ಶೇಮ್..ಶೇಮ್.. : ಬಿಬಿಎಂಪಿ ಇಂಜಿನಿಯರ್‌ಗಳಿಗೆ ಖಾಸಗಿಯವರಿಂದ ಕ್ಲಾಸ್

Social Share

ಬೆಂಗಳೂರು,ಅ.21- ಗುಂಡಿ ಮುಕ್ತ ನಗರವನ್ನಾಗಿಸಲು ಬಿಬಿಎಂಪಿ ಹೊಸ ಪ್ಲಾನ್ ಕಂಡುಕೊಂಡಿದೆ. ಗುಂಡಿ ಗಂಡಾಂತರಕ್ಕೆ ಬ್ರೇಕ್ ಹಾಕಲು ಮುಂದಾಗಿರುವ ಬಿಬಿಎಂಪಿ ಪಾಲ್‍ಹೋಲ್‍ನಿಂದ ಹೋದ ಮಾನವನ್ನು ಮತ್ತೆ ರಿಕವರಿ ಮಾಡಿಕೊಳ್ಳಲು ತೀರ್ಮಾನಿಸಿದೆ.

ಡಾಂಬರು ಹಾಕುವುದರಲ್ಲಿ ನಾವೇ ನಿಸ್ಸೀಮರು ಎಂದು ಬೀಗುತ್ತಾ, ಟಾರು ಕಿತ್ತು ಬಂದ ನಂತರ ಹ್ಯಾಪ್ ಮೋರೆ ಹಾಕಿಕೊಂಡು ಮೇಲಾಕಾರಿಗಳಿಂದ ಛೀಮಾರಿ ಹಾಕಿಸಿಕೊಂಡಿರುವ ಪಾಲಿಕೆ ಎಂಜಿನಿಯರ್‍ಗಳಿಗೆ ಫಿಕ್ಸ್ ಮೈ ಸ್ಟ್ರೀಟ್ ಸಾಫ್ಟ್‍ವೇರ್ ಎಂಜಿನಿಯರ್‍ಗಳಿಂದ ಪಾಠ ಹೇಳಿಸಿಕೊಡಲು ನಿರ್ಧರಿಸಲಾಗಿದೆ.

ಲಕ್ಷ ಲಕ್ಷ ಸಂಬಳ ಪಡೆದು ನೆಮ್ಮದಿಯಾಗಿರುವ ಬಿಬಿಎಂಪಿ ಎಂಜಿನಿಯರ್‍ಗಳಿಗೆ ಖಾಸಗಿ ಎಂಜಿನಿಯರ್‍ಗಳು ಗುಂಡಿ ಮುಚ್ಚೋ ಪಾಠ ಹೇಳಿಕೊಡಲಿದ್ದಾರಂತೆ. ಗುಂಡಿ ಬಿದ್ದ ರಸ್ತೆಗಳನ್ನು ಆಗಾಗ ಮುಚ್ಚುತ್ತಿದ್ದರೂ ಪದೆ ಪದೇ ಗುಂಡಿ ಬೀಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿ ಹಿರಿಯ ಅಧಿಕಾರಿಗಳು ಪಾಲಿಕೆ ಎಂಜಿನಿಯರ್‍ಗಳಿಗೆ ಪಾಠ ಕಲಿಸಲು ತೀರ್ಮಾನಿಸಿದ್ದಂತಿದೆ.

ಕಿತ್ತೊಯ್ತು 18 ಕೋಟಿ ರಸ್ತೆ, ಸೂಪರ್ ಆಗಿದೆ 4 ಲಕ್ಷ ರಸ್ತೆ

ಗುಂಡಿ ಗಂಡಾಂತರದಿಂದ ನಗರವನ್ನು ರಕ್ಷಿಸುವ ಉದ್ದೇಶದಿಂದ ನಗರದ ಎಂಟು ವಲಯಗಳ ಎಂಜಿನಿಯರ್‍ಗಳಿಗೆ ಫಿಕ್ಸ್ ಮೈ ಸ್ಟ್ರೀಟ್ ಎಂಜಿನಿಯರ್‍ಗಳಿಂದ ಟ್ರೈನಿಂಗ್ ಕೊಡಿಸಲು ತೀರ್ಮಾನಿಸಲಾಗಿದೆ ಎಂದು ಬಿಬಿಎಂಪಿ ಪ್ರಧಾನ ಅಭಿಯಂತರ ಪ್ರಹ್ಲಾದ್ ತಿಳಿಸಿದ್ದಾರೆ.

ಫಿಕ್ಸ್ ಮೈ ಸ್ಟ್ರೀಟ್ ಆಪ್‍ನಲ್ಲಿ ಪ್ರತಿನಿತ್ಯ ಹಾಳಾದ ರಸ್ತೆಗಳ ಚಿತ್ರಣಗಳು ಲಭ್ಯವಾಗುತ್ತಿವೆ. ಈ ಗುಂಡಿಗಳನ್ನು ಹೇಗೆ ಮುಚ್ಚಬೇಕು. ಗುಂಡಿ ಮುಚ್ಚಬೇಕಾದ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಮಿಶ್ರಣ ಉಪಯೋಗಿಸ ಬೇಕು. ಹೇಗೆ ಉಪಯೋಗಿಸಬೇಕು ಹಾಗೂ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಖಾಸಗೀ ಎಂಜಿನಿಯರ್‍ಗಳು ಪಾಲಿಕೆ ಎಂಜಿನಿಯರ್‍ಗಳಿಗೆ ಟ್ಯೂಷನ್ ಹೇಳಿಕೊಡಲಿದ್ದಾರಂತೆ.

ಲಕ್ಷ ಲಕ್ಷ ಸಂಬಳ ಕಿಸೆಗಿಳಿಸುವ ಬಿಬಿಎಂಪಿ ಎಂಜಿನಿಯರ್‍ಗಳಿಗೆ ಕೆಲಸ ಕಲಿಸಿಕೊಡಲು ಮತ್ತೆ ಬಿಬಿಎಂಪಿಯೇ ಲಕ್ಷ ಲಕ್ಷ ಹಣ ಖರ್ಚು ಮಾಡುವಂತಾಗಿರುವುದು ಮಾತ್ರ ದುರಂತವೆ ಸರಿ.

Articles You Might Like

Share This Article