ಸದ್ಯಕ್ಕಿಲ್ಲ ಬಿಬಿಎಂಪಿ ಚುನಾವಣೆ

Social Share

ಬೆಂಗಳೂರು,ಡಿ.9- ಕಳೆದ ಎರಡು ವರ್ಷಗಳಿಂದ ಚುನಾವಣೆ ನಡೆಯದ ಬಿಬಿಎಂಪಿಗೆ ಸದ್ಯಕ್ಕಂತೂ ಎಲೆಕ್ಷನ್ ಆಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಡಿಸಂಬರ್ 31 ರೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿದ್ದ ತೀರ್ಪಿ ಗಡುವು ಮುಗಿಯಲೂ ಕೇವಲ 20 ದಿನಗಳು ಮಾತ್ರ ಬಾಕಿ ಇದೆ.

ಈ ಮಧ್ಯೆ ಡಿಸಂಬರ್ 31ರೊಳಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಚುನಾವಣೆ ನಡೆಸಲು ಮೂರು ತಿಂಗಳ ಕಾಲವಕಾಶ ಬೇಕು ಎಂದು ಸರ್ಕಾರ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲು ಹೈಕೋರ್ಟ್ ಸುಪ್ರೀಂ ಕೋರ್ಟ್ ಆದೇಶಕ್ಕಾಗಿ ಕಾಯುತ್ತಿದೆ. ಬಿಬಿಎಂಪಿ ಚುನಾವಣೆ ಮಾಹಿತಿಯನ್ನು ಕಾಲ ಕಾಲಕ್ಕೆ ಸುಪ್ರೀಂ ಕೋರ್ಟ್ ಗಮನಕ್ಕೆ ತರಬೇಕಿದೆ.

ಬಿಬಿಎಂಪಿ ಚುನಾವಣೆ ವಿಚಾರ ಡಿ.6 ರಂದು ನಡೆಯಬೇಕಿತ್ತು. ಆದರೆ, ವಿಚಾರಣೆಯನ್ನು ಡಿ.9ಕ್ಕೆ ಮುಂದೂಡಲಾಗಿತ್ತು. ಇಂದು ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಪೀಠ ಡಿ.15ಕ್ಕೆ ವಿಚಾರಣೆ ಮುಂದೂಡಿದೆ.

ನಟ ಅನಿರುದ್ಧ್ ನಿರ್ಬಂಧ ತೆರವಿಗೆ ಎಸ್.ನಾರಾಯಣ್ ಸಂಧಾನ

ಡಿ.15 ರಂದು ಸುಪ್ರೀಂ ಕೋರ್ಟ್ ನೀಡುವ ಆದೇಶದನ್ವಯ ಹೈಕೋರ್ಟ್ ಮುಂದಿನ ವಿಚಾರಣೆ ನಡೆಸಬೇಕಿದೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆ ಆರಂಭಗೊಳ್ಳುವುದು ಡಿ.15 ರ ನಂತರವೇ ಆಗ ವಿಚಾರಣೆ ನಡೆಸಿ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶದಂತೆ ಚುನಾವಣೆ ನಡೆಸಲು ಸೂಚಿಸಿದರೂ ಡಿ.31ರ ಗಡುವಿನೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸುವುದಂತೂ ಅಸಾಧ್ಯ.

ಹೀಗಾಗಿ ಸದ್ಯಕ್ಕಂತೂ ಬಿಬಿಎಂಪಿಗೆ ಚುನಾವಣೆ ನಡೆಯಲು ಸಾಧ್ಯವೇ ಇಲ್ಲ. ಸದ್ಯದಲ್ಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 2021 ರ ಜನಗಣತಿ ಆರಂಭವಾಗಲಿದೆ. ಗಣತಿ ಕಾರ್ಯ ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷವಾದರೂ ಬೇಕಾಗುತ್ತದೆ. ಡಿಸಂಬರ್ ತಿಂಗಳೊಳಗೆ ಬಿಬಿಎಂಪಿಗೆ ಚುನಾವಣೆ ನಡೆಯದಿದ್ದರೆ ಮುಂದಿನ ಚುನಾವಣೆಯನ್ನು 2021ರ ಜನಗಣತಿ ಪ್ರಕಾರವೇ ನಡೆಸಬೇಕಿರುವುದರಿಂದ ಇನ್ನು ಒಂದು ವರ್ಷಗಳ ಕಾಲ ಬಿಬಿಎಂಪಿ ಚುನಾವಣೆ ನಡೆಯೋದೆ ಡೌಟ್ ಆಗಿದೆ.

ಗುಂಡಿನ ದಾಳಿ ನಡೆಸಿ ಪರಾರಿಯಾದ ದುಷ್ಕರ್ಮಿಗಳಿಗಾಗಿ ವ್ಯಾಪಕ ಶೋಧ

ಬಿಬಿಎಂಪಿ ಚುನಾವಣೆ ನಡೆಯದಿರಲು ಕಾರಣಕರ್ತರೇ ನಗರವನ್ನು ಪ್ರತಿನಿಸುವ ಶಾಸಕರುಗಳು ಎಲ್ಲಿ ಬಿಬಿಎಂಪಿ ಚುನಾವಣೆ ನಡೆದರೆ ಟಿಕೆಟ್ ಸಿಗದವರು ಎಂಎಲ್‍ಎ ಚುನಾವಣೆಯಲ್ಲಿ ನಮ್ಮ ವಿರುದ್ಧ ಕೆಲಸ ಮಾಡಬಹುದು ಎಂಬ ಕಾರಣದಿಂದ ಪಕ್ಷಾತೀತವಾಗಿ ಎಲ್ಲ ಪಕ್ಷಗಳ ಶಾಸಕರುಗಳು ಬಿಬಿಎಂಪಿ ಚುನಾವಣೆ ಮುಂದೂಡಿಕೆಗೆ ಕೈ ಜೋಡಿಸಿದ್ದಾರೆ ಎಂದು ಹೆಸರು ಹೇಳಲು ಇಚ್ಚಿಸದ ಬಿಬಿಎಂಪಿ ಮಾಜಿ ಸದಸ್ಯರೊಬ್ಬರು ಅಸಮಾಧಾನ ಹೊರ ಹಾಕಿದ್ದಾರೆ.

BBMP, election, two years, High Court,

Articles You Might Like

Share This Article