ಉದ್ಯೋಗಸ್ಥ ಮಹಿಳೆಯರು, ವೃದ್ಧರಿಗಾಗಿ ಬಿಬಿಎಂಪಿಯಿಂದ ವಸತಿ ಯೋಜನೆ

Social Share

ಬೆಂಗಳೂರು,ಫೆ.23- ಮಾರ್ಚ್ ಮೊದಲ ವಾರದಲ್ಲಿ ಮಂಡನೆಯಾಗಲಿರುವ ಬಿಬಿಎಂಪಿ ಬಜೆಟ್ ಮೂಲಕ ಜನಮನ ಗೆಲ್ಲುವ ಉದ್ದೇಶದಿಂದ ಈ ಬಾರಿ ಎರಡು ಹೊಸ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ಉದ್ಯೋಗದಲ್ಲಿರುವ ಮಹಿಳೆಯರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಸಾವಿತ್ರಿ ಬಾಯಿ ಪುಲೆ ಅವರ ಹೇಸರಿನ ಯೋಜನೆ ಹಾಗೂ ಆಶ್ರಯವಿಲ್ಲದ ಬೀದಿಯಲ್ಲಿರುವ ವೃದ್ಧರಿಗಾಗಿ ಶ್ರವಣ್‍ಕುಮಾರ್ ಹೆಸರಿನ ವಸತಿ ಯೋಜನೆ ಜಾರಿಯಾಗುವ ಸಾಧ್ಯತೆಗಳಿವೆ.

ರಾಜ್ಯ ಸರ್ಕಾರದ ಬಜೆಟ್ ನಂತರ ಜನರಲ್ಲಿ ಆಸಕ್ತಿ ಹುಟ್ಟುಹಾಕುವ ಬಜೆಟ್ ಅಂದ್ರೆ ಅದು ಬಿಬಿಎಂಪಿ ಬಜೆಟï. ಸಾವಿರಾರು ಕೋಟಿ ರೂ.ಗಳಲ್ಲಿ ಬಜೆಟ್ ಮಂಡನೆ ಆಗುವ ಬಿಬಿಎಂಪಿ ಬಜೆಟ್‍ನಲ್ಲಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.

ಬಸ್‍ನಲ್ಲಿ ಮಹಿಳೆಯ ಸೀಟ್ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ

ಈ ಬಾರಿ ಸರಿ ಸುಮಾರು 10 ಸಾವಿರ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಲು ತಯಾರಿ ನಡೆಸಲಾಗುತ್ತಿದೆ. ನಗರದಲ್ಲಿ ಭೀಕರ ಪ್ರವಾಹ, ಹದಗೆಟ್ಟ ರಸ್ತೆಗಳು ಮತ್ತು ನಾಗರಿಕ ಸೌಕರ್ಯಗಳ ಬಗ್ಗೆ ದೂರುಗಳು, ಸಂಚಾರ ದಟ್ಟಣೆ ಸಮಸ್ಯೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನಮನ ಗೆಲ್ಲುವಂತಹ ಬಜೆಟ್ ಮಂಡನೆಗೆ ಕಸರತ್ತು ನಡೆಸಲಾಗುತ್ತಿದೆ.

ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲು ಸಿದ್ಧತೆಗಳು ನಡೆದಿವೆ. ಈ ಬಜೆಟ್ ನಲ್ಲಿ ಬೆಂಗಳೂರಿಗೆ ಉದ್ಯೋಗ ಅರಿಸಿ ಬರುವ ಮಹಿಳೆಯರಿಗೆ ಹಾಗೂ ವಾಸಿಸಲು ಮನೆಯಿಲ್ಲದ ವೃದ್ಧರಿಗೆ ಈ ಬಾರಿ ಎರಡು ವಿಶೇಷ ಯೋಜನೆಗಳನ್ನ ಜಾರಿಗೆ ತರಲು ಬಿಬಿಎಂಪಿ ತೀರ್ಮಾನಿಸಿದೆ ಎನ್ನಲಾಗಿದೆ.

ಬೆಂಗಳೂರು : ಮಾರಕಾಸ್ತ್ರಗಳಿಂದ ಕೊಚ್ಚಿ ಕಾರ್ಪೆಂಟರ್ ಕೊಲೆ

ಸುಮಾರು ಹತ್ತು ಸಾವಿರ ಕೋಟಿ ರೂ. ಗಾತ್ರದ ಬಜೆಟ್ ಮಂಡನೆಗೆ ಹೊರಟಿರುವ ಬಿಬಿಎಂಪಿ ಗ್ರಾಮೀಣ ಪ್ರದೇಶದಿಂದ ಬೆಂಗಳೂರಿಗೆ ಸಾಕಷ್ಟು ಜನ ಮಹಿಳೆಯರು ಉದ್ಯೋಗ ಅರಿಸಿ ಬರ್ತಾರೆ. ಹೀಗೆ ಬರುವ ಮಹಿಳೆಯರಿಗೆ ವಾಸಿಸಲು ಸ್ಥಳವಕಾಶ ಇಲ್ಲದೆ ತೊಂದರೆ ಅನುಭವಿಸುತ್ತಿದ್ದು, ಅಂತಹ ಮಹಿಳೆಯರಿಗೆ ಆಶ್ರಯ ಒದಗಿಸಲು ಸಾವಿತ್ರಿ ಬಾಯಿ ಪುಲೆ ಅವರ ಹೆಸರಲ್ಲಿ ಸೂರು ಕಲ್ಪಿಸುವ ಯೋಜನೆ ಘೋಷಿಸಲು ನಿರ್ಧರಿಸಿದೆ.

ಇದರ ಜೊತೆಗೆ ಮನೆ ಕಳೆದುಕೊಂಡು ಆಶ್ರಯವಿಲ್ಲದೆ ಬೀದಿಯಲ್ಲಿರುವ ವೃದ್ಧರಿಗಾಗಿ ಶ್ರವಣಕುಮಾರ್ ಹೆಸರಲ್ಲಿ ಶ್ರವಣ ವಸತಿ ಎಂಬ ಯೋಜನೆ ಜಾರಿಗೆ ತರುವ ಚರ್ಚೆ ನಡೆದಿದೆ. ಇವೆರಡು ಯೋಜನೆಗಳು ಜಾರಿಗೆ ಬಂದರೆ ಅವು ಜನಮನ ಗೆಲ್ಲಲಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಧಾನಸಭಾ ಚನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಧಾನಿಯಾಗಿರುವ ಬೆಂಗಳೂರನಲ್ಲಿ ವಿಜಯ ಸಾಸುವುದು ಬಿಜೆಪಿಗೆ ಅತ್ಯಂತ ಮುಖ್ಯವಾಗಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಬಜೆಟ್‍ಗಳು ಮಂಡನೆಯಾಗಿದ್ದು, ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಇದೀಗ ಬಿಬಿಎಂಪಿ ಬಜೆಟ್ ನಲ್ಲೂ ಹಲವಾರು ಯೋಜನೆಗಳನ್ನು ಘೋಷಣೆ ಮಾಡುವ ಮೂಲಕ ಬೆಂಗಳೂರಿಗರ ಮನಗೆಲ್ಲಲು ಸಿದ್ಥತೆಗಳ ಆರಂಭಿಸಲಾಗಿದೆ.

ಕಳೆದ ವರ್ಷ ಕಾಡು ಪ್ರಾಣಿಗಳಿಂದ 41 ಮಂದಿ ಸಾವು

ಈ ಬಾರಿಯ ಬಿಬಿಎಂಪಿ ಬಜೆಟ್ ನಲ್ಲಿ ಶಿಕ್ಷಣ, ಆರೋಗ್ಯ ಮತ್ತು ಕಲ್ಯಾಣ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದ್ದು, ಈ ಮೂಲಕ ಆಸ್ತಿ ತೆರಿಗೆಯಲ್ಲಿ ಇಳಿಕೆ ಮಾಡಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಬಜೆಟ್ ಲೆಕ್ಕಾಚಾರ ಮುಗಿಸಿರುವ ಪಾಲಿಕೆ ಅಕಾರಿಗಳು, ಬಜೆಟ್ ಪಟ್ಟಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಲಿದ್ದಾರೆ. ಬಜೆಟ್ ಮಂಡನೆಗೆ ಅನುಮತಿ ಕೋರಿ ಸಿಎಂಗೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಅವರ ಒಪ್ಪಿಗೆ ದೊರೆತ ಕೂಡಲೇ ಬಿಬಿಎಂಪಿ ಬಜೆಟ್ ಮಂಡನೆಯಾಗಲಿದೆ.

BBMP, budget, Housing Scheme, Employed Women, Senior Citizens,

Articles You Might Like

Share This Article