ಅಧಿಕಾರಿಗಳ ಚಳಿ ಬಿಡಿಸಿದ ಬಿಬಿಎಂಪಿ ಆಯುಕ್ತರು

Social Share

ಬೆಂಗಳೂರು,ಅ.20- ಕಳೆದ ಮೂರು ದಿನಗಳಿಂದ ನಿರಂತರವಾಗಿ ಕಾಲ್ನಡಿಗೆ ಮೂಲಕ ಸಾರ್ವಜನಿಕರ ಸಮಸ್ಯೆ ಆಲಿಸುತ್ತಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಇಂದು ಸಮರ್ಪಕವಾಗಿ ಕೆಲಸ ಮಾಡದಿರುವ ಬಿಬಿಎಂಪಿ ಅಧಿಕಾರಿಗಳಿಗೆ ಚಳಿ ಬಿಡಿಸಿದರು.

ಮಹಾ ಮಳೆಗೆ ನಲುಗಿದ ಬೆಂಗಳೂರು, ಕೊಚ್ಚಿಹೋದ ವಾಹನಗಳು

ಇಂದು ರಾಜರಾಜೇಶ್ವರಿ ನಗರ ವಲಯದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ಸಂದರ್ಭದಲ್ಲಿ ನೂರಾರು ಸ್ಥಳೀಯರು ಆಯುಕ್ತರಿಗೆ ಸಮಸ್ಯೆಗಳ ಸರಮಾಲೆಯಲ್ಲೇ ಸ್ವಾಗತ ಕೋರಿದರು.
ಡ್ರೈನೇಜ್ ಸಿಸ್ಟಮ್ ಚೆನ್ನಾಗಿಲ್ಲ ತುಂಬಾ ನೀರು ಬರುತ್ತೆ ಮಳೆ ಬಂದ್ರೆ ನಮಗೆ ತುಂಬಾ ಕಷ್ಟ ಆಗ್ತಿದೆ ಸರ್ ಎಂಬ ಜನರ ಸಮಸ್ಯೆ ಕೇಳುತ್ತಿದ್ದಂತೆ ಆಯುಕ್ತರು ಜತೆಯಲ್ಲೇ ಇದ್ದ ವಿಶೇಷ ಆಯುಕ್ತರು ಹಾಗೂ ಚೀಫ್ ಎಂಜಿನಿಯರ್‍ಗೆ ಕ್ಲಾಸ್ ತೆಗೆದುಕೊಂಡರು.

ನಾಳೆ ಭಾರತ್ ಜೋಡೋ ಯಾತ್ರೆ ರಾಯಚೂರಿಗೆ : ಪ್ರಿಯಾಂಕ ಭಾಗಿ..?

ಆರಂಭದಲ್ಲಿಯೇ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೆ ರಸ್ತೆಗುಂಡಿ ದರ್ಶನವಾಯಿತು. ಹಾಳಾದ ಗುಂಡಿ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುಂಡಿ ಮುಚ್ಚಕ್ಕೆ ಟೆಂಡರ್ ತಗೋಂತೀರಾ, ಇಲ್ಲಿ ನೋಡಿದರೆ ಬರಿ ಗುಂಡಿಗಳು, ಪ್ರಾಜೆಕ್ಟ ಕೈಗೆತ್ತಿಕೊಳ್ಳುವುದು ನಿಮ್ಮ ಹಣೆಬರಹ ಕೆಲಸ ಸರಿಯಾಗಿ ಮಾಡ್ರಿ ಸಂಜೆ ಒಳಗೆ ರಸ್ತೆ ಗುಂಡಿ ಮುಚ್ಚದಿದ್ದರೆ ಸಸ್ಪೆಂಡ್ ಮಾಡುತ್ತೇನೆ ಎಂದು ಕಾರ್ಯಪಾಲಕ ಅಭಿಯಂತರ ಬಾಲಾಜಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಆರ್.ಅರ್‍ನಗರದಲ್ಲಿ ನೂತನ ಮನೆ ನಿರ್ಮಾಣಕ್ಕಾಗಿ ಮೋರಿ ಮೇಲೆ ನಿರ್ಮಿಸಿದ್ದ ತಾತ್ಕಾಲಿಕ ಶೆಡ್‍ಅನ್ನು ಆಯುಕ್ತರು ಸ್ಥಳದಲ್ಲೇ ನೆಲಸಮಗೊಳಿಸಲು ಆದೇಶಿಸಿದರು. ಪುಟ್ ಪಾತ್ ಅಡ್ಡವಾಗಿದ್ದ ಜಾಹಿರಾತು ಬೋರ್ಡ್ ಅನ್ನು ಸ್ವತಃ ಆಯುಕ್ತರೇ ತೆರವುಗೊಳಿಸಿದ ನಂತರ ಮಾತನಾಡಿದ ಅವರು, ಅವೈಜ್ಞಾನಿಕ ಕಾಮಗಾರಿಗಳು ನನ್ನ ಗಮನಕ್ಕೆ ಬಂದಿದೆ, ಕಳಪೆ ಕಾಮಗಾರಿ ನಿರ್ವಹಣೆ ಮಾಡಿರುವ ಅಧಿಕಾರಿಗಳಿಗೆ ವಾರ್ನಿಂಗ್ ನೀಡಿದ್ದೇನೆ, ಈ ಕೂಡಲೇ ಪುಟ್‍ಪಾತ್ ಒತ್ತುವರಿ ತೆರವಿಗೆ ಸೂಚಿಸಿದ್ದೇನೆ ಎಂದರು.

ಬೊಮ್ಮನಹಳ್ಳಿ, ಶಿವಾಜಿನಗರ, ಎಚ್‍ಎಸ್‍ಆರ್ ಲೇಔಟ್ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಮಳೆಯಿಂದ ಆಗಿರುವ ಅನಾಹುತಗಳಿಗೆ ಸೂಕ್ತವಾಗಿ ಸ್ಪಂದಿಸಿ ಎಂದು ಅಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ಹೇಳಿದರು.

Articles You Might Like

Share This Article