ಬೆಂಗಳೂರು,ಫೆ.18- ಕೋಟಿ ಕೋಟಿ ತೆರಿಗೆ ವಂಚಿಸಿರುವ ಮಂತ್ರಿಮಾಲ್‍ನ ಕೆಲ ಚರಾಸ್ತಿಗಳನ್ನು ಬಿಬಿಎಂಪಿ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಕಳೆದ ಐದು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದೆ ಕಳ್ಳಾಟವಾಡುತ್ತಿರುವ ಮಂತ್ರಿ ಮಾಲ್‍ನವರಿಗೆ ಬಿಸಿ ಮುಟ್ಟಿಸಿರುವ ಬಿಬಿಎಂಪಿ ಅಧಿಕಾರಿಗಳು ಇಂದು ಪೊಲೀಸ್ ಭದ್ರತೆಯೊಂದಿಗೆ ಮಾಲ್‍ಗೆ ತೆರಳಿ ಕೆಲ ಚರಾಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಯೋಗೇಶ್ ನೇತೃತ್ವದ ತಂಡ ಇಂದು ದಿಢೀರ್ ಮಾಲ್‍ಗೆ ತೆರಳಿ ಕಂಪ್ಯೂಟರ್, ಟೆಬಲ್, ಖುರ್ಚಿ ಮತ್ತಿತರ ವಸ್ತುಗಳನ್ನು ಸೀಜ್ ಮಾಡಿದ್ದಾರೆ.
ಬಡವರ ಮನೆ ನಿರ್ಮಾಣದಲ್ಲಿ ಹಗರಣ : ಮಾಜಿ ಅಧಿಕಾರಿ ಅರೆಸ್ಟ್
ತೆರಿಗೆ ಪಾವತಿಸದೆ ಸತಾಯಿಸುತ್ತಿದ್ದ ಮಾಲ್‍ನವರು ಸುಮಾರು 49 ಕೋಟಿ ರೂ.ಗಳ ತೆರಿಗೆ ಪಾವತಿಸಬೇಕಿದೆ. ಆದರೆ, ಅವರು ನ್ಯಾಯಾಯಲದ ಮೊರೆ ಹೋಗಿ ಮತ್ತೆ ತೆರಿಗೆ ಪಾವತಿಸದೆ ವಂಚಿಸುತ್ತಿದ್ದ ಹಿನ್ನಲೆಯಲ್ಲಿ ಇಂದು ದಾಳಿ ನಡೆಸಬೇಕಾಯಿತು ಎಂದು ಯೋಗೇಶ್ ತಿಳಿಸಿದ್ದಾರೆ.
ಉತ್ತರ ಪ್ರದೇಶ : ವಿದ್ಯಾರ್ಥಿವೇತನದಲ್ಲಿ ಭಾರೀ ಭ್ರಷ್ಟಾಚಾರ ಬಯಲು
ಮೂವತ್ತಕ್ಕೂ ಹೆಚ್ಚು ಮಾರ್ಷಲ್‍ಗಳು ಹಾಗೂ ಪೊಲೀಸರೊಂದಿಗೆ ದಾಳಿ ನಡೆಸಿ ಕೆಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈಗಲೂ ತೆರಿಗೆ ಪಾವತಿಸದಿದ್ದರೆ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
BBMP, locks, Mantri Square, Mall, tax dues,