ಬೆಂಗಳೂರು, ಫೆ.10- ಬಿಬಿಎಂಪಿ ವಿರುದ್ಧ ಮತ್ತೊಂದು ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ ಕೇಳಿಬಂದಿದ್ದು, ಏಳು ಮಂದಿ ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ ಜಾರಿ ಮಾಡಿದೆ.
ಆರೋಪವೇನು? ಕಸ ವಿಲೇವಾರಿ ಟೆಂಡರ್‍ನಲ್ಲಿ ಬರೋಬ್ಬರಿ 222.29 ಕೋಟಿ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ಕಳೆದ 2022 ಸೆಪ್ಟೆಂಬರ್‍ನಲ್ಲಿ ನಡೆದಿದ್ದ ಟೆಂಡರ್ ಮೇಲೆ ಆರೋಪಗಳಿವೆ.
45 ಕೋಟಿ ರೂ.ನಲ್ಲಿ ಆಗುವ ಕೆಲಸಕ್ಕೆ ತಾಂತ್ರಿಕ ಅರ್ಹತೆ ಇಲ್ಲದ ಕಂಪೆನಿಗಳಿಗೆ 267 ಕೋಟಿ ರೂ. ಟೆಂಡರ್ ಕೊಡಲಾಗಿದೆ. ಪರಿಶುದ್ಧ ವೆಂಚರ್ಸ್ ಎಂಬ ಕಂಪೆನಿಗೆ ಟೆಕ್ನಿಕಲ್ ಗೈಡ್‍ಲೈನ್ಸ್‍ನ ಕಮಿಟಿ ಮುಂದೆ ಮಂಡಿಸದೆ ಟೆಂಡರ್‍ಗೆ ಅನುಮತಿ ನೀಡಲಾಗಿದೆ.
ನಾಳೆ ಮಧ್ಯರಾತ್ರಿ 12 ಗಂಟೆವರೆಗೆ ಮಾತ್ರ ಟ್ರಾಫಿಕ್ ದಂಡ ಪಾವತಿಗೆ ಅವಕಾಶ
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿಯನ್ನು ಸಹ ಪಡೆಯದೆ ಟೆಂಡರ್ ನೀಡಲಾಗಿದೆ ಎಂಬ ಆರೋಪಗಳು ಎದುರಾಗಿವೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಅೀಧಿನ ಕಾರ್ಯದರ್ಶಿ ರಾಕೇಶ್‍ಸಿಂಗ್, ಘನತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತ ಹರೀಶ್‍ನಾಯಕ್, ಅೀಧಿಕ್ಷಕ ಅಭಿಯಂತರ ಬಸವರಾಜ್ ಆರ್.ಕಬಾಡೆ, ಕಾರ್ಯಪಾಲಕ ಅಭಿಯಂತರ ಪ್ರವೀಣ್ ಲಿಂಗಯ್ಯ ಸೇರಿದಂತೆ ಏಳು ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಕಾನೂನು ರೀತಿಯ ಟೆಂಡರ್ ಪ್ರಕ್ರಿಯೆ ಸಮರ್ಪಕವಾಗಿ ನಿರ್ವಹಿಸದೆ ಲೋಪವೆಸಗಿದ್ದು, ಭ್ರಷ್ಟಾಚಾರದ ಉದ್ದೇಶದಿಂದಲೇ ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಲು ನೋಟಿಸ್ ನೀಡಿ 15 ದಿನಗಳ ಕಾಲ ಸಮಯಾವಕಾಶ ನೀಡಿರುವುದು ಸಂಶಯ ಮೂಡಿಸಿದೆ.
BIG NEWS : ಜಮ್ಮು ಮತ್ತು ಕಾಶ್ಮೀರದಲ್ಲಿ ಲಿಥಿಯಂ ನಿಕ್ಷೇಪ ಪತ್ತೆ
ಲೋಕಾಯುಕ್ತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಎಫ್‍ಐಆರ್ ದಾಖಲಿಸದೆ ಕೇವಲ ನೋಟಿಸ್ ನೀಡಿದೆ. ಇದನ್ನು ಗಂಭೀರವಾಗಿ ಪರಿಗಣಿಸದೆ ಇದ್ದಲ್ಲಿ ಹೈಕೋರ್ಟ್ ಗಮನಕ್ಕೆ ತರಲಾಗುವುದು ಎಂದು ಹೈಕೋರ್ಟ್ ವಕೀಲ ಪ್ರಶಾಂತ್ ಮೆಥಲ್ ತಿಳಿಸಿದ್ದಾರೆ.
ಲೋಕಾಯುಕ್ತ ನೋಟಿಸ್ ಜಾರಿ ಸಂಬಂಧ ಉತ್ತರ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸ್ಪಷ್ಟಪಡಿಸಿದ್ದಾರೆ.