ಬಿಬಿಎಂಪಿ ಸಿಬ್ಬಂದಿಗೆ ಧೈರ್ಯ ತುಂಬಿದ ಷಡಕ್ಷರಿ

Social Share

ಬೆಂಗಳೂರು,ಡಿ.2- ಸರ್ಕಾರಿ ನೌಕರರು ಯಾವ ಪಕ್ಷದ ಮಕ್ಕಳಲ್ಲ. ಬದಲಾಗಿ, ಸರ್ಕಾರಿ ಮಕ್ಕಳು. ಹಾಗಾಗಿ, ಪಕ್ಷದ ಪರವಾಗಿ, ಜನಪ್ರತಿಧಿನಿಗಳ ಪರವಾಗಿ ನಾವು ಎಂದೂ ಕೆಲಸ ಮಾಡುವುದಿಲ್ಲ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ತಿಳಿಸಿದ್ದಾರೆ.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ನೌಕರರ ಭವನದಲ್ಲಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಪ್ರಮುಖರು ಹಾಗೂ ಸಿಬ್ಬಂದಿಯನ್ನು ಭೇಟಿ ಮಾಡಿ ಅವರು ಮಾತುಕತೆ ನಡೆಸಿದರು.

ಚುನಾವಣೆ ಪ್ರಕ್ರಿಯೆ ಸಂಬಂಧ ಎರಡು ಲಕ್ಷ ಶಿಕ್ಷಕರು ಹೆಚ್ಚುವರಿ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾನೂನಿನಲ್ಲಿ ಹೀಗೆ ಕೆಲಸ ಮಾಡಿಕೊಳ್ಳಲು ಯಾವುದೇ ಅವಕಾಶ ಇಲ್ಲ.ಆದರೂ, ಒತ್ತಡ ಹೇರಿ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಗಡಿ ಭಾಗದಲ್ಲಿ ಮರಾಠಿ ಶಾಲೆ ಸ್ಥಾಪನೆಗೆ ತಡೆ

ಇಡೀ ರಾಜ್ಯದಲ್ಲಿ ಎರಡು ಲಕ್ಷಕ್ಕೂ ಅಕ ಖಾಲಿ ಹುದ್ದೆಗಳು ಖಾಲಿ ಉಳಿದಿವೆ.ಅದರಲ್ಲೂ ಸಾವಿರಾರು ಯೋಜನೆಗಳು ಜಾರಿ ಮಾಡಲಾಗುತ್ತಿದೆ. ಹೀಗೆ, ಹಲವು ಕೆಲಸಗಳಲ್ಲಿ ಸರ್ಕಾರಿ ನೌಕರರನ್ನು ತೊಡಗಿಸಿಕೊಂಡು ಒತ್ತಡ ಹೇರಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮತದಾರರ ದತ್ತಾಂಶ ಕಳವು ನಮ್ಮ ಬಿಬಿಎಂಪಿ ಸಿಬ್ಬಂದಿ ಅಥವಾ ಅಧಿಕಾರಿಗಳಿಂದ ಆಗುವುದಿಲ್ಲ. ಕೇಂದ್ರ ಚುನಾವಣೆ ಆಯೋಗದ ಸೂಚನೆಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ಸಿಬ್ಬಂದಿಯ ಪಾತ್ರ ಇರುವುದಿಲ್ಲ.
ಇನ್ನೂ, ಮತದಾರರ ಪಟ್ಟಿಯೂ ಆನ್‍ಲೈನ್‍ನಲ್ಲೇ ಲಭ್ಯವಿದೆ. ಇದನ್ನು ಯಾರು ಬೇಕಾದರೂ ನೋಡಬಹುದಾಗಿದೆ. ಹೀಗಿರುವಾಗ, ಯಾವುದೇ ಅಕ್ರಮ ಮಾಡಲು ಹೀಗೆ ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದರು.

ಕನ್ನಡ ಬಾವುಟ ಹಾರಿಸಿದ ಯುವಕನಿಗೆ ಪೊಲೀಸ್ ಥಳಿತ : ತನಿಖೆಗೆ ಸಿಎಂ ಸೂಚನೆ

ಇದಕ್ಕೂ ಮೊದಲು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕರಣದಿಂದ ಪಾಲಿಕೆ, ಕಂದಾಯ ಇಲಾಖೆ ಅಧಿಕಾರಿಗಳು, ನೌಕರರು ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಅವರನ್ನು ಭೇಟಿ ಮಾಡಿ ಧೈರ್ಯ ತುಂಬಿರುವುದು ಸಂತಸ ತಂದಿದೆ ಎಂದು ನುಡಿದರು.

ಚಿಲುಮೆ ಸಂಸ್ಥೆ ಮೇಲೆ ಕ್ರಮ ಕೈಗೊಳ್ಳಬೇಕು. ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಮತ್ತು ಸಿಇಒ ನಡೆಸುವ ತನಿಖೆಗೆ ಸಿದ್ದವಿದ್ದು ಅವರಿಗೆ ಮಾನಸಿಕವಾಗಿ ಹಿಂಸೆ ನೀಡಬಾರದು ಮನವಿ ಮಾಡಿದರು.

BBMP, Employees, president, shadakshari,

Articles You Might Like

Share This Article