ಕೊಳವೆ ಬಾವಿ ಹಗರಣ : ಬಿಬಿಎಂಪಿ ಮಾಜಿ ಸದಸ್ಯರಿಗೆ ಕಂಟಕ

Social Share

ಬೆಂಗಳೂರು,ಜ.2- ಕೊಳವೆ ಬಾವಿ ಹಾಗೂ ಶುದ್ಧ ಕುಡಿಯುವ ನೀರು ಘಟಕ ಸ್ಥಾಪಿಸುವ ಯೋಜನೆಯಲ್ಲಿ ನಡೆದಿದೆ ಎನ್ನಲಾದ 969 ಕೋಟಿ ರೂ. ಅವ್ಯವಹಾರ ಪ್ರಕರಣದ ಬೆನ್ನು ಹತ್ತಿರುವ ಜಾರಿ ನಿರ್ದೇಶಾನಾಲಯದ ಅಧಿಕಾರಿಗಳು ತಪ್ಪಿತಸ್ಥ ಬಿಬಿಎಂಪಿ ಅಧಿಕಾರಿಗಳ ಬೆವರಿಳಿಸಿದ್ದು, ಕೆಲವು ಅಧಿಕಾರಿಗಳು ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಬಿಬಿಎಂಪಿ ಮಾಜಿ ಸದಸ್ಯರ ಹೆಸರೇಳಿರುವುದರಿಂದ ಕೆಲವು ಮಾಜಿ ಸದಸ್ಯರುಗಳಿಗೆ ನಡುಕ ಶುರುವಾಗಿದೆ.

ಕಳೆದ ನಾಲ್ಕು ದಿನಗಳಿಂದ ಬಿಬಿಎಂಪಿಯ ಹಲವಾರು ಎಂಜಿನಿಯರ್‍ಗಳ ವಿಚಾರಣೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಕೋಟ್ಯಂತರ ರೂ.ಗಳ ಹಗರಣದ ಬಗ್ಗೆ ಇಂಚಿಂಚು ಮಾಹಿತಿ ಪಡೆಯುತ್ತಿದ್ದಾರೆ.

2016 ರಿಂದ 2019ರವರೆಗೆ ನಡಿದಿದೆ ಎನ್ನಲಾದ ಕೊಳವೆಬಾವಿ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಹೆಸರಲ್ಲಿ ಕೋಟ್ಯಂತರ ರೂ.ಗಳ ಹಗರಣದ ನಡೆದಿದೆ ಎಂದು ಎನ್.ಆರ್.ರಮೇಶ್ ಅವರು ದಾಖಲೆ ಸಮೇತ ಎಸಿಬಿಗೆ ದೂರು ನೀಡಿದ್ದರು. ನಂತರ ಈ ಪ್ರಕರಣ ಇಡಿಗೆ ವರ್ಗಾವಣೆಗೊಂಡಿತ್ತು. ಹಗರಣದಲ್ಲಿ 969 ಕೋಟಿ ರೂ.ಗಳ ಗೋಲ್‍ಮಾಲ್ ನಡೆದಿರುವ ಮಾಹಿತಿಯನ್ನಾಧರಿಸಿ ಇಡಿ ಅಧಿಕಾರಿಗಳು ಎಂಜಿನಿಯರ್‍ಗಳ ಚಳಿ ಬಿಡಿಸುತ್ತಿದ್ದಾರೆ.

ಕೆಲವು ಎಂಜಿನಿಯರ್‍ಗಳು ಇಡಿ ಅಧಿಕಾರಿಗಳ ವಿಚಾರಣೆಗೆ ಬೆದರಿ ಕೆಲವು ಬಿಬಿಎಂಪಿ ಮಾಜಿ ಸದಸ್ಯರುಗಳು ನಮ್ಮ ಮೇಲೆ ಒತ್ತಡ ತಂದು ತಪ್ಪು 12 ಕಡೆ ಹಾಕಿರುವ ಬೋರ್‍ವೆಲ್‍ಗಳ ಸಂಖ್ಯೆಗಳನ್ನು 120 ಎಂದು ನಮೂದಿಸಿ ಹಣ ಲಪಟಾಯಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಕ್ರಿಮಿನಲ್ಸ್ ಕೇರ್ ಟೇಕರ್ ಮುಖ್ಯಮಂತ್ರಿ ಬೊಮ್ಮಾಯಿ : ಕಾಂಗ್ರೆಸ್ ಆಕ್ರೋಶ

ಈ ಪ್ರಕರಣದಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್‍ನ ಹಲವಾರು ಮಾಜಿ ಸದಸ್ಯರುಗಳು ಗೋಲ್‍ಮಾಲ್‍ಗೆ ಸಹಕರಿಸಿ ಕೋಟ್ಯಂತರ ರೂ. ಸಾರ್ವಜನಿಕರ ತೆರಿಗೆ ಹಣ ಲೂಟಿ ಹೊಡೆದಿರುವುದು ಗೊತ್ತಾಗಿರುವುದರಿಂದ ಯಾವುದೆ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಕೆಲವು ಬಿಬಿಎಂಪಿ ಮಾಜಿ ಸದಸ್ಯರುಗಳಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.

ವಿಚಾರಣೆಗೊಳಪಡಿಸಿದ ಕೆಲವು ಅಧಿಕಾರಿಗಳನ್ನು ಕಾಮಗಾರಿ ನಡೆದಿತ್ತು ಎನ್ನಲಾದ ಸ್ಥಳಕ್ಕೆ ಕರೆದೊಯ್ದು ಮಹಜರು ಮಾಡಿಸಲಾಗಿದೆ. ಮಹಜರಿನ ವೇಳೆ ಇಡಿ ಅಧಿಕಾರಿಗಳ ಬಳಿ ಇರುವ ದಾಖಲೆಗಳಿಗೂ ಬಿಬಿಎಂಪಿ ಸಿಬ್ಬಂದಿಗಳು ಮತ್ತು ಎಂಜಿನಿಯರ್‍ಗಳು ನೀಡಿರುವ ಮೌಖಿಕ ಹೇಳಿಕೆಗಳ ನಡುವೆ ಭಾರಿ ವ್ಯತ್ಯಾಸ ಕಂಡುಬಂದಿದೆ.

ಹೀಗಾಗಿ ಕೊಳವೆ ಬಾವಿ ಮತ್ತು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಕಾಮಗಾರಿಯಲ್ಲಿ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾಗಿದಂತಾಗಿದೆ. ಹೀಗಾಗಿ ವಿಚಾರಣೆಯನ್ನು ಮತ್ತಷ್ಟು ತೀವ್ರಗೊಳಿಸಲು ತೀರ್ಮಾನಿಸಿರುವ ಬಿಬಿಎಂಪಿ ಅಧಿಕಾರಿಗಳೂ ಶೀಘ್ರದಲ್ಲೇ ತಪ್ಪಿತಸ್ಥ ಬಿಬಿಎಂಪಿ ಮಾಜಿ ಸದಸ್ಯರುಗಳಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ.

ತುನೀಶಾ ಶರ್ಮಾ ಆತ್ಮಹತ್ಯೆ ಹಿಂದೆ ಲವ್ ಜಿಹಾದ್ಇಲ್ಲ : ಶೇಜಾನ್ ಖಾನ್ ಕುಟುಂಬ

ಅದರಲ್ಲೂ ಕೆಲವು ಅಕಾರಿಗಳು ವಿಚಾರಣೆಗೆ ಹಾಜರಾಗದೆ ತಲೆತಪ್ಪಿಸಿಕೊಂಡು ಇಡಿ ಬಲೆಯಿಂದ ಬಚಾವ್ ಆಗಲು ಕೋರ್ಟ್ ಮೊರೆ ಹೋಗಿದ್ದಾರೆ ಎನ್ನಲಾಗಿದೆ. ಅಪ್ಪಿತಪ್ಪಿ ಇಡಿ ಅಕಾರಿಗಳು ಕೇಳೋ ಪ್ರಶ್ನೆಗೆ ಸರಿಯಾಗಿ ಉತ್ತರ ಕೊಡ್ಲಿಲ್ಲ ಅಂದ್ರೆ ಬಂಧನದ ಭೀತಿಯಿಂದ ನ್ಯಾಯಲಯದಿಂದ ನಿರೀಕ್ಷಣಾ ಜಾಮೀನು ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.

BBMP, former member, drinking water, plant, enforcement directorate,

Articles You Might Like

Share This Article