ಕರ್ತವ್ಯಲೋಪವೆಸಗಿದ ಅರಣ್ಯಾಧಿಕಾರಿಗೆ ಕೋಕ್

Social Share

ಬೆಂಗಳೂರು,ಅ.21-ಅಪಾಯದ ಸ್ಥಿತಿಯಲ್ಲಿರುವ ರಸ್ತೆ ಬದಿ ಮರಗಳ ಕೊಂಬೆಗಳನ್ನು ತೆರವುಗೊಳಿಸುವಲ್ಲಿ ವಿಫಲರಾದ ಯಲಹಂಕ ಉಪ ವಲಯ ಅರಣ್ಯಾಧಿಕಾರಿಯನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‍ಗಿರಿನಾಥ್ ಅವರು ಆದೇಶಿಸಿದರು.

ಹೈದ್ರಾಬಾದ್‍ನಲ್ಲಿ ಇಡಿ ದಾಳಿ, 150 ಕೋಟಿ ಆಸ್ತಿ ವಶ

ಯಲಹಂಕ ವಲಯದಲ್ಲಿ ಇಂದು ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾ ಸಂದರ್ಭದಲ್ಲಿ ಅವರು ರಸ್ತೆ ಬದಿ ಮರಗಳ ಕೊಂಬೆಗಳನ್ನು ತೆರವುಗೊಳಿಸದ ಉಪ ವಲಯ ಅರಣ್ಯಾಧಿಕಾರಿ ಆರ್.ಕೃಷ್ಣ ಅವರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸುವಂತೆ ಅನ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಅವರು ಯಲಹಂಕ ನ್ಯೂ ಟೌನ್ ಬಸ್ ನಿಲ್ದಾಣದ ಬಳಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿ ವ್ಯಾಪಾರ ಮಾಡುತ್ತಿರುವ ಬೀದಿ ಬದಿ ವ್ಯಾಪಾರಿಗಳನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ಸೂಚಿಸಿದರು.

ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಯಶಸ್ವಿಗೆ ಒಕ್ಕಲಿಗರ ಸಂಘ ಮನವಿ

ಸ್ಥಳೀಯ ಅಧಿಕಾರಿಗಳಿಗೆ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವ ವ್ಯಾಪಾರಿಗಳಿಗೆ ಬೇರೆ ಕಡೆ ಸ್ಥಳ ಗುರುತಿಸಿ ನೀಡುವಂತೆ ಸಲಹೆ ನೀಡಿದರು. ಎನ್‍ಇಎಸ್ ಬಸ್ ನಿಲ್ದಾಣದ 16ನೇ ಎ ಕ್ರಾಸ್ ಸರ್ವೀಸ್ ರಸ್ತೆ, ಶೇಷಾದ್ರಿಪುರಂ ಕಾಲೇಜು ರಸ್ತೆ, ಶರಾವತಿ ಹೋಟೆಲ್ ರಸ್ತೆ, ಯಲಹಂಕ ನ್ಯೂ ಟೌನ್ ಬಸ್ ನಿಲ್ದಾಣ, ಸಂದೀಪ್ ಉನ್ನಿಕೃಷ್ಣನ್ ಮುಖ್ಯ ರಸ್ತೆ ಹಾಗೂ ಅಟ್ಟೂರುವರೆಗೆ ಸುಮಾಡು 4.00 ಕಿ.ಮೀ ರಸ್ತೆಯನ್ನು ಆಯುಕ್ತರು ಇದೇ ಸಂದರ್ಭದಲ್ಲಿ ಪರಿಶೀಲನೆ ನಡೆಸಿದರು.

ಸಂದೀಪ್ ಉನ್ನಿಕೃಷ್ಣನ್ ಮುಖ್ಯ ರಸ್ತೆಯಲ್ಲಿರುವ ಮ್ಯಾನ್ ಓಲ್ ಗಳು ರಸ್ತೆ ಮಟ್ಟಕ್ಕಿಂತ ಮೇಲ್ಭಾಗದಲ್ಲಿದ್ದು, ಅದನ್ನು ಸರಿಪಡಿಸಲು ಸೂಚಿಸಿದರು. ರಸ್ತೆ ಬದಿಯ ಚರಂಡಿಗಳಲ್ಲಿ ಹೂಳನ್ನು ತೆರವುಗೊಳಿಸಲು 15 ಮೀಟರ್ ಗೆ ಒಂದು ಚೇಂಬರ್ ಮಾಡಿಕೊಂಡು, ಆಗಿಂದಾಗ್ಗೆ ಹೂಳನ್ನು ತೆಗೆದು ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಸೂಚನೆ ನೀಡಿದರು.

ರಸ್ತೆ ಬದಿ ಚರಂಡಿಗಳಿಗೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿರುವ ಕಡೆ ತ್ಯಾಜ್ಯ ಚರಂಡಿಗೆ ಹೋಗದಂತೆ ಗ್ರೇಟಿಂಗ್ ಗಳನ್ನು ಹಾಕಲು ಸೂಚನೆ ನೀಡಿದರು ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡಿರುವ ಕಡೆ ತೆರವು ಮಾಡಲು ಸೂಚನೆ, ಡಿ ಮಾರ್ಟ್ ಬಳಿ ರಸ್ತೆಯಲ್ಲೂ ನೀರು ಸೋರಿಕೆಯಾಗುತ್ತಿದ್ದು, ಅದನ್ನು ಪರಿಶೀಲಿಸಿ ಕೂಡಲೆ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು.

ಮದರ್ ಡೈರಿ ಪಕ್ಕದಲ್ಲಿರುವ ಪ್ರಿಸ್ಟೀಜ್ ಫ್ಲಾಜಾದಿಂದ ಪಾದಚಾರಿ ಮಾರ್ಗದಲ್ಲಿ ರ್ಯಾಂಪ್ ಹಾಕಿದ್ದು, ಅದರಿಂದ ಪಾದಚಾರಿಗಳ ಓಡಾಟಕ್ಕೆ ಸಮಸ್ಯೆಯಾಗಲ್ಲಿದೆ. ಆದ್ದರಿಂದ ಅದನ್ನು ಕೂಡಲೆ ತೆರವುಗೊಳಿಸಿ ಪಾದಚಾರಿ ಮಾರ್ಗವನ್ನು ಸರಿಪಡಿಸಲು ಸೂಚನೆ ನೀಡಿದರು. ಅಟ್ಟೂರು ಬಳಿ ನೇತಾಡುವ ಕೇಬಲ್ ಗಳನ್ನು ತೆರವುಗೊಳಿಸಲು ಆದೇಶಿಸಿದರು.

ಪೊಲೀಸ್ ನೇಮಕಾತಿಯಲ್ಲಿ ಅಕ್ರಮಕ್ಕೆ ಅವಕಾಶವಿಲ್ಲ : ಸಿಎಂ

ರಸ್ತೆ ಬದಿ ಕಟ್ಟಡ ನಿರ್ಮಾಣದ ವೇಳೆ ಪಾದಚಾರಿ ಮಾರ್ಗದಲ್ಲಿ ರ್ಯಾಂಪ್ ಮಾಡಿಕೊಳ್ಳದಂತೆ ಕಟ್ಟಡ ಮಾಲೀಕರಿಗೆ ಎಚ್ಚರಿಕೆ ನೀಡಲು ಅಕಾರಿಗಳಿಗೆ ಸೂಚನೆ ನೀಡಿದರು.

ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಅರ್. ವಿಶ್ವನಾಥ್,ï ವಲಯ ಆಯುಕ್ತ ರಂಗಪ್ಪ, ವಲಯ ಜಂಟಿ ಆಯುಕ್ತೆ ಪೂರ್ಣಿಮಾ, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ಯೋಜನಾ ವಿಭಾಗದ ಮುಖ್ಯ ಅಭಿಯಂತರ ಲೋಕೇಶï, ವಲಯ ಮುಖ್ಯ ಅಭಿಯಂತರ ರಂಗನಾಥ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Articles You Might Like

Share This Article