ಬಿಬಿಎಂಪಿ ಚುನಾವಣೆಗೆ ಆಯೋಗ ಸಿದ್ಧತೆ

Social Share

ಬೆಂಗಳೂರು,ಆ.20- ಬಿಬಿಎಂಪಿ ಚುನಾವಣಾ ತಯಾರಿಯನ್ನು ಚುನಾವಣಾ ಆಯೋಗ ಆರಂಭಿಸಿದೆ. 198 ವಾರ್ಡ್‍ಗಳಿಂದ 243 ವಾರ್ಡ್‍ಗಳಾಗಿರುವ ಬಿಬಿಎಂಪಿಯ ವಾರ್ಡ್‍ವಾರು ಮತದಾರರ ಪಟ್ಟಿ ತಯಾರಿಸಲು ಸಿದ್ಧತೆ ನಡೆಸಲಾಗಿದೆ. ಹೀಗಾಗಿ ಇಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹಾಗೂ ಎಲೆಕ್ಷನ್ ನೋಡಲ್ ಅಧಿಕಾರಿಗಳ ಜೊತೆ ಇಂದು ಮಹತ್ವದ ಸಭೆ ನಡೆಸಲಾಗುತ್ತಿದೆ.

ಸಭೆಯಲ್ಲಿ ವಾರ್ಡ್ ಮರುವಿಂಗಡಣೆ, ಮೀಸಲಾತಿ ಹಾಗೂ ಚುನಾವಣೆ ನಡೆಸೋಕೆ ಅಗತ್ಯವಿರೋ ಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಮತದಾರರ ಪಟ್ಟಿ .ವಾರ್ಡ್ ವ್ಯಾಪ್ತಿ, ಮತದಾನಕ್ಕೆ ಅವಶ್ಯಕತೆ ಇರೋ ಮಸ್ಟರಿಂಗ್ ಸೆಂಟರ್‍ಗಳ ರಚನೆ ಬಗ್ಗೆಯೂ ಚರ್ಚೆ ನಡೆಸುವ ಸಾಧ್ಯತೆಗಳಿವೆ.

ಸಧ್ಯ ಸಿದ್ದಗೊಂಡಿರುವ ಮತದಾರರ ಪಟ್ಟಿಯೊಂದಿಗೆ ಹೊಸ ಮತದಾರರನ್ನು ಸೇರ್ಪಡೆ ಮಾಡಿ ಒಟ್ಟು ಮತದಾರರ ಸಂಖ್ಯೆಯನ್ನು ಸೆ.22ರೊಳಗೆ ಪ್ರಕಟಿಸಬೇಕು ಎಂಬ ನಿಟ್ಟಿನಲ್ಲಿ ಚುನಾವಣಾ ಆಯೋಗ ಈ ಮಹತ್ವದ ಸಭೆ ನಡೆಸುತ್ತಿದೆ.

ಚುನಾವಣೆಗೆ ಬೇಕಾಗಿರೋ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗಳ ನೇಮಕ ಸೇರಿಂದಂತೆ ಬ್ಯಾಲೆಟ್ ಪೇಪರ್ ಹಾಗೂ ಇವಿಎಂ ಯಂತ್ರಗಳ ತರಬೇತಿ ನೀಡುವ ಕುರಿತಂತೆಯೂ ಚರ್ಚಿಸಲಾಗುತ್ತಿದೆ. ಈಗಾಗಲೇ ವಾರ್ಡ್‍ವಾರು ಮತದಾರರ ಪಟ್ಟಿ ಸಿದ್ದಪಡಿಸುವ ತಯಾರಿ ಜೋರಾಗಿದ್ದು, ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ವಾರ್ಡ್ ವ್ಯಾಪ್ತಿಯ ಅಧಿಕ ಜಿಲ್ಲಾ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ.

ಅಧಿಕ ಜಿಲ್ಲಾ ಚುನಾವಣಾಧಿಕಾರಿಗಳಾಗಿ ನೇಮಕಗೊಂಡಿರುವ ಬಿಬಿಎಂಪಿ ಜಂಟಿ ಆಯುಕ್ತರುಗಳು ಹಾಗೂ ಉಪ ಆಯುಕ್ತರು ವಾರ್ಡ್‍ವಾರು ಮತದಾರರ ಪಟ್ಟಿ ಸಿದ್ದತೆಯಲ್ಲಿದ್ದಾರೆ. 198ರಿಂದ 243 ವಾರ್ಡ್‍ಗಳಾಗಿರುವುದರಿಂದ ಬಹುತೇಕ ವಾರ್ಡ್‍ಗಳ ಸ್ವರೂಪ ಬದಲಾಗಿದ್ದು, ಅದಕ್ಕೆ ತಕ್ಕಂತೆ ಮತದಾರರ ಪಟ್ಟಿ ಸಿದ್ದಪಡಿಸಲಾಗುತ್ತಿದೆ.

ಚುನಾವಣಾಧಿಕಾರಿಗಳ ವಿವರ, ವ್ಯಾಪ್ತಿ ಆಡಳಿತ ವಿಭಾಗದ ಬಿಬಿಎಂಪಿ ವಿಶೇಷ ಆಯುಕ್ತರು ರಾಜರಾಜೇಶ್ವರಿನಗರ, ಶಿವಾಜಿನಗರ, ಶಾಂತಿನಗರ, ಗಾಂನಗರ, ರಾಜÁಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ ಕ್ಷೇತ್ರಗಳಿಗೆ ಚುನಾವಣಾಧಿಕಾರಿಗಳಾಗಿದ್ದಾರೆ.

ಬಿಬಿಎಂಪಿ ದಕ್ಷಿಣ ವಲಯದ ಜಂಟಿ ಆಯುಕ್ತರುಗೋವಿಂದರಾಜನಗರ, ವಿಜಯನಗರ, ಬಸವನಗುಡಿ, ಪದ್ಮನಾಭನಗರ, ಬಿಟಿಎಂ ಲೇಔಟï, ಜಯನಗರ, ಬೊಮ್ಮನ ಹಳ್ಳಿ.

ಮಹದೇವಪುರ ವಲಯ ಜಂಟಿ ಆಯುಕ್ತರು ಕೆಆರ್ ಪುರ, ಮಹಾಲಕ್ಷ್ಮೀಲೇಔಟï, ಮಲ್ಲೇಶ್ವರ, ಹೆಬ್ಬಾಳ, ಪುಲಕೇಶಿನಗರ, ಸರ್ವಜ್ಞನಗರ, ಸಿವಿ ರಾಮನ್ ನಗರ ಮತ್ತು ಬೆಂಗಳೂರು ನಗರ ನಗರ ಜಿಲ್ಲಾಧಿಕಾರಿಗಳು ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ ಮಹದೇವಪುರ, ಬೆಂಗಳೂರು ದಕ್ಷಿಣ, ಆನೇಕಲ್ ವಿಧಾನಸಭಾ ಕ್ಷೇತ್ರಗಳ ಚುನಾವಣಾಕಾರಿಗಳಾಗಿ ನಿಯೋಜನೆಗೊಂಡಿದ್ದಾರೆ.

ರಾಜ್ಯ ಚುನಾವಣಾ ಆಯೋಗ ಇಂದು ಕರೆದಿರುವ ಮಹತ್ವದ ಸಭೆಯಲ್ಲಿ ಈ ಮೇಲಿನ ಎಲ್ಲಾ ಅಕಾರಿಗಳು ಪಾಲ್ಗೊಳ್ಳುತ್ತಿದ್ದು, ಸಭೆಯಲ್ಲಿ ಬಿಬಿಎಂಪಿ ಚುನಾವಣಾ ದಿನಾಂಕ ಘೋಷಣೆ ಸೇರಿದಂತೆ ಇನ್ನಿತರ ಹಲವಾರು ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ತಿಳಿದುಬಂದಿದೆ.

Articles You Might Like

Share This Article