ಬೆಂಗಳೂರು, ಫೆ.14- ಬಾಕಿ ಇರುವ 200 ಕೋಟಿ ಹಣವನ್ನು ಶೀಘ್ರ ಬಿಡುಗಡೆ ಮಾಡದಿದ್ದರೆ ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಲಾಗುವುದು ಎಂದು ಬಿಬಿಎಂಪಿ ಗುತ್ತಿಗೆದಾರರ ಒಕ್ಕೂಟ ಎಚ್ಚರಿಸಿದೆ.
ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿಂದು ಹಣ ಬಿಡುಗಡೆಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ ಗುತ್ತಿಗೆದಾರರು ಪಾಲಿಕೆ ಅಕಾರಿಗಳಿಗೆ ಎರಡು ದಿನ ಕಾಲಾವಕಾಶ ನೀಡಲಾಗುವುದು. ಹಣ ಬಿಡುಗಡೆ ಮಾಡದಿದ್ದರೆ ರಾಷ್ಟ್ರಪತಿಗಳಿಗೆ ದಯಾಮರಣ ಅರ್ಜಿ ಸಲ್ಲಿಸಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ.
ಕೆಆರ್‍ಐಡಿಎಲ್ ಸಂಸ್ಥೆಯಿಂದ ಗುತ್ತಿಗೆ ಪಡೆದು ಕಾಮಗಾರಿ ಪೂರ್ಣಗೊಂಡು ಮೂರು ವರ್ಷ ಕಳೆದರೂ ಹಣ ಬಿಡುಗಡೆ ಮಾಡದೆ ಇರುವುದರಿಂದ ಗುತ್ತಿಗೆದಾರರು ಸಾಲದ ಹಣಕ್ಕೆ ಬಡ್ಡಿ ಕಟ್ಟಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದೊದಗಿದೆ. ಕೂಡಲೇ ಹಣ ಬಿಡುಗಡೆ ಮಾಡುವಂತೆ ಗುತ್ತಿಗೆದಾರರ ಒಕ್ಕೂಟದಿಂದ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ.
ಪಾಲಿಕೆ ವ್ಯಾಪ್ತಿಯ ಕಾಮಗಾರಿ ಇಲಾಖೆಯ ವಿವಿಧ ಶೀರ್ಷಿಕೆಯಡಿ ಕಾಮಗಾರಿಗಳನ್ನು ಕರ್ನಾಟಕ ರೂರಲ್ ಇನ್ರಾಸ್ಟ್ರಕ್ಚರ್ ಡೆವಲ್‍ಮೆಂಟ್ ಲಿಮಿಟೆಡ್ (ಕೆಆರ್‍ಐಡಿಎಲ್) ಇಂದಿನ ಕೆಎಲ್‍ಸಿ ಸಂಸ್ಥೆ ಮೂಲಕ ಕಾಮಗಾರಿಗಳನ್ನು ನಿರ್ವಹಿಸಲು ಅನುಮೋದಿಸಿದ್ದು, ಅದರಂತೆ ಕೆಆರ್‍ಡಿಎಲ್ ಸಂಸ್ಥೆಯಿಂದ ಕಾಮಗಾರಿ ನಿರ್ವಹಿಸಲು ವಾರ್ಡ್‍ಮಟ್ಟದ ಸ್ಥಾಯಿಸಮಿತಿ ಅನುಮೋದನೆ ಹಾಗೂ ಸಕ್ಷಮ ಪ್ರಾಕಾರದ ಅನುಮೋದನೆ ದೊರೆತ ನಂತರ ಕರಾರು ಒಪ್ಪಂದ ಮಾಡಿಕೊಂಡು ಕಾರ್ಯಾದೇಶ ಪಡೆಯಲಾಗಿದೆ.
ಕಾಮಗಾರಿ ಪೂರ್ಣಗೊಳಿಸಿ ಗುಣಮಟ್ಟದ ಪರೀಕ್ಷೆಗೊಳಪಡಿಸಿ ವಿಭಾಗ ಕಚೇರಿಯಲ್ಲಿ ಆನ್‍ಲೈನ್ ಮೂಲಕ ಬಿಆರ್ ನಮೂದಿಸಲಾಗಿರುತ್ತದೆ ಹಾಗೂ ಟಿವಿಸಿಸಿ ವಿಭಾಗದಿಂದ ಕಡತಗಳ ಕಾಮಗಾರಿಯ ಸ್ಥಳ ಪರೀಕ್ಷೆ ಮುಗಿದಿದ್ದು, ಕಾಮಗಾರಿಯ ಬಿಲ್ಲಿನ ಮೊತ್ತ ಪಾವತಿ ಬಾಕಿ ಇರುತ್ತದೆ.
ಆದರೆ, ಕೆಲ ತಾಂತ್ರಿಕ ತೊಂದರೆಗಳಿಂದ ಬಿಲ್‍ಗಳ ಪಾವತಿ ಸಾಧ್ಯವಿಲ್ಲ ಎಂದು ಅಕಾರಿಗಳು ತಿಳಿಸಿದ್ದು, ಇದರಿಂದ ಗುತ್ತಿಗೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸಮರ್ಪಕವಾಗಿ ಕೆಲಸ ಮಾಡಿದ್ದು, ತಕ್ಷಣ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಗುತ್ತಿಗೆದಾರರ ಒಕ್ಕೂಟದ ಪ್ರತಾಪ್, ನವೀನ್,ಅರವಿಂದ್, ಪ್ರಸನ್ನ, ನಾಗರಾಜು, ತಿಮ್ಮನಂಜಯ್ಯ, ಪುರುಷೋತ್ತಮ, ಆನಿಲï, ಗಿರೀಶ್, ಅಶ್ವಥ್ ನಾಯಕ್, ಪರಿಸರ ರಾಮಕೃಷ್ಣ, ಗುತ್ತಿಗೆದಾರರು ಪಾಲ್ಗೊಂಡಿದ್ದರು.
#BBMP, #ContractorsUnion, #Protest,