಟ್-ಟೆಂಡರ್-ಶ್ಯೂರ್ ಮಾದರಿಯಲ್ಲಿನ ಸಮಗ್ರ ಅಭಿವೃದ್ದಿಗೆ 450 ಕೋಟಿ ರೂಪಾಯಿ ಮೀಸಲಿಡಲಾಗುವುದು ಎಂದು ತಿಳಿಸಲಾಗಿದೆ.

ಮಹಿಳೆಯರು, ಮಕ್ಕಳು ಸುರಕ್ಷಿತವಲ್ಲದಾಗ ಸಂಭ್ರಮ ಔಚಿತ್ಯವಲ್ಲ: ಕಿರಣ್ ರಿಜಿಜು

ಆರ್ಟೀರಿಯಲ್ ಮತ್ತು ಸಬ್ ಆರ್ಟೀರಿಯಲ್ ರಸ್ತೆಗಳ ನಿರ್ವಹಣೆ ಮತ್ತು ಟೆಂಡರ್ ಶ್ಯೂರ್ ಅಡಿಯಲ್ಲಿ ಮತ್ತು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣವಾಗಿರುವ ರಸ್ತೆಗಳ ನಿರ್ವಹಣೆಗೆ 20 ಕೋಟಿಗಳನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಲಾಗಿದೆ.

250 ಅವಳ ಶೌಚಾಲಯ:
ಬೆಂಗಳೂರಿನ ರಸ್ತೆಗಳಲ್ಲಿ ಪ್ರಯಾಣ ಮಾಡುವ ಹೆಂಗಸರ ಸೌಲಭ್ಯಕ್ಕೆಂದು 250 ಶೀ-ಟಾಯ್ಲೆಟ್‍ಗ¼ನ್ನು ನಿರ್ಮಾಣ ಮಾಡಲಾಗುವುದು. ಈ ಅವಳ ಸ್ಥಳಗ¼ Àಲ್ಲಿ ಶೌಚಾಲಯ, ಬಟ್ಟೆ ಬದಲಾಯಿಸುವಿಕೆಗೆ ಜಾಗ, ಕೈತೊಳೆಯುವ ಸೌಲಭ್ಯ, ಸ್ತನಪಾನಕ್ಕೆ ಸ್ಥಳ ಹಾಗೂ ಮೊಬೈಲ್ ಜಾರ್ಜಿಂಗ್ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಲಾಗಿದೆ.

bbmp, budget, flyovers, underbridges, Bengaluru, traffic,

Articles You Might Like

Share This Article