ಬಿಬಿಎಂಪಿ ಆಂತರಿಕ ತನಿಖೆಯಲ್ಲೂ ಬಯಲಾಯ್ತು ‘ಚಿಲುಮೆ’ ಅಕ್ರಮ

Social Share

ಬೆಂಗಳೂರು,ನ.26- ಚಿಲುಮೆ ಸಂಸ್ಥೆ ನಡೆಸಿರುವ ಅಕ್ರಮಗಳು ಬಿಬಿಎಂಪಿ ನಡೆಸಿದ ಆಂತರಿಕ ತನಿಖೆಯಲ್ಲೂ ಸ್ಪಷ್ಟವಾಗಿದೆ. ತನಿಖೆ ನಡೆಸಿದ ಬಿಬಿಎಂಪಿ ಹಿರಿಯ ಅಧಿಕಾರಿಗಳು ಬಿಎಲ್‍ಓಗಳು ನೀಡಿದ ಉತ್ತರ ಕೇಳಿ ಶಾಕ್ ಆಗಿದ್ದಾರೆ. ಅದೇನು ಅಂದರೆ ನೀವೂ ಬೆಚ್ಚಿ ಬೀಳೋದು ಗ್ಯಾರಂಟಿ.

ಅದೇನು ಅಂತೀರಾ… ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯವನ್ನು ಚಿಲುಮೆ ಸಂಸ್ಥೆಯವರು ಎಸಿ ರೂಮಿನಲ್ಲಿ ಕುಳಿತುಕೊಂಡೇ ಮಾಡುತ್ತಿದ್ದರಂತೆ. ಅದರಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ಕ್ಷಣ ಮಾತ್ರದಲ್ಲಿ ಆಗುತ್ತಿತ್ತು. ಕೇವಲ ಒಂದು ಬಟನ್ ಒತ್ತುವ ಮೂಲಕ ಮತದಾರರ ಹೆಸರುಗಳನ್ನು ಕ್ಷಣ ಮಾತ್ರದಲ್ಲಿ ಡಿಲಿಟ್ ಮಾಡಲಾಗುತಿತ್ತು. ಇನ್ನು ಬಿಬಿಎಂಪಿ ಬಿಎಲ್‍ಒಗಳು ಚಿಲುಮೆ ಟ್ರಸ್ಟ್ ಸಿಬ್ಬಂದಿಗಳು ಹೇಳಿದಂತೆ ಕೇಳುತ್ತಿದ್ದರಂತೆ.

ಚಿಲುಮೆ ಸಂಸ್ಥೆಯವರು ಒಂದು ಫೋನ್ ಕಾಲ್‍ನಿಂದಲೇ ಮತದಾರರ ಹೆಸರು ಡಿಲಿಟ್ ಮಾಡಿಸುತ್ತಿದ್ದರು. ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಚಿಲುಮೆ ಸಂಸ್ಥೆಯವರು ಬರೀ ಫೋನ್ ಕಾಲ್ ಮೂಲಕವೇ 1.69 ಲಕ್ಷ ಮತದಾರರ ಹೆಸರನ್ನು ಡಿಲಿಟ್ ಮಾಡಿಸಿರುವುದು ಆಂತರಿಕ ತನಿಖೆಯಲ್ಲಿ ಸಾಬೀತಾಗಿದೆ.

ಆಸ್ಟ್ರೇಲಿಯಾದಲ್ಲಿ ಮಹಿಳೆ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಭಾರತಿಯನ ಬಂಧನ

ಸುಮಾರು ಒಂದೂವರೆ ಲಕ್ಷ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಡಿಲಿಟ್ ಆಗಿದ್ದರೂ ಡಿಲಿಟ್ ಆಗಿರೋ ದಾಖಲೆ ಮಾತ್ರ ಇದುವರೆಗೂ ಯಾರಿಗೂ ಸಿಕ್ಕಿಲ್ಲ. ಈ ಎಲ್ಲ ಅಂಶಗಳನ್ನು ಗಮನಿಸಿದರೆ, ಚಿಲುಮೆ ಸಂಸ್ಥೆ ಮಾಡಿರುವ ಮತದಾರರ ಹೆಸರು ಡಿಲಿಟ್ ಪ್ರಕರಣದ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿರುವ ಬಗ್ಗೆ ಗುಮಾನಿಯಿದೆ.

ಕಾನೂನಿನ ಪ್ರಕಾರ ಯಾವುದೆ ಮತದಾರರ ಹೆಸರನ್ನು ಬಿಎಲ್ ಒಗಳು ಏಕಾಏಕಿ ಡಿಲಿಟ್ ಮಾಡುವ ಅಧಿಕಾರವಿಲ್ಲ. ಯಾವುದೇ ಒಂದು ಮತದಾರರ ಹೆಸರು ಡಿಲೀಟ್ ಆಗ್ಬೇಕು ಅಂದ್ರೆ ಅದು ನಿಯಮದ ಪ್ರಕಾರವೇ ಆಗ್ಬೇಕು. ಮಾತ್ರವಲ್ಲ ಅದಕ್ಕೆ ಸಾಕಷ್ಟು ಸಮಯವೂ ಬೇಕು.

ಆದರೆ, ಚಿಲುಮೆ ಸಂಸ್ಥೆಯವರು ಕೇವಲ ಎರಡು ತಿಂಗಳಲ್ಲಿ ಒಂದೂವರೆ ಲಕ್ಷ ಮತದಾರರ ಹೆಸರುಗಳನ್ನು ಡಿಲಿಟ್ ಮಾಡಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ಚಿಲುಮೆ ಸಂಸ್ಥೆ ಮಾಡಿರುವ ಕೈಚಳಕಕ್ಕೆ ಬಿಬಿಎಂಪಿ ಅಧಿಕಾರಿಗಳು ಸಾಥ್ ನೀಡಿರುವುದು ಸಾಬೀತಾಗಿರುವುದರಿಂದಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಕಂದಾಯಾಕಾರಿಗಳನ್ನು ಈಗಾಗಲೇ ಅಮಾನತುಗೊಳಿಸಲಾಗಿದೆ.

ಮತದಾರರ ಪಟ್ಟಿ ಮರು ಪರಿಷ್ಕರಣೆಗೆ ಡಿಕೆಶಿ ಆಗ್ರಹ

ಒಟ್ಟಾರೆ ಚಿಲುಮೆ ಸಂಸ್ಥೆ ಮಾಡಿರುವುದು ಕಾನೂನುಬಾಹಿರ ಕಾರ್ಯ ಜಗಜ್ಜಾಹಿ ರಾಗಿರುವುದರಿಂದಲೇ ಈ ಪ್ರಕರಣವನ್ನು ಕೇಂದ್ರ ಚುನಾವಣಾ ಆಯೋಗವೂ ಗಂಭೀರವಾಗಿ ಪರಿಗಣಿಸಿದೆ. ಆಗಿರುವ ತಪ್ಪಿಗೆ ಪ್ರಾಯಶ್ಚಿತ್ತವಾಗಬೇಕಾದರೆ ಅಕ್ರಮಕ್ಕೆ ಕಾರಣರಾದ ಹಿರಿಯ ಅಧಿಕಾರಿಗಳ ತಲೆದಂಡವಾಗಬೇಕು ಎಂದು ಬಿಬಿಎಂಪಿಗೆ ಸೂಚಿಸಿರುವುದರಿಂದಲೇ ಬೆಂಗಳೂರು ಜಿಲ್ಲಾಧಿಕಾರಿ ಶ್ರೀನಿವಾಸ್ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

BBMP, internal, investigation, Voter, ID, scam, Chilume,

Articles You Might Like

Share This Article