ಬಿಬಿಎಂಪಿ ಕೇಂದ್ರ ಕಚೇರಿಯ ಪಾರಂಪರಿಕ ಕಟ್ಟಡಕ್ಕೆ ಧಕ್ಕೆ

Spread the love

ಬೆಂಗಳೂರು, ಮೇ 24- ಆಧುನಿಕ ಶೈಲಿಗೆ ಮೊರೆಹೋಗಿ ಸುಮಾರು 90 ವರ್ಷಗಳ ಇತಿಹಾಸವಿರುವ ಪಾರಂಪರಿಕ ಕಟ್ಟಡವಾದ ಬಿಬಿಎಂಪಿ ಕೇಂದ್ರ ಕಚೇರಿಯ ಕಿಟಕಿಗಳನ್ನು ಹೈಟೆಕ್ ಮಾಡುತ್ತಿರುವ ಬಿಬಿಎಂಪಿ ನಡೆಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1993ರಲ್ಲಿ ಕೃಷ್ಣರಾಜ ಒಡೆಯರ್ ಅವರು ಬಿಬಿಎಂಪಿ ಕೇಂದ್ರ ಕಚೇರಿ ಕಟ್ಟಡಕ್ಕೆ ಗುದ್ದಲಿ ಪೂಜೆ ಮಾಡಿದ್ದರು. ಇದೀಗ ಅಂತಹ ಕಟ್ಟಡವನ್ನು ಹೈಟೆಕ್ ಮಾಡಲು ಹೊರಟಿದ್ದಾರೆ. ಇದರಿಂದ ಕಟ್ಟಡದ ಸೌಂದರ್ಯ ಹಾಳಾಗುತ್ತದೆ. ಹಳೆಯ ಶೈಲಿಯ ಕಿಟಕಿಗಳನ್ನು ಅಳವಡಿಸಲಿ ಮತ್ತು ಕಟ್ಟಡದ ಸೌಂದರ್ಯಕ್ಕೆ ಧಕ್ಕೆಯಾಗದಿರಲಿ ಎಂಬುದೇ ನಾಗರಿಕರ ಆಶಯ ಎಂದು ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ತಿಳಿಸಿದ್ದಾರೆ.

Facebook Comments