ಬೆಂಗಳೂರು, ಡಿ.23- ಹೊಸ ವರ್ಷಾಚರಣೆ ವೇಳೆ ಕೆಲವು ನಿಯಮಗಳನ್ನು ಜಾರಿಗೆ ತರಲು ಬಿಬಿಎಂಪಿ ಮುಂದಾಗುತ್ತಿದೆ. ಆರೋಗ್ಯ ಸಚಿವರ ಸೂಚನೆ ಬೆನ್ನಲ್ಲೇ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅವರು ಸಭೆ ನಡೆಸಿದ್ದಾರೆ. ಇಂದು ಮಧ್ಯಾಹ್ನ ಹೊಟೇಲ್ ಅಸೋಸಿಯೇಷನ್ , ಪಬ್ ಅಂಡ್ ಕ್ಲಬ್, ಬಾರ್ ಅಸೋಸಿಯೇಷನ್, ಅಪಾರ್ಟ್ಮೆಂಟ್ ಅಸೋಸಿಯೇಷನ್ಗಳ ಜತೆ ವರ್ಚುಯಲ್ ಆಗಿ ಸರಣಿ ಸಭೆ ನಡೆಸಲಾಗುತ್ತಿದೆ.
ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆ ಹೇಗಿರಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಯಲಿದೆ.
ಮೂಲಗಳ ಪ್ರಕಾರ, ಕೆಲವೊಂದು ನಿಯಮಗಳು ಜಾರಿಗೆ ಬರುವ ಸಾಧ್ಯತೆ ಇದೆ. ಅವುಗಳಲ್ಲಿ
ಕೊರೊನಾ 4ನೇ ಅಲೆ ಎದುರಿಸಲು ಸಾಮರ್ಥ್ಯ ಬಿಬಿಎಂಪಿಗಿದೆಯೇ..?
- ಅಪಾರ್ಟ್ಮೆಂಟ್ಗಳಲ್ಲಿ ಪಾರ್ಟಿ ಆಯೋಜನೆಗೆ ಎಲ್ಲ ಸದಸ್ಯರ ಒಪ್ಪಿಗೆ ಇರಬೇಕು.
- ಕಾರ್ಯಕ್ರಮಗಳು ಸೇರುವ ಜನಸಂಖ್ಯೆ, ಕಾರ್ಯಕ್ರಮದ ರೂಪ ಕುರಿತ ಮಾಹಿತಿ ಸ್ಥಳೀಯ ಪಾಲಿಕೆ ಆರೋಗ್ಯಾಕಾರಿಗೆ ಮಾಹಿತಿ ಕೊಟ್ಟಿರಬೇಕು.
- ಕ್ಲೋಸ್ ಡೋರ್-ಎಸಿ ಹಾಲ್ನಲ್ಲಿ ಸಭೆ ಮಾಡಿದರೆ ಮಾಹಿತಿ ಕೊಡಬೇಕು.
- ಹೊರ ದೇಶದಿಂದ ಬಂದ ಪ್ರಯಾಣಿಕರ ಕೋವಿಡ್ ಟೆ¸್ಟï ಜವಾಬ್ದಾರಿ ಅಪಾರ್ಟ್ಮೆಂಟ್ ಆಡಳಿತ ಮಂಡಳಿಯದ್ದು.
- ಕೊರೊನಾ ಬೂಸ್ಟರ್ ಡೋಸ್ ಪಡೆಯುವಂತೆ ಪ್ರೇರೇಪಿಸುವುದು ಸೇರಿದಂತೆ ಹಲವು ಸುರಕ್ಷತಾ ಕ್ರಮಗಳ ಬಗ್ಗೆ ಚರ್ಚೆ ನಡೆದಿದೆ.
ಸಭೆಯಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರ ಜತೆ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು, ಮುಖ್ಯ ಆರೋಗ್ಯಾಕಾರಿಗಳು ಕೂಡ ಭಾಗವಹಿಸಿದ್ದಾರೆ.
BBMP, officials, meeting,New Year, celebrations, rules,