ಬೆಂಗಳೂರು,ಜ.10- ಸಿಲಿಕಾನ್ ಸಿಟಿ ಬೆಂಗಳೂರು ಮತ್ತಷ್ಟು ಹೈಟೆಕ್ ಆಗುತ್ತಿದೆ. ಇದುವರೆಗೂ ಪೊರಕೆ ಹಿಡಿದು ಕಸ ಗುಡಿಸುತ್ತಿದ್ದ ಪೌರ ಕಾರ್ಮಿಕರ ಕೈಗೆ ಹೈಟೆಕ್ ಕಸ ಗುಡಿಸುವ ಯಂತ್ರಗಳು ಬಂದಿವೆ. ಚಳಿ,ಮಳೆ,ಗಾಳಿ, ಧೂಳು ಎನ್ನದೆ ಕಸ ಗುಡಿಸುವ ಕಾರ್ಯ ಮಾಡುತ್ತಿದ್ದ ಪೌರ ಕಾರ್ಮಿಕರು ಇನ್ನು ಮುಂದೆ ಯಂತ್ರಗಳ ಮೂಲಕ ಸಲೀಸಾಗಿ ಕಸ ಗುಡಿಸಬಹುದಾಗಿದೆ.
ಬಿಎಂಪಿ ವ್ಯಾಪ್ತಿಯಲ್ಲಿ 14 ಸಾವಿರ ಕಿ.ಮೀ. ರಸ್ತೆಗಳಿವೆ.ಅದರಲ್ಲಿ 1,400 ಕಿಮೀ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಾಗಿದ್ದರೆ, ಉಳಿದ ರಸ್ತೆಗಳು ವಾರ್ಡ್ ರಸ್ತೆಗಳಾಗಿವೆ. ಈ ಎಲ್ಲ ರಸ್ತೆಗಳನ್ನು ಪೌರ ಕಾರ್ಮಿಕರು ಪ್ರತಿನಿತ್ಯ ಗುಡಿಸಬೇಕಿತ್ತು.
ಪೌರ ಕಾರ್ಮಿಕರ ಇಂತಹ ಪರಿಸ್ಥಿತಿಯನ್ನು ತಪ್ಪಿಸುವ ಉದ್ದೇಶದಿಂದ ಬಿಬಿಎಂಪಿ ಮ್ಯಾನ್ಯುಯಲ್ ಸ್ವೀಪಿಂಗ್ ಯಂತ್ರಗಳ ಖರೀದಿಗೆ ಮನಸು ಮಾಡಿದೆ. 3.30 ಕೋಟಿ ರೂ. ವೆಚ್ಚದಲ್ಲಿ ಒಟ್ಟು 815 ಮ್ಯಾನ್ಯುಯಲ್ ಪುಶ್ ಆಪರೇಟಿವ್ ಸ್ವೀಪಿಂಗ್ ಯಂತ್ರಗಳನ್ನು ಖರೀದಿಸಲಾಗುತ್ತಿದೆ.
ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಸಾಲದ ಪ್ರಮಾಣ ಹೆಚ್ಚಳ : ಸಿದ್ದರಾಮಯ್ಯ
ಪ್ರತಿ ಯಂತ್ರವು 30 ಕೆಜಿ ತೂಕವಿರಲಿದೆ. ಯಂತ್ರದ ಕೆಳಭಾಗದಲ್ಲಿ ಟ್ರಾಲಿ ಮಾದರಿ ಚಕ್ರಗಳನ್ನು ಅಳವಡಿಸಲಾಗಿರುತ್ತದೆ. ಹೀಗಾಗಿ ಯಂತ್ರವನ್ನು ಸ್ಟಾರ್ಟ್ ಮಾಡಿದ ಕೂಡಲೇ ತನ್ನಿಂದ ತಾನೇ ರಸ್ತೆಯಲ್ಲಿ ಸಾಗಲಿದೆ.
ಆಧುನಿಕ ಕಸ ಗುಡಿಸುವ ಯಂತ್ರಗಳ ಬಳಕೆ ಕುರಿತಂತೆ ಪೌರಕಾರ್ಮಿಕರಿಗೆ ತರಬೇತಿಯನ್ನು ಬಿಬಿಎಂಪಿ ವತಿಯಿಂದಲೆ ನೀಡಲಾಗುತ್ತದೆ.
ವಿಧಾನಸೌಧದೆದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಜ.13 ರಂದು ಶಂಕುಸ್ಥಾಪನೆ
ಒಟ್ಟಾರೆ, ಹೈಟೆಕ್ ವಿಧಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಸ್ವಚ್ಚ ಭಾರತ ಅಭಿಯಾನದಲ್ಲಿ ಹೋದ ಮಾನವನ್ನು ಮತ್ತೆ ಕಾಪಾಡಿಕೊಳ್ಳಲು ಬಿಬಿಎಂಪಿ ಈಗಾಗಲೇ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎನ್ನಲಾಗಿದೆ.
BBMP, garbage, civic workers,