ಬಿಬಿಎಂಪಿ ಮುಖ್ಯ ಆಯುಕ್ತರ ಎತ್ತಂಗಡಿ..?

Social Share

ಬೆಂಗಳೂರು, ನ.17- ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಕಾಂಗ್ರೆಸ್ ಮಾಡಿರುವ ಆರೋಪಕ್ಕೆ ಸಂಬಂಸಿದಂತೆ ಬಿಬಿಎಂಪಿ ಮುಖ್ಯ ಆಯುಕ್ತರನ್ನು ತುಷಾರ್ ಗಿರಿನಾಥ್ ಅವರನ್ನು ಎತ್ತಂಗಡಿ ಮಾಡಲು ಸರ್ಕಾರ ಮುಂದಾಗಿದೆ.

ಖಾಸಗಿ ಸಂಸ್ಥೆಯೊಂದಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ನೀಡಿ ಇಕ್ಕಟ್ಟಿಗೆ ಸಿಲುಕಿರುವ ಬಿಬಿಎಂಪಿ ಹಾಗೂ ಮುಜುಗಾರಕ್ಕೆ ಈಡಾಗಿರುವ ಸರ್ಕಾರ ಕೂಡಲೇ ಮುಖ್ಯ ಆಯುಕ್ತರನ್ನು ಎತ್ತಂಗಡಿ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಕೊಹ್ಲಿ ದಾಖಲೆ ಮುರಿಯಲು ಹೊರಟ ಸೂರ್ಯಕುಮಾರ್

ಈಗಾಗಲೇ ತುಷಾರ್ ಗಿರಿನಾಥ್ ಅವರನ್ನು ಮನೆಗೆ ಕರೆಸಿಕೊಂಡು ಇದರ ಬಗ್ಗೆ ವಿಚಾರಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಯಾವುದೇ ಸಂದರ್ಭದಲ್ಲಾದರೂ ಆಯುಕ್ತರ ತಲೆದಂಡವಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ.

#BBMP, #ChiefCommissioner, #Bengaluru, #Transfer,

Articles You Might Like

Share This Article