ಮೈಸೂರು,ಸೆ.20- ಬೆಂಗಳೂರು ನಗರದಾದ್ಯಂತ ಒತ್ತುವರಿ ತೆರವು ಮಾಡಲಾಗುವುದು. ರಾಜಕಾರಣಿಗಳೇ ಇರಲಿ, ಬಡವರು, ಶ್ರೀಮಂತರೇ ಇರಲಿ ಒತ್ತುವರಿ ತೆರವು ನಿಶ್ಚಿತ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಮೈಸೂರಿನಲ್ಲಿಂದು ಮಾತನಾಡಿದ ಅವರು, ಸದ್ಯಕ್ಕೆ ಬೆಂಗಳೂರಿನ ಎರಡು ವಲಯದಲ್ಲಿ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಬೆಂಗಳೂರಿನೆಲ್ಲೇಡೆ ಒತ್ತುವರಿ ತೆರವು ಕಾರ್ಯ ಮಾಡಲಾಗುವುದು. ಬಡವರು ಶ್ರೀಮಂತರು ಎನ್ನದೇ ಎಲ್ಲಾ ಒತ್ತುವರಿ ತೆರವು ಮಾಡಲಾಗುತ್ತದೆ. ಬಡವರಿಗೆ ನೆರವು ನೀಡುವ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಲಾಗುವುದು ಎಂದರು.
ಇದನ್ನೂ ಓದಿ : ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಇಲ್ಲ
ಒತ್ತುವರಿ ತೆರವು ಕಾರ್ಯದಲ್ಲೂ ರಾಜಕಾರಣ ಮಾಡುತ್ತಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಎಲ್ಲಾ ವಿಚಾರಗಳಲ್ಲೂ ರಾಜಕಾರಣ ಮಾಡಲಾಗುತ್ತಿದೆ. ರಾಜಕಾರಣದಲ್ಲಿ ಆರೋಪ- ಪ್ರತ್ಯಾರೋಪಗಳು ಸಹಜ.
ಬಡವರು ಅನ್ನೋ ಕಾರಣಕ್ಕೆ ಒತ್ತುವರಿ ತೆರವು ನಿಲ್ಲಿಸಲು ಸಾಧ್ಯವಿಲ್ಲ. ಎಲ್ಲಾ ತೆರವುಗೊಳಿಸಿ ಬಡವರು ಅಂತಾ ಬಿಡಲು ಆಗುವುದಿಲ್ಲ. ರಾಜಕಾರಣಿಗಳೆ ಇರಲಿ, ಬಡವರು, ಶ್ರೀಮಂತರೇ ಇರಲಿ ಒತ್ತುವರಿ ತೆರವು ಮಾಡುತ್ತೇವೆ ಎಂದರು.