ಬಿಬಿಎಂಪಿ ಕಚೇರಿಗಳ ಮೇಲೆ ಮುಂದುವರಿದ ಎಸಿಬಿ ದಾಳಿ

Social Share

ಬೆಂಗಳೂರು, ಮಾ.2- ಬಿಬಿಎಂಪಿ ಕಚೇರಿಗಳ ಮೇಲೆ ಇಂದು ಕೂಡ ಎಸಿಬಿ ಅಧಿಕಾರಿಗಳ ದಾಳಿ ಮುಂದುವರೆದಿದ್ದು, ಕೇಂದ್ರ ಕಚೇರಿ ಸೇರಿದಂತೆ ಇತರೆ ವಿಭಾಗಗಳಲ್ಲಿ ಕಡತಗಳನ್ನು ಪರಿಶೀಲನೆ ನಡೆಸಿದರು.
ಯಲಹಂಕ, ಬೊಮ್ಮನಹಳ್ಳಿ, ಮಹದೇವಪುರ ಸೇರಿದಂತೆ ವಿವಿಧ ವಲಯ ಕಚೇರಿಗಳಲ್ಲಿ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಎಂಟು ವಲಯಗಳಲ್ಲೂ ಎಸಿಬಿಯ 10 ತಂಡಗಳು ದಾಳಿ ನಡೆಸಿದ್ದು, ಕಂದಾಯ, ಇಂಜಿನಿಯರಿಂಗ್, ಟಿಡಿಆರ್ ವಿಭಾಗಕ್ಕೆ ಸೇರಿದ ಆಕ್ರಮ ಕಡತಗಳ ಹುಡುಕಾಟ ಮುಂದುವರಿದಿದೆ. ಫೀಲ್ಡï ವಿಸಿಟ್ ಮೂಲಕ ಮಾಹಿತಿ ಕಲೆ ಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಮಡಿವಾಳ, ಯಲಹಂಕ, ಹೆಚ್‍ಎಸ್‍ಆರ್ ಲೇಔಟ್, ಬೆಳ್ಳಂದೂರು ಸೇರಿದಂತೆ ಹಲವೆಡೆ ಫೀಲ್ಡï ವಿಸಿಟ್ ನಡೆದಿದೆ. ಅಕ್ರಮ ಕಟ್ಟಡ, ಕಸ, ಟಿಡಿಆರ್ ಟೆಂಡರ್ ಅಕ್ರಮದ ದಾಖಲೆ ಪರಿಶೀಲಿಸಿದ್ದಾರೆ. ದೊಡ್ಡ ದೊಡ್ಡ ಖಾಸಗಿ ಬಿಲ್ಡರ್‍ಗಳಿಗೆ ಟಿಡಿಆರ್ ಮಾರಾಟ ಮಾಡಿರುವುದು ಈಗಾಗಲೇ ಬೆಳಕಿಗೆ ಬಂದಿದೆ. ಮಡಿವಾಳ, ಬೆಳ್ಳಂದೂರು ಕೆರೆ ಒತ್ತುವರಿಯ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Articles You Might Like

Share This Article