ಬಿಬಿಎಂಪಿ ಐಡಿಯಾ ಅಟ್ಟರ್ ಪ್ಲಾಪ್, ಬಿರುಕು ಬಿಟ್ಟ ದೇಶದ ಪ್ರಪ್ರಥಮ ರ‍್ಯಾಪಿಡ್ ರಸ್ತೆ

Social Share

ಬೆಂಗಳೂರು,ಜ.7- ಬಿಬಿಎಂಪಿಯ ಮತ್ತೊಂದು ಹೊಸ ಐಡಿಯಾ ಅಟ್ಟರ್ ಪ್ಲಾಪ್ ಆಗಿದೆ. ರಸ್ತೆ ಗುಂಡಿಗೆ ಮುಕ್ತಿ ಹಾಡುವ ಉದ್ದೇಶದಿಂದ ದೇಶದಲ್ಲೇ ಪ್ರಥಮ ಬಾರಿಗೆ ಹಾಕಲಾದ ರ‍್ಯಾಪಿಡ್ ರೋಡ್‍ನಲ್ಲಿ ಬಿರುಕು ಕಾಣಿಸಿಕೊಂಡಿದೆ.

ರ‍್ಯಾಪಿಡ್ ರಸ್ತೆ ನಿರ್ಮಿಸಿದ ಒಂದೇ ತಿಂಗಳಿಗೆ ದುಬಾರಿ ವೆಚ್ಚದ ರಸ್ತೆ ಹಾಳಾಗಿರುವುದು ಬಿಬಿಎಂಪಿ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ. ಹಳೆ ಮದ್ರಾಸ್ ರಸ್ತೆಯಲ್ಲಿ ಕೋಟಿ ವೆಚ್ಚದಲ್ಲಿ ಶರವೇಗದಲ್ಲಿ ಹಾಕಲಾಗಿದ್ದ ರ‍್ಯಾಪಿಡ್ ರಸ್ತೆ ಅಷ್ಟೇ ವೇಗದಲ್ಲಿ ಹಾಳಾಗಿರುವ ದೃಶ್ಯಗಳು ಕಂಡು ಬರುತ್ತಿದೆ.

ಡಾಂಬರು, ವೈಟ್ ಟಾಪಿಂಗ್ ಬದಲಿಗೆ ಹೊಸ ತಂತ್ರಜ್ಞಾನ ಹೊಂದಿರುವ ರ‍್ಯಾಪಿಡ್ ರಸ್ತೆ ನಿರ್ಮಾಣದಲ್ಲೂ ಕಳಪೆ ಕಾಮಗಾರಿ ನಡೆಸಲಾಗಿದೇಯೇ ಎಂಬ ಅನುಮಾನ ಇದೀಗ ಎಲ್ಲರನ್ನೂ ಕಾಡತೊಡಗಿದೆ.

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಕುಡುಕ ಅರೆಸ್ಟ್

337.5 ಮೀಟರ್ ಉದ್ದದ ರಸ್ತೆಯನ್ನು ಪ್ರೀಕಾಸ್ಟ್ ಪೋಸ್ಟ್ ಟೆನ್ಷನಿಂಗ್ ಪೇವ್‍ಮೆಂಟ್ ತಂತ್ರಜ್ಞಾನದ ಮೂಲಕ ನಿರ್ಮಾಣ ಮಾಡಲಾಗಿತ್ತು. ದೇಶದಲ್ಲೇ ಪ್ರಪ್ರಥಮ ಎನ್ನಲಾದ ರ್ಯಾಪಿಡ್ ರಸ್ತೆಯನ್ನು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಲೋಕಾರ್ಪಣೆ ಮಾಡಿ ಈ ರಸ್ತೆ ಯಶಸ್ವಿಯಾದರೆ ಇತರ ಹಲವು ಕಡೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದ್ದರು.

ಶಿಕ್ಷಕಿ ಮೇಲೆ ಗುಂಡು ಹರಿಸಿದ 6 ವರ್ಷದ ವಿದ್ಯಾರ್ಥಿ

ಆದರೆ, ರಸ್ತೆ ಲೋಕಾರ್ಪಣೆಯಾದ ಕೆಲವೇ ದಿನಗಳಲ್ಲಿ ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವುದು ತಲೆನೋವಾಗಿ ಪರಿಣಮಿಸಿದೆ. ಬಿಬಿಎಂಪಿ ಪ್ರಧಾನ ಅಭಿಯಂತರ ಪ್ರಹ್ಲಾದ್ ಅವರ ಕನಸಿನ ಕೂಸಾದ ಈ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಪ್ಯಾನಲ್ ನಿರ್ಮಾಣದಲ್ಲಿ ಗುಣಮಟ್ಟದ ಸಿಮೆಂಟ್ ಮಿಶ್ರಣ ಮಾಡಲಾಗಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.

BBMP, First Rapid, Road, Crack,

Articles You Might Like

Share This Article