Saturday, September 23, 2023
Homeಇದೀಗ ಬಂದ ಸುದ್ದಿಐದು ದಿನಗಳಲ್ಲಿ ಬಿಲ್ ಬಿಡುಗಡೆ ಮಾಡದಿದ್ದರೆ ಕಾಮಗಾರಿ ಬಂದ್

ಐದು ದಿನಗಳಲ್ಲಿ ಬಿಲ್ ಬಿಡುಗಡೆ ಮಾಡದಿದ್ದರೆ ಕಾಮಗಾರಿ ಬಂದ್

- Advertisement -

ಬೆಂಗಳೂರು,ಜೂ.1- ಇನ್ನು ಐದು ದಿನಗಳ ಒಳಗೆ ಬಾಕಿ ಇರುವ ಬಿಲ್ ಬಿಡುಗಡೆ ಮಾಡಬೇಕು ಇಲ್ಲದಿದ್ದರೆ, ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಾಗಿ ನೂತನ ಸರ್ಕಾರಕ್ಕೆ ಗುತ್ತಿಗೆದಾರರು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಸರ್ಕಾರ ಜನರಿಗೆ ನೀಡಿರುವ ಆಶ್ವಾಸನೆಯಂತೆ ಐದು ಗ್ಯಾರಂಟಿಗಳ ಜಾರಿಗೆ ತಯಾರಿ ನಡೆಸಿದೆ. ಹೀಗಾಗಿ ನಮಗೆ ಬರಬೇಕಾಗಿರುವ ಬಾಕಿ ಬಿಲ್ ಬಿಡುಗಡೆಗೆ ಸರ್ಕಾರ ಮೀನಾಮೇಷ ಎಣಿಸುವ ಸಾಧ್ಯತೆ ಇದೆ ಎಂಬ ಸುಳಿವರಿತಿರುವ ಗುತ್ತಿಗೆದಾರರ ಸಂಘ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಪಟ್ಟು ಹಿಡಿದಿದೆ.

- Advertisement -

ಕಳೆದ ಹಲವಾರು ವರ್ಷಗಳಿಂದ ನಮ್ಮ ಬಿಲ್ ಬಿಡುಗಡೆಯಾಗಿಲ್ಲ. ಇದುವರೆಗೂ ಸರಿಸುಮಾರು 2500ಕೋಟಿ ರೂ.ಗಳ ಬಿಲ್ ಬಾಕಿಯಿದೆ. ಗ್ಯಾರಂಟಿ ಯೋಜನೆ ಹೆಸರಲ್ಲಿ ನಮ್ಮ ಬಾಕಿ ಬಿಲ್ ಕ್ಲೀಯರ್ ಮಾಡದೇ ಇದ್ರೆ ಪಾಲಿಕೆ ವ್ಯಾಪ್ತಿಯ ಎಲ್ಲ ಕಾಮಗಾರಿ ಸ್ಥಗಿತಗೊಳಿಸಬೇಕಾಗುತ್ತದೆ ಎಂದು ಗುತ್ತಿಗೆದಾರರು ಎಚ್ಚರಿಸಿದ್ದಾರೆ.

ಮಳೆಗಾಲ ಸಮೀಪಿಸುತ್ತಿರುವ ಸಮಯದಲ್ಲೇ ರಾಜಕಾಲುವೆಯ ಹೂಳು ತೆಗೆಯುವುದು ಸೇರಿದಂತೆ ಎಲ್ಲಾ ರೀತಿಯ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು ಹೀಗಾಗಿ ನಮ್ಮ ಬಾಕಿ ಬಿಲ್ ಬಿಡುಗಡೆ ಮಾಡಿ ಎಂದು ಬಿಬಿಎಂಪಿ ಅಧಿಕಾರಿಗಳನ್ನು ಗುತ್ತಿಗೆದಾರರು ಒತ್ತಾಯಿಸಿದ್ದಾರೆ.

ಗ್ಯಾರಂಟಿ ಚಿಂತೆಯಲ್ಲಿ ಸಿಎಂ ಸಿದ್ದರಾಮಯ್ಯ: 15ಕ್ಕೂ ಹೆಚ್ಚು ಸಭೆ

ಕಳೆದ ಮೂರು ವರ್ಷಗಳಿಂದ ಸುಮಾರು ಎರಡುವರೆ ಸಾವಿರ ಕೋಟಿ ಬಾಕಿ ಬಿಲ್ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿರಲಿಲ್ಲ. ಸದ್ಯ ಪಾಲಿಕೆ 2400 ಕೋಟಿಗೂ ಅಧಿಕ ಬಾಕಿ ಬಿಲ್ ಕ್ಲೀಯರ್ ಮಾಡಬೇಕಿದೆ.

ಮತ್ತೋಂದು ಕಡೆ ಸರ್ಕಾರ ಜನರಿಗೆ ನೀಡಿರೋ ಗ್ಯಾರಂಟಿ ಯೋಜನೆ ಜಾರಿ ಮಾಡಬೇಕಿದೆ,, ಸರ್ಕಾರದ ಖಜಾನೆ ಖಾಲಿಯಾದ್ರೆ ಕಾಮಗಾರಿಯ ಬಾಕಿ ಕ್ಲಿಯರ್ ಆಗುತ್ತೋ ಇಲ್ವೊ ಅನ್ನೋ ಆತಂಕ ಗುತ್ತಿಗೆದಾರರಲ್ಲಿ ಮನೆ ಮಾಡಿದೆ.

ಹೀಗಾಗಿ ಪಾಲಿಕೆಗೆ ಜೂನ್ 5 ರೊಳಗೆ ಹಣ ಕ್ಲೀಯರ್ ಮಾಡದೇ ಇದ್ರೆ ಜೂನ್ 6 ರಿಂದ ಬೆಂಗಳೂರು ವ್ಯಾಪ್ತಿಯಲ್ಲಿ ಎಲ್ಲ ಕಾಮಗಾರಿ ಸ್ಥಗಿತಗೊಳಿಸಲಾಗುವುದು ಎಂದು ಗುತ್ತಿಗೆದಾರರು ಬಿಬಿಎಂಪಿ ಮುಖ್ಯ ಆಯಕ್ತ ತುಷಾರ್ ಗಿರಿನಾಥ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಮೇಕೆದಾಟು: ತಮಿಳುನಾಡಿಗೆ ತಿರುಗೇಟು ಕೊಟ್ಟ ಡಿಸಿಎಂ ಡಿಕೆಶಿ

2021 ರ ಮೇ ವೇಳೆಗೆ ಬಿಬಿಎಂಪಿ ಅನುದಾನದಲ್ಲಿ ಕೈಗೊಂಡ ಪೂರ್ಣಗೊಳಿಸಿದ ಕಾಮಗಾರಿಯ ಬಾಕಿ ಬಿಲ್ ಪಾವತಿ ಮಾಡಿಲ್ಲ.,, ಬಿಲ್‍ಗಾಗಿ ವರ್ಷಗಟ್ಲೆ ಕಾಯಬೇಕಾದ ಸ್ಥಿತಿ ಇದೆ.,, ಇದರಿಂದ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.ಇನ್ನೂ ,,ಕಳೆದ ಮೇ 6 ರಂದು ಸರ್ಕಾರದಿಂದ ಬಿಬಿಎಂಪಿಗೆ 675 ಕೋಟಿ ರು. ಹಣ ಬಿಡುಗಡೆ ಆಗಿದೆ. ಆದರೂ ನಮ್ಮ ಬಾಕಿ ಬಿಲ್ ತಡೆ ಹಿಡಿಯಲಾಗಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.

BBMP, Contractors, pending, bill,

- Advertisement -
RELATED ARTICLES
- Advertisment -

Most Popular