ಇಂದೂ ಮುಂದುವರೆದ ತುಷಾರ್ ಗಿರಿನಾಥ್ ಸಿಟಿ ರೌಂಡ್ಸ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯ ವ್ಯಾಪ್ತಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದು ಕಾಲ್ನಡಿಗೆಯ ಮೂಲಕ ಪರಿಶೀಲನೆ ನಡೆಸಿ ವಿವಿಧ ಸಮಸ್ಯೆಗಳನ್ನು ನಿವಾರಿ ಸಲು ಅಧಿಕಾರಿಗಳಿಗೆ ಆದೇಶಿಸಿದರು.
Social Share

ಬೆಂಗಳೂರು, ಅ.19- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯ ವ್ಯಾಪ್ತಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದು ಕಾಲ್ನಡಿಗೆಯ ಮೂಲಕ ಪರಿಶೀಲನೆ ನಡೆಸಿ ವಿವಿಧ ಸಮಸ್ಯೆಗಳನ್ನು ನಿವಾರಿ ಸಲು ಅಧಿಕಾರಿಗಳಿಗೆ ಆದೇಶಿಸಿದರು.

ತುಷಾರ್ ಗಿರಿನಾಥ್ ರವರು ಇಂದು ಬೆಳಗ್ಗೆ 6.30ರಿಂದ 9.30ರವರೆಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಸುಮಾರು 7ಕಿ.ಮೀ ರಷ್ಟು ವ್ಯಾಪ್ತಿ ಯಲ್ಲಿ ಕಾಲ್ನಡಿಗೆಯಲ್ಲೇ ಸಾಗಿದರು. ಮಿನರ್ವಾ ವೃತ್ತದಿಂದ ಡಾಯಾಗಲ್ ರಸ್ತೆ, ಸಜ್ಜನ್ ರಾವ್ ರಸ್ತೆ, ಕವಿ ಲಕ್ಷ್ಮೀಶ ರಸ್ತೆ, ನ್ಯಾಷನಲ್ ಕಾಲೇಜು ವೃತ್ತ, ಕೆ.ಆರ್.ರಸ್ತೆ, ನೆಟ್ಟಕಲ್ಲಪ್ಪ ವೃತ್ತ, ದೇವನ್ ಮಾದೇವ ರಸ್ತೆ, ಆರ್ಮುಗಂ ವೃತ್ತ, ಪಟಾಲಮ್ಮ ದೇವಸ್ಥಾನ ರಸ್ತೆ ಹಾಗೂ ಸೌತ್ ಎಂಡ್ ವೃತ್ತದವರೆಗೆ ಬಂದು ಅವ್ಯವಸ್ಥೆಗಳ ವೀಕ್ಷಣೆ ಮಾಡಿದರು.

ಮಿನರ್ವಾ ವೃತ್ತ ಪರಿಶೀಲನೆ: ಮಿನರ್ವಾ ವೃತ್ತದ ಪಾದಚಾರಿ ಮಾರ್ಗದಲ್ಲಿ ಕರ್ಬ್ ಸ್ಟೋನ್ ಕುಸಿದಿರುವುದನ್ನು ನೋಡಿ ಕೂಡಲೆ ಅದನ್ನು ಸರಿಪಡಿಸಲು ಹಾಗೂ ರಸ್ತೆ ಬದಿಯ ಮರದ ಕೊಂಬೆಗಳನ್ನು ರಾತ್ರಿ ವೇಳೆ ವಾಹನಗಳು ಸಂಚರಿಸದ ವೇಳೆ ಕಟಾವು ಮಾಡಿ ತೆರವುಗೊಳಿಸಲು ಸೂಚನೆ ನೀಡಿದರು. ಬೀದಿ ದೀಪಗಳ ದುರಸ್ತಿ ಸಂಬಂಧ ಪ್ರತಿನಿತ್ಯ ವರದಿ ನೀಡಲು ವಿದ್ಯುತ್ ವಿಭಾಗದ ಅೀಧಿಕ್ಷಕ ಅಭಿಯಂತರರಿಗೆ ಆದೇಶಿಸಿದ ಅವರು, ಪಾದಚಾರಿ ಮಾರ್ಗದಲ್ಲಿ ನಿಲ್ಲಿಸಿರುವ ದ್ವಿಚಕ್ರ ವಾಹನಗಳಿಗೆ ಸಂಬಂದಿಸಿದವರಿಗೆ ನೋಟೀಸ್ ನೀಡಿ ದಂಡ ವಿಧಿಸಬೇಕು. ಒತ್ತುವರಿ ಜಾಗ ತೆರವುಗೊಳಿಸಲು ಸೂಚನೆ ನೀಡಿದರು.

ಸಜ್ಜನ್‍ರಾವ್ ವೃತ್ತ ಪರಿಶೀಲನೆ: ಸಜ್ಜನ್‍ರಾವ್ ವೃತ್ತದ ಉದ್ಯಾನದ ಕಾಮಗಾರಿಯ ಸಾಮಗ್ರಿಯನ್ನು ಹಾಕಿರುವ ಪಾದಚಾರಿ ಮಾರ್ಗವ ನ್ನು ಕೂಡಲೆ ತೆರವುಗೊಳಿಸುವಂತೆ ಸೂಚಿಸಿದ ಅವರು, ಬಿಡಾಡಿ ದನ/ಹಸು ಗಳನ್ನು ರಸ್ತೆ ಮೇಲೆ ಬಿಟ್ಟರೆ ಪಶುಪಾಲನಾ ವಿಭಾಗದ ಅಧಿಕಾರಿಗಳು ಪಾಲಿಕೆ ವಶಕ್ಕೆ ಪಡೆದು ದಂಡ ವಿಧಿಸುವಂತೆ ಜಂಟಿ ಆಯುಕ್ತಕರಿಗೆ ಹೇಳಿದರು. ನಗರದ ಪ್ರತಿಷ್ಠಿತ ಸಜ್ಜನ್‍ರಾವ್ ವೃತ್ತವನ್ನು ಅಭಿವೃದ್ಧಿ ಪಡಿಸಲು ಆದೇಶಿಸಿ, ಕವಿ ಲಕ್ಷ್ಮೀಷ ರಸ್ತೆಯ ಎರಡೂ ಬದಿ ಪಾದಚಾರಿ ಮಾರ್ಗ ಲ್ಲಿ ನಡೆಯುತ್ತಿರುವ ಚರಂಡಿ ಅಭಿವೃದ್ಧಿ ಕಾಮಗಾರಿಗಳನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲು, ಪಾದಚಾರಿ ರಸ್ತೆಯ ಮೇಲ್ಭಾಗದಲ್ಲಿರುವ ವಿದ್ಯುತ್ ತಂತಿಯನ್ನು ನೆಲದಡಿ ಅಳವಡಿಸಲು ನಿರ್ದೇಶನ ನೀಡಿದರು.

ಜೈನ್‍ಟೆಂಪಲ್ ರಸ್ತೆ ಪರಿಶೀಲನೆ: ನ್ಯಾಷನಲ್ ಕಾಲೇಜು ವೃತ್ತದಿಂದ ಜೈನ್‍ಟೆಂಪಲ್ ರಸ್ತೆ ಬಳಿ ನೆಲದಡಿ ಒಎಫïಸಿ ಕೇಬಲ್ ಅಳವಡಿಸಲು ನಿರ್ಮಿಸಿರುವ ಚೇಂಬರ್ ಸ್ಥಳದಲ್ಲಿ ಪುನಶ್ಚೇತನ ಕಾರ್ಯ ಸಂಬಂಧಿಸಿ ದವರಿಂದಲೇ ಮಾಡಿಸಿ, ಅವರಿಂದ ದಂಡ ವಸೂಲಿ ಮಾಡಬೇಕು. ಇದೇ ರಸ್ತೆ ಯಲ್ಲಿ ಮ್ಯಾನ್‍ಹೋಲ್‍ನಿಂದ ರಸ್ತೆ ಮೇಲೆ ಹರಿಯುತ್ತಿರುವ ಸೀವೇಜ್ ನೀರಿನ ಸಮಸ್ಯೆ ಯನ್ನು ಕೂಡಲೆ ಬಗೆಹರಿಸಲು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅನಧಿಕೃತ ಶೆಡ್ ತೆರವು: ವಿವಿಪುರಂ ವಾರ್ಡ್‍ನ ಜೈನ್ ಟೆಂಪಲ್ ರಸ್ತೆಯ ಪಾದಚಾರಿ ಮಾರ್ಗ ಹಾಗೂ ರಸ್ತೆಗೆ ಹೊಂದಿಕೊಂಡಂತಿರುವ ಶೀಟಿನ ಶೆಡ್‍ನ್ನು ಜೆಸಿಬಿಯಿಂದ ಮೂಲಕ ಸ್ಥಳದಲ್ಲೇ ತೆರವುಗೊಳಿಸಲಾಯಿತು.
ನ್ಯಾಷನಲ್ ಕಾಲೇಜು ವೃತ್ತ ಮೆಟ್ರೋ ಫಿಲ್ಲರ್ ಬಳಿ ಕಸದ ಟ್ರಾನ್ಸï ಫರ್ ಸ್ಟೇಷನ್ ಇದ್ದು, ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಸ್ಥಳವನ್ನು ಶೀಟಿನಿಂದ ಮುಚ್ಚಿ ದುರ್ವಾಸನೆ ಬಾರದಂತೆ ಸ್ವಚ್ಛತೆ ಕಾಪಾಡಿಕೊಳ್ಳಲು ಹಾಗೂ ಪಾದಚಾರಿ ಮಾರ್ಗದಲ್ಲಿ ನಿರ್ಮಿಸಿದ ಮೆಟ್ಟಿಲುಗಳನ್ನು ತೆರವುಗೊಳಿಸಲು ಸೂಚಿಸಿದರು.

ಕೆಆರ್ ರಸ್ತೆ ಪರಿಶೀಲನೆ: ಕೆಆರ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಇಟ್ಟುಕೊಂಡಿರುವ ನರ್ಸರಿಯನ್ನು ಸಂಜೆಯೊಳಗೆ ತೆಗೆಸಬೇಕು, ಪೋಸ್ಟ್ ಆಫೀಸ್ ರಸ್ತೆಯಲ್ಲಿ ಜಲಮಂಡಳಿಯಿ ಮ್ಯಾನ್‍ಹೋಲ್ ಕಾಮಗಾರಿ ಮಾಡಿದ್ದು, ರಸ್ತೆ ಪುನಶ್ಚೇತನ ಕಾರ್ಯ ಬಾಕಿಯಿದೆ. ಕೂಡಲೆ ಪೂರ್ಣಗೊಳಿಸಲು, ಪೋಸ್ಟ್ ಆಫೀಸ್ ರಸ್ತೆ ಬಳಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿ ಕಾಂಪೌಂಡ್ ಗೋಡೆ ನಿರ್ಮಿಸಲು ಅಳವಡಿಸಿ ರುವ ಫಿಲ್ಲರ್ ತೆರವುಗೊಳಿಸಿ ಮಾಲೀಕರಿಗೆ ದಂಡ ವಿಸಲು ಸೂಚನೆ ನೀಡಿದರು.

ಟಾಗೂರ್ ವೃತ್ತ ಪರಿಶೀಲನೆ: ಬಿ.ಪಿ. ವಾಡಿಯಾ ರಸ್ತೆ ಬದಿಯ ಪಾದಚಾರಿ ಮಾರ್ಗ ಸಂಪೂರ್ಣ ಹಾಳಾಗಿದ್ದು, ದುರಸ್ತಿಗೆ ಹಾಗೂ ಬಸವನಗುಡಿ ಪೊಲೀಸ್ ಠಾಣೆ ಬಸ್ ನಿಲ್ದಾಣದ ಬಳಿಯ ಹಾಳಾಗಿರುವ ಕಸದ ಬಿನ್ ಬದಲಾಯಿಸಲು ಸೂಚನೆ ನೀಡಿದರು.

ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳ: ಸಚಿವ ಬಿ.ಸಿ ಪಾಟೀಲ್

ನೆಟ್ಟಕಲ್ಲಪ್ಪ ವೃತ್ತ (ಕೃಷ್ಣರಾವ್ ಪಾರ್ಕ್ ಮಾರ್ಗ): ರಸ್ತೆ ಬದಿಯ ಬೃಹತ್ ಮರದ ಬುಡ ತೆರವುಗೊಳಿಸದೆ ಬಿಟ್ಟಿರುವುದನ್ನು ತೆರವುಗೊಳಿಸಲು ಹಾಗೂ ಕೃಷ್ಣ ರಾವ್ ಪಾರ್ಕ್‍ನ ವಾಯು ವಿಹಾರ ಮಾರ್ಗದಲ್ಲಿ ಅಳವಡಿಸುತ್ತಿರುವ ಕರ್ಬ್ ಸ್ಟೋನ್ ಕಾಮಗಾರಿ ತ್ವರಿತವಾಗಿ ಮುಗಿಸಲು ಸೂಚನೆ ನೀಡಿದರು. ಅಲ್ಲದೆ, ಕೃಷ್ಣ ರಾವ್ ಪಾರ್ಕ್ ರಸ್ತೆಯನ್ನು ಬೀದಿ ಬದಿ ವ್ಯಾಪ್ಯಾರಿಗಳು ಸಂಪೂರ್ಣ ಒತ್ತುವರಿ ಮಾಡಿಕೊಂಡಿದ್ದು, ಅವರಿಗೆ ಬೇರ ಸ್ಥಳ ಗುರುತಿಸಿ ಪಾದಚಾರಿ ಮಾರ್ಗ ತೆರವಿಗೆ ಸೂಚಿಸಿದ ಅವರು ಹಾಳಾಗಿರುವ ಪಾದಚಾರಿ ರಸ್ತೆ ದುರಸ್ತಿಗೆ ಆದೇಶಿಸಿದರು.

ಸಿಎಂ ಜತೆ ಚರ್ಚಿಸಿ ಹಾಲಿನ ದರ ಏರಿಕೆಗೆ

ಆರ್ಮುಗಂ ವೃತ್ತ ಪರಿಶೀಲನೆ: ಆರ್ಮುಗಂ ವೃತ್ತದಲ್ಲಿ ನಿರ್ಮಾಣ ವಾಗುತ್ತಿರುವ ಬೃಹತ್ ಅಪಾರ್ಟ್ ಮೆಂಟ್‍ನ ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲಿ ಹಾಕಿದ್ದು, ಅದನ್ನು ಪಾಲಿಕೆ ವಶಕ್ಕೆ ಪಡೆಯಲು ಅಕಾರಿಗಳಿಗೆ ಸೂಚನೆ.
ಪಟ್ಟಾಲಮ್ಮ ದೇವಸ್ಥಾನ ರಸ್ತೆಯ ನೇತಾಡುವ ಕೇಬಲ್ ತೆರವುಗೊಳಿಸಲು,ಡ್ಯೂರೋಫ್ಲೆP್ಸïನಿಂದ ಪಾದಚಾರಿ ರಸ್ತೆ ಒತ್ತುವರಿ ಮಾಡಿ ಮುಚ್ಚಿರುವ ಚರಂಡಿಯನ್ನು ತೆರವುಗೊಳಿಸಿ ಸಮರ್ಪಕ ಪಾದಚಾರಿ ಮಾರ್ಗಕ್ಕೆ ನಿರ್ದೇಶನ ನೀಡಿದರು.

ಸೌತ್ ಎಂಡ್ ವೃತ್ತ ಪರಿಶೀಲನೆ: ಕಟ್ಟಡ ನಿರ್ಮಾಣ ಮಾಡುತ್ತಿರುವ ಸೌತ್ ಎಂಡ್ ವೃತ್ತದ ಬಳಿಯ ಪಾದಚಾರಿ ಮಾರ್ಗದಲ್ಲಿ ಹಾಕಿರುವ ಕಟ್ಟಡ ಸಾಮಗ್ರಿಗಳನ್ನು ಪಾಲಿಕೆ ವಶಕ್ಕೆ ಪಡೆಯಲು ಅಕಾರಿಗಳಿಗೆ ಸೂಚಿಸಿದರು.
ಸ್ಮಾರ್ಟ್ ಪಾರ್ಕಿಂಗ್ ಯೋಜನೆ ಜಾರಿಗೆ ಸೂಚನೆ: ನಗರದ ಎಂಟು ವಲಯಗಳÀಲ್ಲಿ ಸ್ಮಾರ್ಟ್‍ಪಾರ್ಕಿಂಗ್ ಯೋಜನೆಗೆ ಶೀರ್ಘ ಟೆಂಡರ್‍ಮಾಡಿ ಕಾರ್ಯರೂಪಕ್ಕೆ ತರಲು ಪ್ರಧಾನ ಅಭಿಯಂತರರು ಹಾಗೂ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಮುಖ್ಯ ಅಭಿಯಂತರರಾದ ಪ್ರಹ್ಲಾದ್ ರವರಿಗೆ ಸೂಚನೆ ನೀಡಿದರು.

ಈ ವೇಳೆ ಶಾಸಕ ಉದಯ್ ಬಿ. ಗರುಡಾಚಾರ್, ವಲಯ ಆಯುಕ್ತ ಜಯರಾಮ್ ರಾಯಪುರ, ವಲಯ ಜಂಟಿ ಆಯುಕ್ತ ಜಗದೀಶ್ ನಾಯ್ಕï, ಪ್ರಧಾನ ಅಭಿಯಂತರ ಪ್ರಹ್ಲಾದ್, ವಲಯ ಮುಖ್ಯ ಅಭಿಯಂತರ ಮೋಹನ್ ಕೃಷ್ಣಾ, ಯೋಜನಾ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್, ಪಾಲಿಕೆಯ ವಿದ್ಯುತ್, ಘನತ್ಯಾಜ್ಯ, ಆರೋಗ್ಯ, ಅರಣ್ಯ ವಿಭಾಗ, ಬೆಸ್ಕಾಂ, ಜಲಮಂಡಳಿ ಅಕಾರಿಗಳು ಉಪಸ್ಥಿತರಿದ್ದರು.

Articles You Might Like

Share This Article