ಬಿಬಿಎಂಪಿ ನೌಕರರ ಬಂದ್ ಯಶಸ್ವಿ

Social Share

ಬೆಂಗಳೂರು,ಮಾ.1- ಏಳನೇ ವೇತನ ಆಯೋಗ ರಚನೆ ಹಾಗೂ ಓಪಿಎಸ್ ಯೋಜನೆ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ನಡೆಸುತ್ತಿರುವ ಮುಷ್ಕರ ಬೆಂಬಲಿಸಿ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆ ಯಶಸ್ವಿಯಾಗಿದೆ.

ಬಿಬಿಎಂಪಿಯಲ್ಲಿ ಸೇವೆ ಸಲ್ಲಿಸುತ್ತಿರುವ 17 ಸಾವಿರಕ್ಕೂ ಹೆಚ್ಚು ನೌಕರರು ಇಂದು ತಮ್ಮ ಕಚೇರಿಗಳಿಗೆ ಹಾಜರಾಗದೆ ಪ್ರತಿಭಟನೆಯಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ವ್ಯಕ್ತಪಡಿಸಿದರು.ಸರ್ಕಾರ ಹಾಗೂ ಬಿಬಿಎಂಪಿ ಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಮತ್ತು ನೌಕರರ ಜೀವ ಉಳಿಸಿ ಉತ್ತಮ ಜೀವನ ನಿರ್ವಹಣೆಗೆ ಸರ್ಕಾರ ಈ ಕೂಡಲೇ ವೇತನ ಹೆಚ್ಚಳ ಮಾಡಬೇಕು ಎಂದು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್‍ರಾಜ್ ಒತ್ತಾಯಿಸಿದರು.

ಬಿಬಿಎಂಪಿ ಅಕಾರಿ ಮತ್ತು ನೌಕರರ ವೇತನ ಮಾತ್ರ ಕಡಿಮೆ. ಕೊರೋನ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದಾರೆ.ಚುನಾವಣೆ ಕಾರ್ಯ ಮತ್ತು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಹಾಗೂ ನಾನ ಸಮಸ್ಯೆಗಳು ಇದ್ದರು .ಕುಟುಂಬದ ಕಡೆ ಗಮನಹರಿಸದೇ ಬೆಂಗಳೂರು ನಗರ ಅಭಿವೃದ್ದಿಗೆ ಹಗಲಿರಳು ಶ್ರಮಿಸುತ್ತಿದ್ದಾರೆ.

ತಿಂಗಳಾರಂಭದಲ್ಲೇ ಶಾಕ್, ಎಲ್‌ಪಿಜಿ ದರ ಏರಿಕೆ, ಇಂದಿನಿಂದಲೇ ಜಾರಿ

ತನ್ನ ಅರ್ಧ ಜೀವನ ಸೇವೆ ಸಲ್ಲಿಸುವ ಅಕಾರಿ,ನೌಕರರು ನಿವೃತ್ತಿ ನಂತರ ವಯೋಸಹಜ ಖಾಯಿಲೆ ಮತ್ತು ಜೀವನ ನಿರ್ವಹಣೆ ಮಾಡಲು ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿ ಇರುತ್ತಾರೆ. ಸಂದ್ಯಾಕಾಲದಲ್ಲಿ ಹಿರಿಯ ಜೀವಗಳಿಗೆ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡಿದರೆ ವಿಶ್ರಾಂತ ಜೀವನ ಸುಖವಾಗಿ ಕಳೆಯಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಸರ್ಕಾರಿ ನೌಕರರ ವೇತನ ಶೇ.17 ರಷ್ಟು ಏರಿಕೆ ಮಾಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಇತರ ಬೇಡಿಕೆಗಳನ್ನು ಈಡೇರಿಸುವ ಭರವಸೆ ನಮಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರದ ಭರವಸೆ ಹಿನ್ನಲೆಯಲ್ಲಿ ಹೋರಾಟ ಮುಂದುವರೆಸಬೇಕೇ ಬೇಡವೆ ಎಂಬ ಬಗ್ಗೆ ಸರ್ಕಾರಿ ನೌಕರರ ಸಂಘ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.ಸಂಘದ ಪದಾಕಾರಿಗಳಾದ ಆಶ್ವಥ್,ಸುರೇಶï, ಕೆ.ಜಿ.ರವಿ, ಮಚಂದ್ರ,ಸಾಯಿಶಂಕರ್,ರುದ್ರೇಶ್‍ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

#BBMP, #employees, #strike, #successful,

Articles You Might Like

Share This Article