ಬೆಂಗಳೂರು,ಮಾ.2- ಪಾಲಿಕೆ ವ್ಯಾಪ್ತಿಯ ರಾಜಕಾಲುವೆಗಳಲ್ಲಿ ಇನ್ನು ಮುಂದೆ ಯಾವುದೇ ಪ್ರವಾಹ ಅಥವಾ ಅವಘಡ ಸಂಭವಿಸದಂತೆ 55 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಜಯರಾಮ್ ರಾಯ್‍ಪುರ್ ತಿಳಿಸಿದ್ದಾರೆ.
2022-23ನೆ ಸಾಲಿನಲ್ಲಿ ಅಮೃತ ನಗರೋತ್ಥಾನ ಯೋಜನೆಯಡಿ 6 ಸಾವಿರ ಕೋಟಿ ರೂ. ವೆಚ್ಚದಲ್ಲಿ 2146 ಕಿಮೀ ಉದ್ದದ ರಸ್ತೆ, 67 ಕೆರೆಗಳನ್ನು ಅಭಿವೃದ್ಧಪಡಿಸಲಾಗಿದೆ. 11 ಹೊಸ ಪಾರ್ಕ್, 42 ಹೊಸ ಶಾಲಾ ಕಟ್ಟಡ, 40 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣ ಮಾಡಲಾಗಿದ್ದು, ಈ ಎಲ್ಲ ಯೋಜನೆಗಳನ್ನು ಮಾರ್ಚ್ ಅಂತ್ಯದೊಳಗೆ ಮುಕ್ತಾಯಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಬಿಬಿಎಂಪಿಯ ಶಾಲಾ-ಕಾಲೇಜುಗಳಿಗೆ ಹೈಟೆಕ್ ಸ್ಪರ್ಶ
152 ರಾಜಕಾಲುವೆ ಒತ್ತುವರಿ ಗಳನ್ನು ತೆರವುಗೊಳಿಸಲಾಗಿದೆ. 195ಕಿಮೀ ಉದ್ದದ ರಾಜಕಾಲುವೆಗಳಿಗೆ ಕಾಂಕ್ರೀಟ್ ತಡೆಗೋಡೆ ನಿರ್ಮಿಸಲಾಗುತ್ತಿದೆ. ಎಷ್ಟೇ ಪ್ರಮಾಣದ ಮಳೆಯಾದರೂ ಪ್ರವಾಹ ಉಂಟಾಗದಂತೆ ಕೆ-100 ಹೆಸರಿನಲ್ಲಿ ಕೋರಮಂಗಲ ಕಣಿವೆಯ ರಾಜಕಾಲುವೆಯ ಮೊದಲ ಹಂತವನ್ನು ಕಾರ್ಯಾರಂಭಗೊಳಿಸಲಾಗಿದೆ.
500ಕಿಮೀ ರಾಜಕಾಲುವೆಗಳಲ್ಲಿ ತಡೆಗೋಡೆ ನಿರ್ಮಾಣ ಮಾಡಲು 195ಕಿಮೀ ಉದ್ದದ ರಾಜಕಾಲುವೆ ಅಭಿವೃದ್ಧಿಪಡಿಸಲು ಕಳೆದ ವರ್ಷ 1920 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ಎಲ್ಲ ಯೋಜನೆಗಳು ವರ್ಷಾಂತ್ಯದೊಳಗೆ ಪೂರ್ಣಗೊಳ್ಳಲಿವೆ.
ನಗರದಲ್ಲಿರುವ ಬೃಹತ್ ಕೆರೆಗಳಿಗೆ ಕೋಡಿ ಗೇಟ್‍ಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಉಳಿಕೆ ಕಾಮಗಾರಿಗಳಿಗಾಗಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 15 ಕೋಟಿ ರೂ.ಗಳ ಅನುದಾನ ನಿಗದಿಪಡಿಸಲಾಗಿದೆ.
ಮೆಜೆಸ್ಟಿಕ್‍ನಲ್ಲಿ ಮಲಗಿದ್ದವನ ಕೊಲೆ, ಮೂವರ ಮೇಲೆ ಹಲ್ಲೆ
ರಸ್ತೆ ಗುಂಡಿ ಮುಚ್ಚುವ ಕಾಮಗಾರಿಯನ್ನು ಪಾಲಿಕೆ ಆರಂಭಿಸಿದ್ದು, ಫಿಕ್ಸ್ ಮೈ ಸ್ಟ್ರೀಟ್ ಎಂಬ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್‍ನಲ್ಲಿ ಯಾವುದೇ ನಾಗರಿಕರು ರಸ್ತೆಗುಂಡಿಗಳ ಛಾಯಾಚಿತ್ರ ಅಪ್‍ಲೋಡ್ ಮಾಡಿದರೆ ತಕ್ಷಣ ಗುಂಡಿ ಮುಚ್ಚುವ ಯೋಜನೆಯನ್ನು ಈ ವರ್ಷ ಸುವಿಸ್ತಾರವಾಗಿ ಹಮ್ಮಿಕೊಳ್ಳಲಾಗುವುದು ಎಂದು ರಾಯ್‍ಪುರ್ ತಿಳಿಸಿದ್ದಾರೆ.
BBMP, flood, prevention, 55 crore, grant,