ಬಿಬಿಎಂಪಿಯಿಂದ ‘ನನ್ನ ನಗರ ನನ್ನ ಬಜೆಟ್’ ಅಭಿಯಾನಕ್ಕೆ ಚಾಲನೆ

Social Share

ಬೆಂಗಳೂರು, ನ.24- ಘನತ್ಯಾಜ್ಯ ನಿರ್ವಹಣೆ, ರಸ್ತೆ, ಬೀದಿದೀಪ, ಮಳೆನೀರು ಕೊಯ್ಲು ಸೇರಿದಂತೆ ಮೂಲಭೂತ ಸೌಲಭ್ಯಗಳ ಕುರಿತು ನಾಗರಿಕರಿಂದ ಅಭಿಪ್ರಾಯ ಸಂಗ್ರಹಕ್ಕಾಗಿ ಹಮ್ಮಿಕೊಂಡಿರುವ ನನ್ನ ನಗರ ನನ್ನ ಬಜೆಟ್ ಅಭಿಯಾನಕ್ಕೆ ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯಪುರ ಚಾಲನೆ ನೀಡಿದರು.

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪಾಲಿಕೆ ವಾರ್ಷಿಕ ಆಯವ್ಯಯದಲ್ಲಿ ನಾಗರಿಕರ ಸಹಭಾಗಿತ್ವ, ಹೆಚ್ಚಿನ ಪ್ರಮಾಣದಲ್ಲಿ ಆಗಬೇಕೆಂಬ ಉದ್ದೇಶದಿಂದ ಜನಾಗ್ರಹ ಸಂಸ್ಥೆಯು ನನ್ನ ನಗರ-ನನ್ನ ಬಜೆಟ್ ಅಭಿಯಾನವನ್ನು ಕಳೆದ ಏಳು ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ.

ಅಭಿಯಾನದ ಅಂಗವಾಗಿ ಪಾಲಿಕೆಯ 243 ವಾರ್ಡ್‍ಗಳ ನಿಗದಿತ ಸ್ಥಳ ಹಾಗೂ ಜನನಿ ಬಿಡ ಪ್ರದೇಶಗಳಲ್ಲಿ ವಾಹನ ಸಂಚರಿಸಿ ಸಾರ್ವಜನಿಕರ ಸಲಹೆಗಳನ್ನು ಸಂಗ್ರಹಿಸಲಿದೆ ಎಂದರು.

ವೋಟರ್ ಐಡಿ ಹಗರಣ: ರಾಜಕಾರಣಿಗಳ ಸಂಪರ್ಕದ ಬಗ್ಗೆ ಬಾಯಿ ಬಿಡದ `ಚಿಲುಮೆ’ ರವಿ

ಜನಾಗ್ರಹ ಸಂಸ್ಥೆಯು 2023-24ನೆ ಸಾಲಿನ ಆಯವ್ಯಯದಲ್ಲಿ ಯಾವೆಲ್ಲ ಕೆಲಸ ಆಗಬೇಕು ಎಂಬುದರ ಬಗ್ಗೆ ಮುಂದಿನ ಒಂದು ತಿಂಗಳು ಬಜೆಟ್ ವಾಹನದ ಮೂಲಕ ನಗರದಾದ್ಯಂತ ಸಂಚರಿಸಿ ಸಲಹೆಗಳನ್ನು ಸಂಗ್ರಹಿಸಲಿದೆ.
ನಂತರ ಪಾಲಿಕೆಗೆ ವರದಿ ಸಲ್ಲಿಸಲಿದ್ದು, ಅಭಿಪ್ರಾಯಗಳಿಗೆ ತಕ್ಕಂತೆ ಆಯವ್ಯಯದಲ್ಲಿ ಸೇರ್ಪಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಕಳೆದ ವರ್ಷದ ಆಯವ್ಯಯದಲ್ಲಿ 198 ವಾರ್ಡ್‍ಗಳ ಪೈಕಿ ಪ್ರತಿ ವಾರ್ಡ್‍ನಲ್ಲೂ ತಲಾ ಒಂದು ಕೋಟಿ ರೂ. ನಿಗದಿ ಪಡಿಸಲಾಗಿತ್ತು. ಅದನ್ನು ವಾರ್ಡ್ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಹಣ ವ್ಯಯ ಮಾಡಿದ್ದು, ಅದಕ್ಕಾಗಿ ಈಗಾಗಲೇ 70 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಬಾಕಿ ಉಳಿದ 30 ಲಕ್ಷ ರೂ.ಗಳನ್ನು ರಸ್ತೆಗುಂಡಿ ಮುಚ್ಚಲು ಬಳಸಲಾಗುವುದು ಎಂದರು.

ವಾರ್ಡ್ ಪುನರ್ ವಿಂಗಡಣೆ ತಕರಾರು: ಬಿಬಿಎಂಪಿಗೆ ನೋಟೀಸ್..

ವಾರ್ಡ್‍ಗಳಿಗೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕೆಂಬ ಒತ್ತಾಯವಿದ್ದು, ಅದನ್ನು ಪರಿಶೀಲಿಸಿ ಪ್ರತಿ ವಾರ್ಡ್‍ನಲ್ಲಿಯೂ ಆಗಬೇಕಿರುವ ಅಭಿವೃದ್ಧಿ ಹಾಗೂ ಸ್ಥಳೀಯ ಸಮಸ್ಯೆಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಆಲೋಚನೆ ಇದೆ ಎಂದರು. 30 ದಿನಗಳ ಕಾಲ ವಾಹನ ಎಲ್ಲ ವಾರ್ಡ್‍ಗಳಲ್ಲೂ ಸಂಚರಿಸಲಿದ್ದು, ವೆಬ್‍ಸೈಟ್ ಮೂಲಕವೂ ಮಾಹಿತಿ-ಸಲಹೆ ನೀಡಬಹುದಾಗಿದೆ ಎಂದರು.

ಈ ವೇಳೆ ಜನಾಗ್ರಹ ಸಂಸ್ಥೆ ನಾಗರಿಕ ಭಾಗವಹಿಸುವಿಕೆಯ ಯೋಜನಾ ನಾಯಕರಾದ ಸಂತೋಷ್ ನರಗುಂದ ಸೇರಿದಂತೆ ವಿವಿಧ ಎನ್‍ಜಿಒ ಸಂಸ್ಥೆಗಳು ಪಾಲ್ಗೊಂಡಿದ್ದವು.

BBMP, Launching, budget, campaign,

Articles You Might Like

Share This Article