ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ಧ : ಸಚಿವ ಅಶ್ವಥ್ ನಾರಾಯಣ

Social Share

ಬೆಂಗಳೂರು,ಸೆ.20- ಬಿಬಿಎಂಪಿ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಸನ್ನದ್ಧವಾಗಿದ್ದು ತಯಾರಿ ನಡೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವಥ್ ನಾರಾಯಣ ತಿಳಿಸಿದ್ದಾರೆ. ಭಾರತದ ಮುಂಚೂಣಿ ಎಲೆಕ್ಟ್ರಿಕ್ ವಾಹನಗಳ ತಯಾರಕ ಕಂಪೆನಿ ಅಲ್ಟಿಗ್ರೀನ್ ಬೆಂಗಳೂರಿನ ಗೊರಗುಂಟೆಪಾಳ್ಯದಲ್ಲಿ ಆರಂಭಿಸಿರುವ ಪ್ರಥಮ ಇವಿ ವೆಹಿಕಲ್ಸ ರೀಟೈಲ್ ಮಾರಾಟ ಮಳಿಗೆಯಲ್ಲಿ ವಾಹನ ಚಲಾಯಿಸುವ ಮೂಲಕ ಉದ್ಘಾಟಿಸಿ ಸಚಿವರು ಮಾತನಾಡಿದರು.

ಬಿಬಿಎಂಪಿ ಕ್ಷೇತ್ರ ಮೀಸಲಾತಿಯಲ್ಲಿ ಯಾವುದೇ ಗೊಂದಲವಿಲ್ಲ,ಎಲ್ಲಾ ಪಾರದರ್ಶಕವಾಗಿದ್ದು ಶೀಘ್ರದಲ್ಲೇ ಚುನಾವಣೆ ನಡೆಯಲಿದ್ದು, ಚುನಾವಣೆ ಎದುರಿಸಲು ಬಿಜೆಪಿ ಕಾರ್ಯತಂತ್ರ ಆರಂಭಿಸಿದೆ ಎಂದು ಅಶ್ವಥ್ ನಾರಾಯಣ್ ಹೇಳಿದರು.

ಇದನ್ನೂ ಓದಿ : ಭಾರತದ ರಾಯಭಾರ ಕಚೇರಿಗೆ ಗೂಗಲ್ ಸಿಇಒ ಸುಂದರ್ ಪಿಚೈ ಭೇಟಿ

ರಾಜ್ಯದಲ್ಲಿ ವಿದ್ಯುತ್ ಕೊರತೆಯೇ ಇಲ್ಲ, ಈಗಾಗಲೇ ಹಲವು ರಾಜ್ಯಗಳಿಗೆ ವಿದ್ಯುತ್ ಮಾರಾಟ ಮಾಡುವ ಮೂಲಕ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿ ರಾಜ್ಯವಾಗಿದ್ದು ವಿಶ್ವ ಮಟ್ಟಕ್ಕೆ ವಿದ್ಯುತ್ ಪೂರೈಕೆ ಮಾಡುವಷ್ಟು ಬಲಿಷ್ಟವಾಗಿದೆ ಎಂದು ಹೇಳಿದ ಸಚಿವರು, ಆರ್ಥಿಕ ಮತ್ತು ಆರೋಗ್ಯ ದೃಷ್ಟಿಯಿಂದ ವಿದ್ಯುತ್ ಚಾಲಿತ ವಾಹನಗಳ ಬಳಕೆ ಅನಿವಾರ್ಯ ಎಂದು ಅಭಿಪ್ರಾಯ ಪಟ್ಟರು.

ಪರಿಸರ ಕಾಳಜಿಯಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಅಗತ್ಯವಾಗಿದೆಯಲ್ಲದೆ ಪೆಟ್ರೋಲ್ ಡೀಸೆಲ್ ಬೆಲೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಆಧಾರಿತ ವಾಹನಗಳ ಬಳಕೆ ಉತ್ತಮ, ಅಲ್ಲದೇ ಪೆಟ್ರೋಲ್ ಡೀಸೆಲ್ ಬೆಲೆ ಏರಿಳಿತದಿಂದಾಗಿ ಆರ್ಥಿಕ ಸ್ಥಿರತೆ ಇಲ್ಲದ ಕಾರಣಕ್ಕೆ ಎಲೆಕ್ಟ್ರಿಕ್ ವಾಹನಗಳ ಬಳಕೆ ಪ್ರಮಾಣ ಹೆಚ್ಚುತ್ತಿದೆ ಎಂದು ಸಚಿವರು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ : ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಇಲ್ಲ

ಅಲ್ಟಿಗ್ರೀನ್ ಕಂಪೆನಿ ಸಿಇಒ ಡಾ.ಅಮಿತಾಭ್ ಸರನ್ ಮಾತನಾಡಿ, ಸರಕು ಸಾಗಾಣೆ ವಾಹನಗಳನ್ನು ಪೂರೈಸುವುದು ಸಂಸ್ಥೆ ಮುಖ್ಯ ಗುರಿ.ನಾವು ಭಾರತೀಯ ಸರಕು ಮತ್ತು ಪ್ರಯಾಣಿಕರ ಚಲನಶೀಲತೆಯ ಅಗತ್ಯಗಳಿಗೆ ಸೂಕ್ತವಾದ ಅತ್ಯಾಧುನಿಕ ಇವಿ ಗಳನ್ನು ತಲುಪಿಸುವುದನ್ನು ಮುಂದುವರಿಸುತ್ತೇವೆ. ಮುಂದಿನ 6 ತಿಂಗಳಲ್ಲಿ ದೇಶದ ಪ್ರಮುಖ 40 ನಗರಗಳಲ್ಲಿ ಅಲ್ಟಿಗ್ರೀನ್ ಕಾರ್ಯಾಚರಣೆಯನ್ನು ವಿಸ್ತರಿಸಲಿದೆ ಎಂದು ತಿಳಿಸಿದರು. ಮ್ಯಾಗ್ನಮ್ ವೆಂಚರ್ಸ್ ಮಾಲೀಕ ಡಾ.ಎಂ ಪಿ ಶಾಮ್ ಮತ್ತಿತರರು ಉಪಸ್ಥಿತರಿದ್ದರು.

Articles You Might Like

Share This Article