ಬೆಂಗಳೂರು,ಜ.20- ನಗರದಲ್ಲಿ ಮತ್ತೊಂದು ಅವೈಜ್ಞಾನಿಕ ಮೇಲ್ಸೇತುವೆಯನ್ನು ನೆಲಸಮಗೊಳಿಸಲಾಗುತ್ತಿದೆ. ಕೆಲ ದಿನಗಳ ಹಿಂದಷ್ಟೇ ಬಿಬಿಎಂಪಿ ಎಂಜಿನಿಯರ್ಗಳು ನಗರದ ಐಒಸಿ ಸರ್ಕಲ್ನಲ್ಲಿ ನಿರ್ಮಿಸಲಾಗಿದ್ದ ಮೇಲ್ಸೇತುವೆ ಯನ್ನು ನೆಲಸಮಗೊಳಿಸಲಾಗುತ್ತಿ ರುವುದು.
ಕಾರಣಾಂತರಗಳಿಂದ ಐಒಸಿ ಸಮೀಪ ನಿರ್ಮಿಸಲಾಗಿರುವ ಮೇಲ್ಸೇತುವೆಯನ್ನು ನೆಲಸಮ ಗೊಳಿಸಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ಖಚಿತಪಡಿಸಿದ್ದಾರೆ.
ಬಿಬಿಎಂಪಿಯವರ ಅವೈಜ್ಞಾನಿಕ ಮೇಲ್ಸೇತುವೆ ನಿರ್ಮಾಣಕ್ಕೆ ಸಾರ್ವಜನಿಕರ ವ್ಯಾಪಕ ವಿರೋಧ ಇದ್ದರೂ ಕೋಟ್ಯಂತರ ರೂ.ಗಳ ತೆರಿಗೆ ಹಣ ಬಳಕೆ ನಿರ್ಮಿಸಲಾಗಿದ್ದ ಸೇತುವೆಯನ್ನು ಇದೀಗ ತೆರವುಗೊಳಿಸುತ್ತಿರುವ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬಾಣಸವಾಡಿಯಿಂದ ಫ್ರೆಜರ್ಟೌನ್ಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದ ಮೇಲ್ಸೇತುವೆಯನ್ನು ತೆರವು ಮಾಡಿ ಹೊಸದಾಗಿ ಮತ್ತೆ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ರವೀಂದ್ರ ತಿಳಿಸಿದ್ದಾರೆ.
ಕಿರಿದಾದ ಪ್ರದೇಶದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿದ ನಂತರ ಈ ಭಾಗದ ರಸ್ತೆ ಸಂಚಾರಕ್ಕೆ ತೀವ್ರ ಆಡಚಣೆಯಾಗಿತ್ತು. ಇದರ ಜೊತೆಗೆ ಬೈಯಪ್ಪನಹಳ್ಳಿ ಸರ್ಎಂವಿ ಟರ್ಮಿನಲ್ ಆರಂಭಗೊಂಡ ನಂತರವಂತೂ ಇಲ್ಲಿನ ರಸ್ತೆ ಸಂಚಾರ ನರಕಸದೃಶ್ಯವಾಗಿ ಪರಿವರ್ತನೆಯಾಗಿತ್ತು.
ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ ಬಿಜೆಪಿಯ ಪ್ರಭಾವಿ ಶಾಸಕರು
ಹೀಗಾಗಿ ಅವೈಜ್ಞಾನಿಕ ಸೇತುವೆ ನೆಲಸಮಗೊಳಿಸಿ ಸುಮಾರು 350 ಕೋಟಿ ರೂ.ವೆಚ್ಚದಲ್ಲಿ ಹೊಸ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ ಎಂದು ರವೀಂದ್ರ ತಿಳಿಸಿದ್ದಾರೆ.
ಮಾರುತಿ ಸೇವಾ ನಗರ, ಬಾಣಸವಾಡಿ, ಕಮ್ಮನಹಳ್ಳಿ ಮತ್ತು ಬೈಯಪ್ಪನಹಳ್ಳಿ ಸಂಚಾರ ಕಲ್ಪಿಸುವ ರೀತಿ ನಿರ್ಮಿಸಲಾಗುತ್ತಿರುವ ಹೊಸ ಮೇಲ್ಸೇತುವೆ ಮೇಲೆ ನಾಲ್ಕು ದಿಕ್ಕಿನಲ್ಲೂ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ದ್ವಿಮುಖ ಸಂಚಾರದ ವ್ಯವಸ್ಥೆ ಹೊಂದಿರುವ ವೃತ್ತಾಕಾರದ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಅನುಮೊದನೆ ದೊರೆತ ಕೂಡಲೆ ಹೊಸ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಅರಂಭಿಸಲಾಗುವುದು ಎಂದು ಅವರು ವಿವರಣೆ ನೀಡಿದ್ದಾರೆ.
ಮೆಟ್ರೋ ಎಂಡಿ ಅಂಜುಮ್ ಪರ್ವೇಜ್ಗೆ ಪೊಲೀಸ್ ನೋಟಿಸ್
ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಭೂಮಿ ಬಿಟ್ಟುಕೊಡಲು ಸಮ್ಮತಿಸಿದೆ ಇದರ ಜತೆಗೆ ರೈಲ್ವೇ ಇಲಾಖೆಯವರೊಂದಿಗೂ ಮಾತುಕತೆ ನಡೆಸಲಾಗಿದೆ ರಾಜ್ಯ ಸರ್ಕಾರದ ಅನುಮತಿ ದೊರೆತರೆ ಮುಂದಿನ ತಿಂಗಳಿನಿಂದಲೇ ಕಾಮಗಾರಿ ಆರಂಭವಾಗುವ ಸಾಧ್ಯತೆಗಳಿವೆ.
BBMP, decided, IOC junction, flyover, additional, overbridges,