ಬೆಂಗಳೂರು,ಜೂ.1- ರಾಜ್ಯದಲ್ಲಿ ಸರ್ಕಾರ ರಚಿಸಿ ಬೀಗುತ್ತಿರುವ ಕಾಂಗ್ರೆಸ್ ಪಕ್ಷ ಇದೇ ಹುಮ್ಮಸ್ಸಿನಲ್ಲಿ ಬಿಬಿಎಂಪಿ ಚುನಾವಣೆಗೂ ತಯಾರಿ ಆರಂಭಿಸಿದೆ. ಬೆಂಗಳೂರು ಅಭಿವೃದ್ಧಿ ಸಚಿವ ಸ್ಥಾನವನ್ನು ತಮ್ಮ ಬಳಿಯೇ ಇಟ್ಟುಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಬಿಎಂಪಿ ಚುನಾವಣಾ ಕಾರ್ಯ ಕೈಗೆತ್ತಿಕೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿದ್ದಾರೆ.
ಮಾತ್ರವಲ್ಲ, ತಾವು ಕೂಡ ಬಿಬಿಎಂಪಿ ಚುನಾವಣಾ ಕಾರ್ಯದ ಉಸ್ತುವಾರಿ ವಹಿಸಿಕೊಂಡಿದ್ದು,
ಇಂದು ಚುನಾವಣೆ ನಡೆಸುವ ಸಂಬಂಧ ಮಾಜಿ ಮೇಯರ್‍ಗಳೊಂದಿಗೆ ಇಂದು ಮಹತ್ವದ ಸಭೆ ನಡೆಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್‍ಗಳ ಜತೆ ಅವರು ಬಿಬಿಎಂಪಿ ಚುನಾವಣೆ ನಡೆಸುವ ಸಾಧಕ ಬಾಧಕಗಳ ಬಗ್ಗೆ ಮಾತುಕತೆ ನಡೆಸಿದರು. ಸಭೆಯಲ್ಲಿ ಮಾಜಿ ಮೇಯರ್‍ಗಳಾದ ಜಿ. ಪದ್ಮಾವತಿ, ಗಂಗಾಂಬಿಕೆ, ಸಂಪತ್‍ರಾಜï, ಪಿ ಆರ್ ರಮೇಶ್ ಸೇರಿದಂತೆ ಹಲವಾರು ನಾಯಕರುಗಳು ಪಾಲ್ಗೊಂಡಿದ್ದರು.
ಗ್ಯಾರಂಟಿಗೆ ಗಡುವು ವಿಧಿಸಲು ಅವರ್ಯಾರು?: ಸಚಿವ ಪ್ರಿಯಾಂಕ್ ಖರ್ಗೆ
ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ರೂಪಿಸಿದ ಕಾರ್ಯತಂತ್ರಗಳ ಆಧಾರದ ಮೇಲೆ ಬಿಬಿಎಂಪಿ ಮೇಲೂ ಪಕ್ಷದ ಬಾವುಟ ಹಾರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದಾಗಿಯೂ ಅವರು ಭರವಸೆ ನೀಡಿದ್ದಾರೆ.
ಬಿಜೆಪಿಯವರು ತಮಗಿಷ್ಟ ಬಂದ ಹಾಗೆ ಮಾಡಿಕೊಂಡಿರುವ ವಾರ್ಡ್ ಪುನರ್‍ವಿಂಗಡಣೆ ಮತ್ತು ಮೀಸಲಾತಿ ಬದಲಾವಣೆ ಮಾಡಿ ಚುನಾವಣೆ ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ.
ಮೇಕೆದಾಟು: ತಮಿಳುನಾಡಿಗೆ ತಿರುಗೇಟು ಕೊಟ್ಟ ಡಿಸಿಎಂ ಡಿಕೆಶಿ
ಈ ಬಾರಿ ಬಿಬಿಎಂಪಿಯಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಹೀಗಾಗಿ ಯಾರು ಟಿಕೆಟ್‍ಗಾಗಿ ಕಿತ್ತಾಟ ಮಾಡಿಕೊಳ್ಳಬಾರದು ಯಾರಿಗೆ ಟಿಕೆಟ್ ಸಿಕ್ಕರೂ ಅವರ ಗೆಲುವಿಗೆ ಇತರ ಎಲ್ಲರೂ ಶ್ರಮಿಸಬೇಕು ಎಂದು ಡಿಕೆಶಿ ಕಿವಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.
BBMP, #election, #Congress, #ex-mayors, #DKSivakumar, #meeting,