Saturday, September 23, 2023
Homeಇದೀಗ ಬಂದ ಸುದ್ದಿಯಾವ ಮಾನದಂಡದ ಮೇಲೆ ಬಿಬಿಎಂಪಿ ಚುನಾವಣೆ..?

ಯಾವ ಮಾನದಂಡದ ಮೇಲೆ ಬಿಬಿಎಂಪಿ ಚುನಾವಣೆ..?

- Advertisement -

ಬೆಂಗಳೂರು,ಮೇ 31- ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಪಕ್ಷ ಇದೀಗ ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಆದರೆ, ಪಾಲಿಕೆಗೆ ಯಾವ ಮಾನದಂಡದ ಮೇಲೆ ಚುನಾವಣೆ ನಡೆಸಬೇಕು ಎಂಬ ಗೊಂದಲ ಕಾಂಗ್ರೆಸ್ ಪಕ್ಷವನ್ನು ಕಾಡುತ್ತಿದೆ.

ಈ ಹಿಂದೆ ಇದ್ದಂತೆ 198 ವಾರ್ಡ್‍ಗಳಿಗೆ ಚುನಾವಣೆ ನಡೆಸಬೇಕೇ, ಇಲ್ಲ 243 ವಾರ್ಡ್ ಗಳಿಗೆ ಚುನಾವಣೆ ನಡೆಸುವುದೋ ಅಥವಾ ಮೂರು ಬೆಂಗಳೂರು ಇಲ್ಲವೇ ಗ್ರೇಟರ್ ಬೆಂಗಳೂರು ರಚನೆ ಮಾಡಿ ಚುನಾವಣೆ ನಡೆಸುವುದೇ ಎಂಬ ಗೊಂದಲಕ್ಕಿಡಾಗಿರುವ ಸರ್ಕಾರ ಸಾಧಕ ಬಾಧಕಗಳ ಪರಿಶೀಲನೆಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದೆ.

- Advertisement -

ಇಂದಿನಿಂದ ರಾಜ್ಯಾದ್ಯಂತ ಶಾಲೆಗಳ ಆರಂಭ

ನಾಲ್ಕು ಮಾದರಿಯಲ್ಲಿ ಚುನಾವಣೆಗಳ ಬಗ್ಗೆಯೂ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ಈಗಾಗಲೇ ವರದಿ ಸಿದ್ದಪಡಿಸಿದೆ. ಆದರೆ, ಯಾವ ಮಾದರಿಯ ಚುನಾವಣೆ ನಡೆಸಿದರೆ ಆಡಳಿತ ಪಕ್ಷಕ್ಕೆ ಸಹಕಾರಿಯಾಗಲಿದೆ ಎನ್ನುವ ಆಧಾರದ ಮೇಲೆ ಚುನಾವಣೆ ನಡೆಸಲು ಸರ್ಕಾರ ಸಿದ್ದವಾಗಿದೆ ಎಂದು ತಿಳಿದುಬಂದಿದೆ.

ಸುಮಾರು 1.6 ಕೋಟಿ ಜನಸಂಖ್ಯೆ ಹೊಂದಿರುವ ಸ್ಥಳೀಯ ಆಡಳಿತ ಸಂಸ್ಥೆ ಬಿಬಿಎಂಪಿ ಸದಸ್ಯರ ಆಡಳಿತಾವ ಪೂರ್ಣಗೊಂಡು ಎರಡುವರೆ ವರ್ಷಗಳಾಗಿರುವುದರಿಂದ ಅದಷ್ಟು ಶೀಘ್ರ ಚುನಾವಣೆ ನಡೆಸುವುದು ಸರ್ಕಾರದ ಇರಾದೆಯಾಗಿದೆ.

ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಮಾಡಿದ್ದ ವಾರ್ಡ್ ಮೀಸಲಾತಿ ರದ್ದುಪಡಿಸಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಮೀಸಲಾತಿ ಮಾಡಿ ಬಿಬಿಎಂಪಿಯಲ್ಲೂ ಕಾಂಗ್ರೆಸ್ ಆಡಳಿತ ಬರುವಂತೆ ನೋಡಿಕೊಳ್ಳುವ ಉದ್ದೇಶದಿಂದ ನಗರದ ಮೇಲೆ ಹಿಡಿತ ಹೊಂದಿರುವ ರಾಮಲಿಂಗಾರೆಡ್ಡಿ ಅವರಿಗೆ ಹೊಣೆ ನೀಡಲಾಗಿದೆ.

ರಾಮಲಿಂಗರೆಡ್ಡಿ ನೇತೃತ್ವದ ಸಮಿತಿಗೆ ಜೂನ್ 30 ರೊಳಗೆ ವರದಿ ನೀಡುವಂತೆ ಸಿಎಂ ಸಿದ್ದರಾಮಯ್ಯ ಅದೇಶ ನೀಡಿರುವುದರಿಂದ ವಷಾಂತ್ಯದೊಳಗೆ ಬಿಬಿಎಂಪಿಗೆ ಚುನಾವಣೆ ನಡೆಯುವ ಸಾಧ್ಯತೆಗಳು ಗೋಚರಿಸತೊಡಗಿವೆ.
198 ವಾರ್ಡಗಳಿದ್ದ ಬಿಬಿಎಂಪಿಯನ್ನು 243 ವಾರ್ಡಗಳನ್ನಾಗಿ ಪರಿವರ್ತಿಸಿ ತಮಗೆ ಬೇಕಾದ ರೀತಿಯಲ್ಲಿ ಪುನರ್‍ವಿಂಗಡನೆ ಹಾಗೂ ಮೀಸಲಾತಿ ಮಾಡಿ ಬಿಜೆಪಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ನೋಡಿಕೊಂಡಿದೆ ಎಂದು ಈ ಹಿಂದೆ ಕಾಂಗ್ರೆಸ್ ಆರೋಪಿಸಿತ್ತು.

ರಾಜ್ಯದಲ್ಲಿ ಇನ್ನೂ ಒಂದು ವಾರ ಭಾರೀ ಮಳೆ ಸಾಧ್ಯತೆ

ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವುದರಿಂದ ಬಿಜೆಪಿ ಮಾಡಿದ್ದ ಮೀಸಲಾತಿ ರದ್ದಾಗುವ ಭೀತಿಯಿಂದ ಈಗಾಗಲೇ ಕೆಲವು ಬಿಜೆಪಿ ಬಿಬಿಎಂಪಿ ಮಾಜಿ ಸದಸ್ಯರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಕಾನೂನು ಮೊರೆ: ಈ ಹಿಂದೆ ಇದ್ದ 198 ವಾರ್ಡ್‍ಗಳನ್ನು ವಜಾಗೊಳಿಸಿ ಬಿಜೆಪಿ 243 ವಾರ್ಡ್‍ಗಳನ್ನಾಗಿ ಪರಿವರ್ತಿಸಿದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ 243 ವಾರ್ಡ್‍ಗಳಿಗೆ ಚುನಾವಣೆ ನಡೆಸಬೇಕೆ ಅಥವಾ ಈ ಹಿಂದೆ 198 ವಾರ್ಡ್‍ಗಳಿಗೆ ಚುನಾವಣೆ ನಡೆಸಲು ಸಾಧ್ಯವೆ ಎನ್ನುವ ಬಗ್ಗೆ ಕಾನೂನು ಸಲಹೆ ಪಡೆಯಲು ಕಾಂಗ್ರೆಸ್ ತೀರ್ಮಾನಿಸಿದೆ.

ಒಂದು ವೇಳೆ ಕಾನೂನುಬದ್ಧವಾಗಿ ರಚನೆಯಾಗಿರುವ 243 ವಾರ್ಡ್‍ಗಳ ಬದಲಿಗೆ 198 ವಾರ್ಡ್‍ಗಳಿಗೆ ಚುನಾವಣೆ ನಡೆಸಲು ಇರುವ ಸಮಸ್ಯೆ ಏನು, ಅದನ್ನು ಯಾವ ರೀತಿ ಪರಿಹರಿಸಿಕೊಳ್ಳಬಹುದು ಎಂಬ ಬಗ್ಗೆಯೂ ಕಾನೂನು ಪಂಡಿತರ ಸಲಹೆ ಪಡೆಯಲಾಗುತ್ತಿದೆ.

ಕಾನೂನು ತಜ್ಞರು ನೀಡುವ ಸಲಹೆ ಮೇರೆಗೆ ಬಿಬಿಎಂಪಿ ಚುನಾವಣಾ ಭವಿಷ್ಯ ನಿರ್ಧಾರವಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

BBMP, #election, #Congress, #BJP, #GreaterBangalore,

- Advertisement -
RELATED ARTICLES
- Advertisment -

Most Popular