ಬಿಬಿಎಂಪಿ ಆಡಳಿತ ವಿಕೇಂದ್ರಿಕರಣಕ್ಕೆ ಸುಧಾರಣ ಆಯೋಗ ಶಿಫಾರಸು

Social Share

ಬೆಂಗಳೂರು,ಫೆ.10- ಆಡಳಿತಾತ್ಮಕ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಡಳಿತವನ್ನು ವಿಕೇಂದ್ರಿಕರಣಗೊಳಿಸುವಂತೆ ಕರ್ನಾಟಕ ರಾಜ್ಯ ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದೆ.

ಸಮನ್ವಯ ಮತ್ತು ವಿಕೇಂದ್ರೀಕೃತ ಆಡಳಿತಕ್ಕಾಗಿ ವಿಭಾಗೀಯ ಮಟ್ಟದಲ್ಲಿ ಸ್ಥಳೀಯ ಆಡಳಿತವನ್ನು ಸುಧಾರಿಸಲು ಮತ್ತು ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು 30 ಸಹಾಯಕ ಆಯುಕ್ತರುಗಳ ಹುದ್ದೆಗಳನ್ನು ಸೃಷ್ಟಿಸಬೇಕು.

70 ಹೆಚ್ಚುವರಿ ಕಂದಾಯ ನಿರೀಕ್ಷಕರು ಹಾಗೂ 94 ಹೆಚ್ಚುವರಿ ತೆರಿಗೆ ನಿರೀಕ್ಷಕರ ಹುದ್ದೆಗಳನ್ನು ಸೃಷ್ಟಿಸಿಕೊಳ್ಳಬೇಕು. ಇಂತಹ ಸಿಬ್ಬಂದಿಗಳನ್ನು ಪ್ರತಿ ಐದು ವರ್ಷ ಗಳಿಗೊಮ್ಮೆ ವರ್ಗಾವಣೆ ಮಾಡುವುದರ ಜತೆಗೆ ಆಸ್ತಿ ತೆರಿಗೆ ಸಂಗ್ರಹಣೆ ಮತ್ತು ತೆರಿಗೆ ಆಕರಣೆಯನ್ನು ಹೆಚ್ಚಿಸಲು ಜಾರಿ ಕೋಶವೊಂದನ್ನು ರಚಿಸುವಂತೆಯೂ ಸಲಹೆ ನೀಡಲಾಗಿದೆ.

ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್‍ ಕುರ್ಚಿಗಳು ಖಾಲಿ ಖಾಲಿ

ಎಲ್ಲಾ 243 ವಾರ್ಡ್‍ಗಳಲ್ಲಿ ಪ್ರತಿ ವಾರ್ಡ್‍ಗೆ ಒಬ್ಬ ಕಿರಿಯ ಇಲ್ಲವೆ ಸಹಾಯಕ ಅಭಿಯಂತರ ಹುದ್ದೆ ಮತ್ತು ಎಲ್ಲಾ 243 ವಾರ್ಡ್‍ಗಳಿಗೆ ಒಬ್ಬ ವರ್ಕ್ ಇನ್ಸ್‍ಪೆಕ್ಟರ್‍ಗಳನ್ನು ನೇಮಕ ಮಾಡಿಕೊಳ್ಳಬೇಕು. ತುರ್ತು ಕಾಮಗಾರಿಗಳಿಗಾಗಿ ವಾರ್ಡ್ ಎಂಜಿನಿಯರ್‍ಗಳಿಗೆ ವಾರ್ಷಿಕ 10 ಲಕ್ಷದವರೆಗೆ ಮತ್ತು ಕೋರ್ ವಾರ್ಡ್‍ಗಳಿಗೆ ವಾರ್ಷಿಕ 5 ಲಕ್ಷ ರೂ.ಗಳ ಅವರ್ತ ನಿಧಿ ಸ್ಥಾಪನೆ ಮಾಡುವುದು.

ಪ್ರತಿ ವಾರ್ಡ್‍ಗೆ ಒಬ್ಬ ಕಿರಿಯ ಆರೋಗ್ಯ ನಿರೀಕ್ಷಕರು, ಪ್ರತಿ ಎರಡು ವಾರ್ಡ್‍ಗಳಿಗೆ ಒಬ್ಬ ಹಿರಿಯ ಆರೋಗ್ಯ ನಿರೀಕ್ಷಕರಿರಬೇಕು. 192 ಹೆಚ್ಚುವರಿ ಜೆಎಚ್‍ಐ ಹುದ್ದೆಗಳನ್ನು ಸೃಜಿಸಿ ಯಾವುದೆ ಹೊಸ ಹುದ್ದೆಗಳನ್ನು ರಚಿಸದೆ 12 ಎಸ್‍ಎಚ್‍ಐಗಳನ್ನು ಬೇರೆ ಬೇರೆ ವಲಯಗಳಿಗೆ ಮರುನಿಯೋಜನೆ ಮಾಡಬಹುದಾಗಿದೆ ಎಂದೂ ಶಿಫಾರಸು ಮಾಡಲಾಗಿದೆ.

ಸರ್ಕಾರಕ್ಕೆ ರಾಜ್ಯಪಾಲರ ಶಭಾಷ್‍ಗಿರಿ

ಬಿಎಂಸಿ ಮಾದರಿ ವಲಯವಾರು ಕಾನೂನು ಕೋಶಗಳನ್ನು ರಚನೆ ಮಾಡಬೇಕು. ಕಾನೂನು ಕೋಶದ ಮುಖ್ಯಸ್ಥರಿಗೆ ಸಹಾಯ ಮಾಡಲು 10 ಹೆಚ್ಚುವರಿ ಕಿರಿಯ ಕಾನೂನು ಅಧಿಕಾರಿಗಳು ಹಾಗೂ ಸಹಾಯಕ ಕಾನೂನು ಅಧಿಕಾರಿಗಳು, ಉಪ ಕಾನೂನು ಅಧಿಕಾರಿಗಳು ಮತ್ತು ಕಾನೂನು ಅಧಿಕಾರಿಗಳ ಹುದ್ದೆ ಸೃಷ್ಟಿಸಿ ಕೇಂದ್ರ ಕಾನೂನು ಕೋಶವನ್ನು ಬಲಪಡಿಸಲು ಕ್ರಮ ಕೈಗೊಳ್ಳಬೇಕು ಎಂಬ ಸಲಹೆ ನೀಡಲಾಗಿದೆ.

BBMP, decentralization, recommended, Reform, Commission,

Articles You Might Like

Share This Article