ಬೆಂಗಳೂರು,ಮಾ.7-ರಸ್ತೆ ಸುಗಮ ಸಂಚಾರಕ್ಕೆ ಫ್ಲೈ ಓವರ್‍ಗಳ ನಿರ್ಮಾಣ ಹಾಗೂ ಜಂಕ್ಷನ್‍ಗಳ ನವೀಕರಣ ಕಾರ್ಯಕ್ಕೆ ಮುಂದಾಗಿರುವ ಬಿಬಿಎಂಪಿ ಯೋಜನೆಗಾಗಿ ಕೆಎಐಡಿಎಫ್‍ಸಿಯಿಂದ ಸುಮಾರು 770 ಕೋಟಿ ರೂ.ಗಳ ಸಾಲ ಮಾಡಲು ಮುಂದಾಗಿದೆ.
4 ಹೊಸ ಮೇಲ್ಸೇತುವೆ ನಿರ್ಮಾಣ ಹಾಗೂ ಹಳೆಯ 5 ಜಂಕ್ಷನ್‍ಗಳ ನವೀಕರಣ ಕಾರ್ಯ ಕೈಗೆತ್ತಿಕೊಂಡಿದ್ದು ಯೋಜನೆ ಜಾರಿ ಗಾಗಿ 770 ಕೋಟಿ ರೂ.ಗಳ ಸಾಲ ಪಡೆಯಲು ತೀರ್ಮಾನಿಸಲಾಗಿದೆ ಎಂದು ವಿಶೇಷ ಆಯುಕ್ತ ರವೀಂದ್ರ ತಿಳಿಸಿದ್ದಾರೆ.
ಕೆಎಐಡಿಎಫ್‍ಸಿ ಯಿಂದ ಸಾಲ ಪಡೆಯಲು ಒಪ್ಪಿಗೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಒಪ್ಪಿಗೆ ದೊರೆತ ಕೂಡಲೇ ಸಾಲ ಪಡೆದು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ವಿವರಣೆ ನೀಡಿದ್ದಾರೆ.
ತುಮಕೂರು ರಸ್ತೆಯಿಂದ ನಾಯಂಡಹಳ್ಳಿ ಜಂಕ್ಷನ್ ವರೆಗೆ ಸಿಗ್ನಲ್ ಮುಕ್ತ ಕಾರಿಡಾರ್‍ಗಾಗಿ 70 ಕೋಟಿ ರೂ. ಮಹಾಲಕ್ಷ್ಮೀಲೇಔಟ, ಆರ್‍ಆರ್ ನಗರ ಕುರುಬರಹಳ್ಳಿ ಹಾಗೂ ಮಾಗಡಿ ರಸ್ತೆಯವರೆಗಿನ ತಡೆರಹಿತ ಕಾರಿಡಾರ್‍ಗಾಗಿ 190 ಕೋಟಿ ರೂ., ಯಶವಂತಪುರ ರೈಲ್ವೆ ನಿಲ್ದಾಣ ಬಳಿ ಕೆಳ ಸೇತುವೆಗಾಗಿ 125 ಕೋಟಿ ರೂ, ಬನ್ನೇರುಘಟ್ಟ ರಸ್ತೆಯ ಅಗಲೀಕರಣಕ್ಕೆ 70 ಕೋಟಿ ರೂ.,
AC ಸ್ಫೋಟ : ತಾಯಿ, ಮಕ್ಕಳು ಸಜೀವ ದಹನ
ವಿಲ್ಸನ್ ಗಾರ್ಡನ್ ಮೇಲೇತುವೆಯ ಗ್ರೇಡ್ ಸೆಪರೇಟರ್‍ಗೆ 85 ಕೋಟಿ ರೂ, ಯಲಹಂಕ ಮೇಲೇತುವೆಯ ಗ್ರೇಡ್ ಸೆಪರೇಟರ್‍ಗೆ 60 ಕೋಟಿ, ಹೂಡಿ ಜಂಕ್ಷನ್ , ಐ.ಟಿ.ಪಿ.ಎಲ್ ಬಿಗ್ -ಬಜಾರ್ ಜಂಕ್ಷನ್ ಹಾಗೂ ಹೋಪ್ ಫಾರಂಜಂಕ್ಷನ್‍ಗಳಲ್ಲಿನ ಮೇಲೇತುವೆಗೆ 124 ಕೋಟಿ ರೂ, ಮಿನರ್ವ, ಜಂಕ್ಷನ್ ಗ್ರೇಡ್ ಸೆಪೆರೇಟರ್‍ಗೆ 137 ಕೋಟಿ ರೂ ಹಾಗೂ ಹಳೆ-ಮದರಾಸು ರಸ್ತೆಯ ಸುರಂಜನ್ ದಾಸ್ ಜಂಕ್ಷನ್‍ನಲ್ಲಿಯ ಮೇಲ್ಲೇಖವೆಗೆ 104 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ.
ಹೆಚ್ಚುವರಿ ಹಣದಲ್ಲಿ 770 ಕೋಟಿ ರೂ. ಗಳನ್ನು ಕೆಎಐಡಿಎಫ್‍ಸಿ ಯಿಂದ ಸಾಲ ಪಡೆಯಲು ತೀರ್ಮಾನಿಸಲಾಗಿದೆ.
ಸಾರ್ವಜನಿಕರ ಸುಖಗ ಸಂಚಾರದ ಅನುಕೂಲಕ್ಕಾಗಿ ಕೈಗೆತ್ತಿಕೊಳ್ಳಲಾಗಿರುವ ಈ 9 ಯೋಜನೆಗಳಿಗೆ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಹೆಚ್ಚುವರು 965 ಕೋಟಿ ರೂ. ಹಣ ಒದಗಿಸುತ್ತಿದ್ದೇವೆ.ಇದರಲ್ಲಿ 770 ಕೋಟಿ ರೂ.ಗಳನ್ನು ಸಾಲದ ರೂಪದಲ್ಲಿ ಪಡೆದು ಉಳಿದ ಮೊತ್ತವನ್ನು ಬಿಬಿಎಂಪಿ ಭರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಬಿಗ್ ರಿಲೀಫ್, ಜಾಮೀನು ಮಂಜೂರು
ಬಜೆಟ್ ನಲ್ಲಿ ನಾವು 770 ಕೋಟಿ ಕೆ.ಎ.ಐ.ಡಿ.ಎಫï.ಸಿ ಸಾಲದ ರೂಪದಲ್ಲಿ ಸಾಲದ ಹಣ ವಾಪಸ್ ನೀಡಲು ಸರ್ಕಾರದಿಂದ ಅನುದಾನ ಪಡೆಯಲಿದ್ದೇವೆ. ಏಪ್ರಿಲ್ ಮೊದಲ ವಾರದಿಂದ ಯೋಜನೆಗಳಿಗೆ ಚಾಲನೆ ನೀಡಲಾಗುವುದು.
ಯೋಜನೆ ಸಮಯದಲ್ಲಿ ಪರಿಸರದಲ್ಲಿರುವ ಮರಗಿಡಿಗಳನ್ನು ಸ್ಥಳಾಂತರ ಮಾಡುವ ಅವಕಾಶ ಇದ್ರೆ ಅದಕ್ಕಾಗಿ ಈ ಬಾರಿ ಸಹ ಹೊಸ ಸಸಿಗಳನ್ನು ನೆಟ್ಟಿ ಪರಿಸರ ರಕ್ಷಣೆ ಮಾಡಲಾಗುವುದು ಎಂದು ಅವರು ಹೇಳಿದರು.
BBMP, loan, Rs 770 crore, construction, flyover, junction,