ಬೆಂಗಳೂರು,ಜು.18- ಚಾಮರಾಜಪೇಟೆ ಈದ್ಗಾ ಮೈದಾನದ ಕಿಚ್ಚು ಆರುವ ಮುನ್ನವೇ ಈಗ ಮತ್ತೊಂದು ವಿವಾದ ಭುಗಿಲೆದ್ದಿದೆ. ವಿಜಯನಗರದ ಆರ್‍ಪಿಸಿ ಬಡಾವಣೆಯಲ್ಲಿರುವ ಮಸ್‍ಜಿದ್ ಎ ಅಲ್ ಖುಬ ಎಂಬ ಪ್ರಾರ್ಥನ ಮಂದಿರವನ್ನು ಡೆಮಾಲಿಷನ್ ಮಾಡಲು ಬಿಬಿಎಂಪಿ ನೋಟೀಸ್ ನೀಡಿದೆ.
ನೋಟೀಸ್ ನೀಡಿರುವ ಪ್ರಾರ್ಥನ ಮಂದಿರದಲ್ಲಿ ಮುಸಲ್ಮಾನ್ ಬಾಂಧವರು ನಮಾಜ್ ಮಾಡ್ತಾರೆ ಇಂತಹ ನಮಾಜ್ ಮಾಡುವ ಕಟ್ಟಡವನ್ನ ಈಗ ಡೆಮಾಲಿಷನ್ ಮಾಡಲು ಬಿಬಿಎಂಪಿ ನೋಟೀಸ್ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಪ್ರಾರ್ಥನ ಮಂದಿರವನ್ನು ನಿರ್ಮಿಸುವಾಗ ಸಾರ್ವಜನಿಕರ ಓಡಾಟಕ್ಕೆ ಮೀಸಲಿಟ್ಟ ಐದು ಅಡಿ ಪ್ರದೇಶವನ್ನು ಒತ್ತುವರಿ ಮಾಡಲಾಗಿದೆ ಎಂಬ ಆರೋಪದ ಮೇಲೆ ಡೆಮಾಲೇಷನ್ ಮಾಡಲು ಸೂಚಿಸಲಾಗಿದೆ.
ಒತ್ತುವರಿ ಮಾಡಿ ನಿರ್ಮಿಸಿರುವ ಪ್ರಾರ್ಥನ ಮಂದಿರದ ಒಂದು ಭಾಗವನ್ನು ತೆರವು ಮಾಡಿ ಬಿಬಿಎಂಪಿ ವಶಕ್ಕೆ ಪಡೆಯಲು ಪ್ರಾದೇಶಿಕ ಆಯುಕ್ತರು ನೀಡಿರುವ ಆದೇಶದ ಮೇರೆಗೆ ಮಸೀದಿಯ ಮುಖ್ಯಸ್ಥರಿಗೆ ನೋಟೀಸ್ ನೀಡಲಾಗಿದೆ. ಬಾಷಾ ಎಂಬುವರು ತಮ್ಮ ಹೆಸರಿನಲ್ಲಿದ್ದ 13ನೇ ನಂಬರಿನ ನಿವೇಶನವನ್ನು ಒಂದು ಟ್ರಸ್ಟ್‍ಗೆ ಬರೆದುಕೊಟ್ಟಿದ್ದರು.
ಅಮೀನಾ ಎಂಬುವರು ತಮ್ಮ ಹೆಸರಿನಲ್ಲಿದ್ದ 15 ನೇ ನಂಬರಿನ ನಿವೇಶನವನ್ನು ಮಸೀದಿಗೆ ನೀಡಿದ್ದರು. 13 ಮತ್ತು 15ರ ನಿವೇಶನಗಳಲ್ಲೇ ಇದೀಗ ಮಸೀದಿ ನಿರ್ಮಿಸಿರುವುದು. ಆದರೆ, 13 ಮತ್ತು 15ನೆ ನಂಬರಿನ ನಿವೇಶನಗಳ ನಡುವೆ ಇದ್ದ 5.5 ಅಡಿ ಅಗಲ ಮತ್ತು 45 ಅಡಿ ಉದ್ದದ 14 ನೇ ನಂಬರಿನ ಸ್ವತ್ತು ಬಿಬಿಎಂಪಿ ಹೆಸರಿನಲ್ಲಿತ್ತು.
ಬಿಬಿಎಂಪಿ ಸ್ವತ್ತನ್ನು ಸಾರ್ವಜನಿಕರ ಓಡಾಟಕ್ಕೆ ಮೀಸಲಿಡಲಾಗಿತ್ತು. ಆದರೆ, ಮಸೀದಿ ನಿರ್ಮಾಣ ಮಾಡುವಾಗ 14 ನೇ ನಂಬರಿನ ನಿವೇಶನವನ್ನು ಸೇರಿಸಿ ಮಸೀದಿ ನಿರ್ಮಾಣ ಮಾಡಲಾಗಿದೆ. ಇದೀಗ ಇದೇ ವಿಚಾರಕ್ಕೆ ಸಂಬಂಸಿದಂತೆ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ವಾದ ಪ್ರತಿವಾದಗಳು ನಡೆದು ಅಂತಿಮ ಆದೇಶ ಹೊರಡಿಸಲಾಗಿದೆ. ಅದರಂತೆ ನಿವೇಶನ ಸಂಖ್ಯೆ 14 ರ ಐದು ಅಡಿ ಜÁಗ ಪಾಲಿಕೆ ಸ್ವತ್ತೆಂದು ಘೋಷಿಸಲಾಗಿದೆ.
14 ನೇ ನಂಬರಿನ ನಿವೇಶನ ಸಾರ್ವಜನಿಕರ ಸ್ವತ್ತೆಂದು ಘೋಷಣೆ ಮಾಡಿದ್ದು ತಕ್ಷಣ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲು ಬಿಬಿಎಂಪಿಗೆ ಪ್ರಾದೇಶಿಕ ಆಯುಕ್ತರು ಆದೇಶ ನೀಡಿದ್ದಾರೆ. ಅದರಂತೆ ಬಿಬಿಎಂಪಿ ಕೂಡಾ ಮಸೀದಿಗೆ ಡೆಮಾಲಿಷನ್ ನೋಟೀಸ್ ಜÁರಿ ಮಾಡಿದ್ದು, ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳುವುದೋ ಕಾದು ನೋಡಬೇಕು.