ವಾಗ್ವಾದ, ಹೈಡ್ರಾಮಗಳ ನಡುವೆ ಮತ್ತೆ ಆರಂಭವಾದ ಒತ್ತುವರಿ ತೆರವು ಕಾರ್ಯ

Social Share

ಬೆಂಗಳೂರು, ಸೆ.19- ಕಳೆದ ಎರಡು ದಿನಗಳಿಂದ ತಟಸ್ಥವಾಗಿದ್ದ ಒತ್ತುವರಿ ತೆರವು ಕಾರ್ಯಾಚರಣೆ ಇಂದು ಮತ್ತೆ ಪ್ರಾರಂಭವಾಗಿದ್ದು, ಮಹದೇವಪುರದ ಹಲವೆಡೆ ಜೆಸಿಬಿಗಳು ಘರ್ಜಿಸಿವೆ. ಮಾಲೀಕರು ಹಾಗೂ ಪಾಲಿಕೆ ಅಧಿಕಾರಿಗಳ ವಾಕ್ಸಮರದ ನಡುವೆ ತೆರವು ಕಾರ್ಯಾಚರಣೆ ನಡೆದಿದ್ದು, ಮಾರತ್ತಹಳ್ಳಿ ಪೊಲೀಸ್ ಠಾಣೆ ಹಿಂಭಾಗ ಬೆಳ್ಳಂದೂರು ಕೆರೆ
ಕೋಡಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಜಲಮಂಡಳಿಯ ಎಸ್‍ಟಿಪಿ ಬ್ರಿಡ್ಜ್‍ಅನ್ನು ತೆರವುಗೊಳಿಸಲಾಯಿತು.

ಇದರಿಂದ ಮಳೆ ಬಂದಾಗ ಪ್ರವಾಹ ಸೃಷ್ಟಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ತೆರವು ಮಾಡಲಾಯಿತು. ದೊಡ್ಡವರನ್ನು ಉಳಿಸಲು ಬಡವರ ಮೇಲೆ ಬಿಬಿಎಂಪಿ ಅಧಿಕಾರಿಗಳು ಪ್ರತಾಪ ತೋರುತ್ತಿದ್ದು, ಪೂರ್ವ ಪಾರ್ಕ್ ರಿಡ್ಜ್ ವಿಲ್ಲಾವನ್ನು ಡೆಮಾಲಿಷ್ ಮಾಡದೆ ಬಡವರ ಶೆಡ್‍ಗಳು, ಮನೆಗಳಿಗೆ ಜೆಸಿಬಿ, ಬುಲ್ಡೋಜರ್ ನುಗ್ಗಿಸಿ ತೆರವುಗೊಳಿಸಲಾಗಿದೆ.

ಯಾವುದಾದರೂ ಒಂದು ಕಡೆಯಿಂದ ತೆರವು ಕಾರ್ಯಾಚರಣೆ ಮಾಡಿ. ಎಲ್ಲ ಬಿಟ್ಟು ಮಧ್ಯದಲ್ಲಿರುವ ಜಾಗವನ್ನು ಏಕೆ ತೆರವು ಮಾಡುತ್ತೀರ ಎಂದು ಶೆಡ್ ಮಾಲೀಕರು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ದೊಡ್ಡ ದೊಡ್ಡ ಬಿಲ್ಡಿಂಗ್‍ಗಳನ್ನು ಬಿಟ್ಟು ನಮ್ಮ ಶೆಡ್‍ಗಳನ್ನು ಒಡೆದು ಹಾಕ್ತೀರಲ್ಲ, ಭಾಗ್ಮನೆ, ಪೂರ್ವಪಾರ್ಕ್ ರಿಡ್ಜ್ ಆಸ್ತಿಯನ್ನು ಬಿಟ್ಟು ನಮ್ಮ ಕಡೆ ಬರೋದು ಯಾವ ಸೀಮೆ ನ್ಯಾಯ. ವಿಲ್ಲಾ ಜಾಗವನ್ನು ತೆರವು ಮಾಡದೆ ಖಾಲಿ ಜಾಗ ತೆರವು ಮಾಡುತ್ತಿದ್ದೀರಲ್ಲ? ಎಲ್ಲಿಂದ ಆರಂಭವಾಗಿ ಎಲ್ಲಿಗೆ ಅಂತ್ಯವಾಗುತ್ತೋ ಅಲ್ಲಿಂದ ತೆರವು ಮಾಡಿಕೊಂಡು ಬನ್ನಿ. ಮಧ್ಯೆ ಬಂದು ತೆರವು ಮಾಡ್ತೀರಲ್ಲ. ದೊಡ್ಡವರನ್ನು ಉಳಿಸೋಕೆ ನಮ್ಮ ಮೇಲೆ ಬ್ರಹ್ಮಾಸ್ತ್ರ ತೋರಿಸ್ತೀರಲ್ಲ ಎಂದು ಶೆಡ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ವಾಗ್ವಾದ ಹೆಚ್ಚಾಗುತ್ತಿದ್ದಂತೆ ಪೊಲೀಸರು ಹೆಚ್ಚು ಭದ್ರತೆ ಮಾಡಿಕೊಂಡು ಪಾಲಿಕೆ ಅಧಿಕಾರಿಗಳು ಕಾರ್ಯಾಚರಣೆ ಮುಂದುವರೆಸಿದರು.

ಹೈಡ್ರಾಮಾ: ಒತ್ತುವರಿಯಾದ ದೊಡ್ಡ ಕಟ್ಟಡವನ್ನು ಒಡೆಯಬೇಕೆಂದು ಸ್ಥಳೀಯ ವ್ಯಕ್ತಿಯೊಬ್ಬ ಪಟ್ಟು ಹಿಡಿದಿದ್ದು, ರಾಜಕಾಲುವೆ ಮೇಲೆ ಮಾರ್ಕಿಂಗ್ ಮಾಡಿದ ಕಟ್ಟಡವನ್ನು ತೆರವು ಮಾಡದೆ ನಮ್ಮ ಜಾಗವನ್ನು ತೆರವು ಮಾಡಿದ್ದೀರಿಲ್ಲ ಎಂದು ಸ್ಥಳೀಯ ವ್ಯಕ್ತಿ ಆನಂದ್ ಪಟ್ಟು ಹಿಡಿದಾಗ ಮಣಿದ ಪಾಲಿಕೆ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿದರು.

ವಿಪ್ರೋ, ಸಲಾರ್‍ಪುರಿಯಾ ಸಂಸ್ಥೆಯಿಂದ ಭಾರೀ ಒತ್ತುವರಿ ಆರೋಪಗಳು ಕೇಳಿಬಂದಿದ್ದು, ಸಾವಳಕೆರೆಗೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯ 10 ಅಡಿಯಷ್ಟು ಜಾಗವನ್ನು ವಿಪ್ರೋ, ಸಲಾರ್‍ಪುರಿಯಾ ಸಂಸ್ಥೆಗಳು ಒತ್ತುವರಿ ಮಾಡಿಕೊಂಡಿವೆ.
ಈಗಾಗಲೇ ವಿಪ್ರೋ ಕಾಂಪೌಂಡ್ ವಾಲ್‍ಗೆ 2.4 ಅಡಿ ಮೀಟರ್ ಮಾರ್ಕ್ ಮಾಡಲಾಗಿದ್ದು, ಸಲಾರ್‍ಪುರಿಯಾದಿಂದ ರಾಜಕಾಲುವೆಯನ್ನು ಒಂದಿಂಚೂ ಬಿಡದೆ ಒತ್ತುವರಿ ಮಾಡಲಾಗಿದೆ.

ವಿಪ್ರೋ ತಡೆಗೋಡೆ ತೆರವಿಗೆ ಜೆಸಿಬಿ ಬರುತ್ತಿದ್ದಂತೆ ಪಾಲಿಕೆ ಅಕಾರಿಗಳಿಗೆ ಬಂದ ಫೆÇೀನ್‍ಕಾಲ್‍ನಿಂದ ಕಾರ್ಯಾಚರಣೆಗೆ ಬ್ರೇಕ್ ಬಿದ್ದಿದೆ. ನಾಮಕಾವಸ್ಥೆಗೆ 2.4 ಮೀಟರ್ ಮಾರ್ಕಿಂಗ್ ಮಾಡಿ 4 ಕಲ್ಲುಗಳನ್ನು ತೆರವು ಮಾಡಿ ಪಾಲಿಕೆ ಅಕಾರಿಗಳು ಹೊರಟಿದ್ದಾರೆ.

ವಾಗ್ವಾದ, ಹೈಡ್ರಾಮಾ ಹಾಗೂ ಒತ್ತಡಗಳ ನಡುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಮಹದೇವಪುರ ವಲಯದಲ್ಲಿ ಒತ್ತುವರಿ ತೆರವು ಕುರಿತಂತೆ ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ ಮಾತನಾಡಿ, ಈಗಾಗಲೇ ಐದು ಕಡೆ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದೆ. ವಿಪ್ರೋ ಒತ್ತುವರಿ ಮಾಡಿಕೊಂಡಿರುವ ಜಾಗದಲ್ಲಿ ಮಾರ್ಕಿಂಗ್ ಮಾಡಲಾಗಿದೆ. ಜಲಮಂಡಳಿಯ ಎಸ್‍ಟಿಪಿ ಪ್ಲಾಂಟ್ ಬಳಿಯ ಬ್ರಿಡ್ಜ್ ತೆರವು ಮಾಡಲಾಗುತ್ತಿದೆ.

ವಿಜಯಲಕ್ಷ್ಮಿ ಪುರದಲ್ಲಿ ಶೆಡ್‍ಗಳು, ಸಕ್ರ ಆಸ್ಪತ್ರೆ ಹಿಂಭಾಗ ಮೋರಿ ತೆರವು ಮಾಡಲಾಗುತ್ತಿದೆ. ಸ್ಟೆರ್ಲಿಂಗ್ ಅಪಾರ್ಟ್ ಮೆಂಟ್‍ಗೆ ನೋಟಿಸ್ ನೀಡಲಾಗಿದೆ. ವಿಪ್ರೋ ಸಂಸ್ಥೆ ಒತ್ತುವರಿ ಮಾಡಿಕೊಂಡಿರುವ ಕಾಂಪೌಂಡ್ ತೆರವಿಗೆ ಗ್ಯಾಸ್ ಕಟಿಂಗ್ ಮಾಡಬೇಕಾಗಿದೆ. ಹಾಗಾಗಿ ತಾತ್ಕಾಲಿಕವಾಗಿ ಕೆಲಸ ಸ್ಥಗಿತಗೊಳಿಸಲಾಗಿದೆ ಎಂದರು.

Articles You Might Like

Share This Article