ನಮ್ಮ ಕ್ಲಿನಿಕ್‍ಗಳತ್ತ ತಿರುಗಿನೋಡದ ರೋಗಿಗಳು

Social Share

ಬೆಂಗಳೂರು,ಮಾ.4-ಸಾಮಾನ್ಯ ಜನರ ಆರೋಗ್ಯ ದೃಷ್ಟಿಯಿಂದ ನಗರದಲ್ಲಿ ಸ್ಥಾಪಿಸಲಾಗಿರುವ ಬಹು ನಿರೀಕ್ಷಿತ ನಮ್ಮ ಕ್ಲಿನಿಕ್‍ಗಳಿಗೆ ನಿರೀಕ್ಷಿತ ಜನ ಬೆಂಬಲ ಸಿಗುತ್ತಿಲ್ಲ. ಬಡವರು, ಕೂಲಿ ಕಾರ್ಮಿಕರ ಆರೋಗ್ಯ ದೃಷ್ಟಿಯಿಂದ ನಗರದ ಹಲವಾರು ಪ್ರದೇಶಗಳಲ್ಲಿ 108 ನಮ್ಮ ಕ್ಲಿನಿಕ್‍ಗಳನ್ನು ಸ್ಥಾಪಿಸಲಾಗಿದೆ. ಆದರೆ, ಕ್ಲಿನಿಕ್‍ಗಳತ್ತ ರೋಗಿಗಳು ಮಾತ್ರ ಮುಖ ಮಾಡುತ್ತಿಲ್ಲ ಹೀಗಾಗಿ ಬಹುನಿರೀಕ್ಷಿತ ನಮ್ಮ ಕ್ಲಿನಿಕ್ ಯೋಜನೆ ಹಳ್ಳ ಹಿಡಿತ ಎಂಬ ಅನುಮಾನ ಕಾಡತೊಡಗಿದೆ.

108 ಪ್ರದೇಶಗಳಲ್ಲಿ ಓಪನ್ ಆಗಿರುವ ನಮ್ಮ ಕ್ಲಿನಿಕ್‍ಗಳಿಗೆ ಪ್ರತಿನಿತ್ಯ 108 ರೋಗಿಗಳು ಬರುತ್ತಿಲ್ಲ. ಹೀಗಾದರೆ ಕ್ಲಿನಿಕ್ ನಡೆಸುವುದು ಹೇಗೆ ಎಂಬ ಪೇಚಿಗೆ ಬಿಬಿಎಂಪಿ ಸಿಲುಕಿಕೊಂಡಿದೆ. ಜನರ ಮನ ಗೆಲ್ಲಲು ಸಾಧ್ಯವಾಗದಿದ್ದರೂ ಬಿಬಿಎಂಪಿಯವರು 108 ನಮ್ಮ ಕ್ಲಿನಿಕ್‍ಗಳನ್ನು ಸ್ಥಾಪಿಸಿ ಕೋಟಿ ಕೋಟಿ ಹಣ ಲೂಟಿ ಹೊಡೆದ್ರಾ ಎಂಬ ಅನುಮಾನ ಕಾಡಲಾರಂಭಿಸಿದೆ.

ನಮ್ಮ ಕ್ಲಿನಿಕ್‍ಗಳಿಗೆ ರೋಗಿಗಳು ಬಾರದಿರಲು ಕಾರಣ ಏನು ಅಂತಾ ಹುಡುಕುತ್ತಾ ಹೋದರೆ ಅಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ತಿಳಿದುಬಂದಿದೆ.

ಮೈಸೂರಿನಲ್ಲಿ ಮಾ.26ಕ್ಕೆ ಜೆಡಿಎಸ್ ಪಂಚರತ್ನ ಸಮಾರೋಪ

ಬೆಳಿಗ್ಗೆ 9 ಗಂಟೆಗೆ ನಮ್ಮ ಕ್ಲಿನಿಕ್‍ಗಳು ಓಪನ್ ಆದ್ರೆ, 1.30ಕ್ಕೆ ಮುಚ್ಚಲಾಗುತ್ತಿದೆ. ಮತ್ತೆ 2 ಗಂಟೆಗೆ ಓಪನ್ ಮಾಡಿದ್ರೆ 4.30ಕ್ಕೆಲ್ಲಾ ಐಟಿ ಬಿಟಿ ಸಂಸ್ಥೆಗಳ ರೀತಿಯಲ್ಲಿ ಕ್ಲೋಸ್ ಮಾಡಲಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಬೆಳಿಗ್ಗೆಯಿಂದ ಸಂಜೆವರೆಗೆ ಕೂಲಿ ನಾಲಿ ಮನೆಗೆ ಬರುವ ಕೂಲಿ ಕಾರ್ಮಿಕರು 4.30ರೊಳಗೆ ಕ್ಲಿನಿಕ್‍ಗಳಿಗೆ ಬರೋದಾದ್ರು ಹೇಗೆ ಎಂಬ ತಿಳುವಳಿಕೆ ಇಲ್ಲದಾಯಿತೆ ಬಿಬಿಎಂಪಿ ಅಧಿಕಾರಿಗಳಿಗೆ.

ಐಟಿ ಬಿಟಿ ಸಂಸ್ಥೆಗಳಂತೆ ಬಡವರ ಆರೋಗ್ಯ ರಕ್ಷಿಸುವ ಉದ್ದೇಶದಿಂದ ಸ್ಥಾಪಿಸಿರುವ ನಮ್ಮ ಕ್ಲಿನಿಕ್‍ಗಳನ್ನು ಸಂಜೆ 4.30ಕ್ಕೆ ಬಂದ್ ಮಾಡುವ ಬದಲು ರಾತ್ರಿ ಎಂಟು ಗಂಟೆ ಇಲ್ಲವೇ9 ಗಂಟೆವರೆಗೆ ತೆರೆದಿಡುವಂತೆ ಈಗಾಗಲೇ ಹಲವಾರು ಮಂದಿ ಮನವಿ ಮಾಡಿಕೊಂಡಿದ್ದಾರೆ.

ಮಹಾರಾಷ್ಟ್ರದ ಆರು ಕೆಮ್ಮು ಸಿರಪ್ ತಯಾರಕ ಕಂಪನಿಗಳ ಪರವಾನಗಿ ಅಮಾನತು

ರೋಗಿಗಳೆ ಬರದಿರುವ ನಮ್ಮ ಕ್ಲಿನಿಕ್‍ಗಳಿಗೆ ಸದ್ಯಕ್ಕೆ 900 ಸಿಬ್ಬಂದಿಗಳು ಸಾಕು. ಆದರೆ, ಬಿಬಿಎಂಪಿಯವರು ಈಗಾಗಲೇ 1900ಕ್ಕೂ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಂಡಿರುವುದು ಕಂಡು ಬಂದಿದೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಬಾಲಸುಂದರ್ ಅವರು ನಮ್ಮ ಕ್ಲಿನಿಕ್‍ಗಳನ್ನು ಸಂಜೆ ನಂತರವೂ ಓಪನ್ ಮಾಡುವಂತೆ ಬಂದಿರುವ ಸಲಹೆಗಳನ್ನು ಸರ್ಕಾರ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರ ಗಮನಕ್ಕೆ ತಂದು ಸಮಸ್ಯೆಯನ್ನು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

BBMP, namma clinics, patients,

Articles You Might Like

Share This Article