ದೊಡ್ಡವರ ಮನೆ ಬಳಿ ಜೆಸಿಬಿಗಳು ಸೈಲೆಂಟ್, ನಾಲ್ಕೇ ದಿನಕ್ಕೆ ಸೀಮಿತವಾಯ್ತು ಬಿಬಿಎಂಪಿ ಪೌರುಷ ಪ್ರದರ್ಶನ

Social Share


ಬೆಂಗಳೂರು,ಸೆ.17- ರಾಜಕಾಲುವೆ ಒತ್ತುವರಿ ತೆರವಿಗೆ ನಗರದಲ್ಲಿ ಘರ್ಜಿಸುತ್ತಿದ್ದ ಜೆಸಿಬಿಗಳ ಸದ್ದು ಅಡಗಿದೆ.
ನಗರದಲ್ಲಿ ಸುರಿದ ರಣ ಮಳೆಯಿಂದ ಆಗಿದ್ದ ಅನಾಹುತ ತಪ್ಪಿಸುವ ಉದ್ದೇಶದಿಂದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಚರಣೆಯನ್ನು ಬಿಬಿಎಂಪಿ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ.

ನ್ಯಾಯಾಲಯ ಮತ್ತು ವಿಪಕ್ಷ ನಾಯಕರ ಕಣ್ಣೋರೆಸುವಂತೆ ಕೇವಲ ನಾಲ್ಕು ದಿನಗಳ ಕಾಲ ಕಾರ್ಯಚರಣೆ ನಡೆಸಿದ ಬಿಬಿಎಂಪಿ ಅಧಿಕಾರಿಗಳು ನಿನ್ನೆಯಿಂದ ರಾಜಕಾಲುವೆ ಒತ್ತುವರಿ ಕಾರ್ಯವನ್ನು ಸ್ಥಗಿತಗೊಳಿಸಿದ್ದಾರೆ.
ಮಹದೇವಪುರ, ಬೊಮ್ಮನಹಳ್ಳಿ, ದಾಸರಹಳ್ಳಿ, ಯಲಹಂಕ ಭಾಗದಲ್ಲಿ ನಾಲ್ಕು ದಿನಗಳಿಂದ ಘರ್ಜಿಸುತ್ತಿದ್ದ ಜೆಸಿಬಿ ಯಂತ್ರಗಳು ನಿನ್ನೆಯಿಂದ ನಿಶಬ್ದವಾಗಿವೆ.

ಇದನ್ನೂ ಓದಿ : ಬಿಜೆಪಿ ಸರ್ಕಾರದ ಭಾರೀ ಹಗರಣ ಬಾಂಬ್ ಸಿಡಿಸಲು ಜೆಡಿಎಸ್ ಸಿದ್ಧತೆ

ಆರಂಭದಲ್ಲಿ ಕೈಲಾಗದವರ ಮನೆ. ಶೆಡ್‍ಗಳನ್ನು ಉರುಳಿಸಿದ್ದ ಜೆಸಿಬಿ ಯಂತ್ರಗಳು ದೊಡ್ಡವರ ಒತ್ತುವರಿ ಪಟ್ಟಿ ನೋಡುತ್ತಿದ್ದಂತೆ ಸ್ಥಬ್ದವಾಗಿರುವುದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಮಾರ್ಕಿಂಗ್ ಕಾರ್ಯ: ಇಂದಿನಿಂದ ಒತ್ತುವರಿ ತೆರವು ಕಾರ್ಯಚರಣೆಯನ್ನು ಸ್ಥಗಿತಗೊಳಿಸಿರುವ ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿ ಪತ್ತೆ ಹಚ್ಚುವ ಮಾರ್ಕಿಂಗ್ ಕಾರ್ಯ ಮಾಡುತ್ತಿದ್ದಾರೆ. ರಾಜಕಾಲುವೆ, ಕೆರೆ ಹಾಗೂ ಬಫರ್‍ಜೋನ್ ಒತ್ತುವರಿ ಸರ್ವೇ ಕಾರ್ಯ ನಡೆಸಿ ಆ ನಂತರ ತೆರವು ಕಾರ್ಯಚರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಪ್ಪೆ ಸಾರಿಸುತ್ತಿದ್ದಾರೆ.

ಈಗಾಗಲೇ ನೂರಕ್ಕೂ ಹೆಚ್ಚು ವಿಲ್ಲಾ ಅಪಾರ್ಟಮೆಂಟ್‍ಗಳ ಒತ್ತುವರಿ ಕಟ್ಟಡ ಗುರುತು ಮಾಡಿರೋ ಕಂದಾಯ ಇಲಾಖೆ. ನಿನ್ನೆ ಕೂಡ ಭಾಗ್ಮಾನೆ ಕ ಪರ್ವಂಕರ ವಿಪ್ರೋ ಕಟ್ಟಡಗಳ ಸರ್ವೆ ನಡೆಸಿ ನೋಟೀಸ್ ಜಾರಿ ಮಾಡಿತ್ತು.

ಇದನ್ನೂ ಓದಿ : 7 ದಶಕಗಳ ನಂತರ ಭಾರತಕ್ಕೆ ಬಂದ 8 ಚೀತಾಗಳು

ನೋಟೀಸ್ ಜಾರಿ ಮಾಡಿದ್ದರೂ ಇಂದಿನಿಂದ ಆರಂಭಗೊಳಿಸಬೇಕಿದ್ದ ತೆರವು ಕಾರ್ಯಚರಣೆ ಅಧಿಕಾರಿಗಳು ಬ್ರೇಕ್ ಹಾಕಿರುವುದು ಏಕೆ ಎಂದು ಯಾರಿಗೂ ಅರ್ಥವಾಗುತ್ತಿಲ್ಲ. ಬಿಬಿಎಂಪಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಈ ನಡೆ ಸಾರ್ವಜನಿಕರಲ್ಲಿ ಹಲವಾರು ಅನುಮಾನಗಳನ್ನು ಹುಟ್ಟು ಹಾಕಿರುವುದಂತೂ ಸತ್ಯ.

Articles You Might Like

Share This Article