“ರಸ್ತೆಗುಂಡಿ ಮುಚ್ಚಲು 2 ದಿನ ಸಮಯ ಕೊಡಿ ಸಾಕು”

Social Share

ಬೆಂಗಳೂರು, ನ.15- ನಗರದಲ್ಲಿನ ರಸ್ತೆಗುಂಡಿ ಮುಚ್ಚಲು ಕೇವಲ ಎರಡು ದಿನಗಳ ಸಮಯ ಕೊಡಿ ಸಾಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನ.19ರೊಳಗೆ ರಸ್ತೆ ಗುಂಡಿ ಮುಚ್ಚುವ ಗುರಿ ತಲುಪಲಾಗು ವುದು.

ಕಳೆದ ನಾಲ್ಕೈದು ದಿನಗಳಿಂದ ಹವಾಮಾನ ವೈಪರೀತ್ಯದಿಂದಾಗಿ ಮಳೆಯಾಗುತ್ತಿ ರುವ ಕಾರಣ ನಾವು ನೀಡಿದ್ದ ಗಡುವು ಗುರಿ ತಲುಪಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.

ಮೇ ತಿಂಗಳಿನಿಂದ ಇದುವರೆಗೂ ನಗರ ವ್ಯಾಪ್ತಿಯಲ್ಲಿ 33 ಸಾವಿರ ಗುಂಡಿಗಳನ್ನು ಗುರುತಿಸಲಾಗಿದೆ. ಅದರಲ್ಲೂ 32 ಸಾವಿರ ರಸ್ತೆ ಗುಂಡಿಗಳನ್ನು ಮುಚ್ಚಿದ್ದು, ಬರೀ ಒಂದು ಸಾವಿರ ರಸ್ತೆ ಗುಂಡಿಗಳು ಮಾತ್ರ ಉಳಿದಿವೆ. ಹೀಗಾಗಿ ಎರಡು ದಿನಗಳ ಕಾಲ ಸಮಯ ಸಿಕ್ಕರೆ ಎಲ್ಲವನ್ನೂ ಮುಚ್ಚಲಾಗುವುದು ಎಂದು ಹೇಳಿದರು.

ಶ್ರದ್ದಾ ವಿಕೃತ ಹತ್ಯೆ ಹಿಂದೆ ಲವ್ ಜಿಹಾದ್ ಶಂಕೆ, ಗಲ್ಲು ಶಿಕ್ಷೆಗೆ ಒತ್ತಾಯ

ಬರೀ ಸಣ್ಣ ಪುಟ್ಟ ರಸ್ತೆ ಗುಂಡಿಗಳು ಮಾತ್ರ ಕಂಡು ಬರುತ್ತಿದ್ದು, ಇದನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ದೂರುಗಳನ್ನು ನೀಡುತ್ತಾರೆ. ಇನ್ನು ಶೀಘ್ರದಲ್ಲಿಯೇ ರಸ್ತೆ ಗುಂಡಿ ಮುಕ್ತ ವಲಯ ಎಂದೂ ಘೋಷಿಸಲು ತಯಾರಿ ನಡೆಸಿ ದ್ದೇವೆ ಎಂದು ಅವರು ನುಡಿದರು.

ರಾಜಾಜಿನಗರದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ದೃಶ್ಯಾವಳಿ ಗಮನಿಸಿದ್ದು, ಇದಕ್ಕೆ ರಸ್ತೆ ಗುಂಡಿ ಕಾರಣವಲ್ಲ. ಇದನ್ನು ಸಂಬಂಸಿದ ಇಲಾಖೆಗಳು ಗಮನಿಸಲಿವೆ. ಈ ಹಿಂದಿನ ಪ್ರಕರಣಗಳಿಗೆ ಸಂಬಂಸಿದಂತೆ ಪೊಲೀಸರು ತನಿಖಾ ವರದಿ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ರಿಷಿ ಸುನಕ್‍ ಮತ್ತು ಮೋದಿ ಮೊದಲ ಭೇಟಿ

ಫ್ಲಕ್ಸ್, ಬ್ಯಾನರ್ ಬಳಕೆ ಕುರಿತು ಮಾತನಾಡಿದ ಅವರು, ಕಾನೂನು ಬಾಹಿರವಾಗಿ ಬ್ಯಾನರ್ ಅಳವಡಿಕೆ ಮಾಡಿದರೆ, ಆಯಾ ವಲಯ ವ್ಯಾಪ್ತಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸೂಚಿಸಲಾಗಿದೆ. ಜೊತೆಗೆ, ಸಾರ್ವಜನಿಕರು ಸಹ ಇದನ್ನು ವಿರೋಧಿಸಿ ಬುದ್ಧಿವಾದ ಹೇಳಬೇಕು ಎಂದರು.

Articles You Might Like

Share This Article