ಬೆಂಗಳೂರು,ಡಿ.23- ಮತ್ತೆ ಕೋವಿಡ್ ಸೋಂಕಿನ ಭೀತಿ ಎದುರಾಗಿದ್ದು, ಬೂಸ್ಟರ್ ಡೋಸ್ಗೆ ಬೇಡಿಕೆ ಹೆಚ್ಚುತ್ತಿದೆ. ಕೋವಿಶೀಲ್ಡ್ ಲಸಿಕೆ ಪೂರೈಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ನಗರದಲ್ಲಿ 9 ರಿಂದ 10 ಲಕ್ಷ ಜನ ಮಾತ್ರ ಕೋವ್ಯಾಕ್ಸಿನ್ ಪಡೆದಿದ್ದರೆ, ಉಳಿದವರು ಹೆಚ್ಚು ಕೋವಿಶೀಲ್ಡ್
ಲಸಿಕೆಯನ್ನು ಪಡೆದಿರುವ ಕಾರಣ ಕೋವಿಶೀಲ್ಡ್ಗೆ ಬೇಡಿಕೆ ಹೆಚ್ಚಿದೆ. ಕೋವಿಡ್ ಶೀಲ್ಡ್ ಪಡೆದವರಲ್ಲಿ ಬೋಸ್ಟರ್ ಡೋಸ್ಗೆ ಅರ್ಹವಾಗಿರುವವರ ಲೆಕ್ಕ ನಮ್ಮಲ್ಲಿ ಇದ್ದು, ಈಗ 60ರ ಮೇಲ್ಪಟ್ಟವರಿಗೆ ಮಾತ್ರ ಬೋಸ್ಟರ್ ಡೋಸ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಚೀನಾಗೆ ಔಷದೋಪಾಚಾರ ಪೂರೈಸಲು ಭಾರತ ಸಿದ್ಧ
ನಮ್ಮಲ್ಲಿ ಕೋವ್ಯಾಕ್ಸಿನ್ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದ್ದು ಜನವರಿ ವೇಳೆಗೆ ಅದರ ಅವ ಮುಗಿಯಲಿದೆ. ಅದನ್ನು ವಾಪಸ್ ಕಳಿಸುತ್ತೇವೆ ಎಂದು ಹೇಳಿದರು.
ನಗರದಲ್ಲಿ ಪಾಸಿಟಿವಿಟಿ ಪ್ರಾಮಾಣ ಹೆಚ್ಚಾಗಿಲ್ಲ, ಆದರೆ ಆಸ್ಪತ್ರೆಗಳಿಗೆ ಭೇಟಿ ನೀಡುವವರ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ. ರೋಗ ಲಕ್ಷಣಗಳು ಬಹಳ ಪ್ರಾಥಮಿಕ ಹಂತದಲ್ಲಿದೆ. ಯಾವ ರೀತಿಯ ಔಷ ನೀಡಬೇಕು ಎಂಬ ಬಗ್ಗೆ ಕೂಡ ಚರ್ಚೆ ನಡೆಸಲಾಗಿದ್ದು, ಕಳೆದ ಮೂರು ಅಲೆಯಲ್ಲಿ ಮಾಡಿರುವ ವ್ಯವಸ್ಥೆಯನ್ನೇ ಹಂತ ಹಂತವಾಗಿ ಪರಿಸ್ಥಿತಿಗೆ ತಕ್ಕ ಹಾಗೆ ಮುಂದುವರೆಸಲಾಗುವುದು ಎಂದು ತಿಳಿಸಿದರು.
ಖಾಸಗಿ ಆಸ್ಪತ್ರೆ, ಮೆಡಿಕಲ್ ಕಾಲೇಜ್ಗಳ ಜೊತೆ ಸಭೆ ನಡೆಸಲಾಗಿದ್ದು, ಐಸಿಯೂ, ನಾನ್ ಐಸಿಯೂ ಬೆಡ್ಗಳ ವ್ಯವಸ್ಥೆ, ಹಾಗೂ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಎಲ್ಲೆಲ್ಲಿ ಆಗಿತ್ತು ಅವಳ ಇಂದಿನ ಪರಿಸ್ಥಿತಿ ಹೇಗಿದೆ ಎಲ್ಲವನ್ನು ಚರ್ಚೆ ಮಾಡಿದ್ದೇವೆ ಎಂದರು.
ಕನಕಪುರ : ತಲೆ ಮೇಲೆ ಕಲ್ಲು ಹಾಕಿ RTI ಕಾರ್ಯಕರ್ತನ ಭೀಕರ ಕೊಲೆ
ನಗರದಲ್ಲಿ ಮಾಸ್ಕ್ ಕಡ್ಡಾಯವಾಗಿ ಧರಿಸುವಂತೆ ಮನವಿ ಹಾಗೂ ಜಾಗೃತಿ ಕಾರ್ಯಕ್ರಮ ಮಾಡಲಾಗುವುದು ಎಂದು ತಿಳಿಸಿದರು.
BBMP, covishield, booster dose, vaccine, tushar girinath,