ಬೆಂಗಳೂರು ಸೆ.20- ಮಹದೇವಪುರ ಕ್ಷೇತ್ರದ ವಿವಿಧ ಭಾಗಗಳಲ್ಲಿ ಇಂದು ಕೂಡ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದೆ. ಪೊಲೀಸ್ ಬಂದೋಬಸ್ತ್‍ನಲ್ಲಿ ಪಾಲಿಕೆ ಅಧಿಕಾರಿಗಳು ಇಂದೂ ಸಹ ಕಾರ್ಯಾಚರಣೆ ನಡೆಸಿದ್ದು, ಒತ್ತುವರಿ ಮಾಡಿಕೊಂಡ ಕಟ್ಟಡ, ರಾಜಕಾಲುವೆ ಮತ್ತಿತರ ಸ್ಥಳಗಳಲ್ಲಿ ತೆರುವಗೊಳಿಸಲಾಗುತ್ತಿದೆ.
ಇದನ್ನೂ ಓದಿ : ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಇಲ್ಲ
ತೆರವು ಕಾರ್ಯಾಚರಣೆ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಕಂಡ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಹಂತ ಹಂತವಾಗಿ ತೆರವು ಕಾರ್ಯಾಚರಣೆ ಮಾಡಲಾಗುವುದು. ಮಹದೇವಪುರ ಕ್ಷೇತ್ರದ ಮಾರತ್ತಹಳ್ಳಿ, ಕಸವನಹಳ್ಳಿ, ವಿಪ್ರೋ ಸೇರಿದಂತೆ ಅನೇಕ ಕಡೆ ತೆರವು ಕಾರ್ಯನಿರ್ವಹಿಸುತ್ತದೆ.
ಬೆಳ್ಳಂದೂರು ಸಮೀಪದ ಹರಳೂರಿನಲ್ಲಿ ಸಣ್ಣಪುಟ್ಟ ಮನೆಗಳನ್ನು ತೆರವು ಮಾಡುವುದನ್ನು ಬಿಟ್ಟು ದೊಡ್ಡ ಕಟ್ಟಡ, ಕಂಪೆನಿಗಳ ಒತ್ತುವರಿ ತೆರವು ಮಾಡುವಂತೆ ಸ್ಥಳೀಯರು ಆಗ್ರಹಿಸಿದರು.