ಬಿಬಿಎಂಪಿ ಬರಿ ಓಳು, ಬರಿ ಗೋಳು : ಕನಸಾಗೇ ಉಳಿದ ಗುಂಡಿಮುಕ್ತ ಬೆಂಗಳೂರು

Social Share

ಬೆಂಗಳೂರು,ಜ.3- ಹೊಸ ವರ್ಷಕ್ಕೆ ಗುಂಡಿಮುಕ್ತ ರಸ್ತೆ ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದ ಪಾಲಿಕೆ ಕೊಟ್ಟ ಮಾತು ಉಳಿಸಿಕೊಳ್ಳದೆ ಮತ್ತೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಜನವರಿ 3 ಆದರೂ ಒಂದೇ ಒಂದು ರಸ್ತೆಗುಂಡಿಯನ್ನು ಮುಕ್ತಗೊಳಿಸಿ ಘೋಷಿಸಿಲ್ಲ. ಕೊಟ್ಟ ಮಾತನ್ನು ಪಾಲಿಕೆ ಉಳಿಸಿಕೊಂಡಿಲ್ಲ. ಬೆಂಗಳೂರಿನ ಹಲವು ಕಡೆ ರಸ್ತೆಗುಂಡಿಗಳು ಹಾಗೇ ಉಳಿದಿವೆ.

ರಸ್ತೆಗುಂಡಿ ಬಗ್ಗೆ ಪಾಲಿಕೆ ಫಿಕ್ಸ್ ಮೈ ಸ್ಟ್ರೀಟ್ ಆ್ಯಪ್‍ನ್ನು ಬಿಡುಗಡೆ ಮಾಡುವುದಾಗಿ ಜ.1ರಂದು ತೀರ್ಮಾನಿಸಲಾಗಿತ್ತು. ಇದರಲ್ಲಿ ಜನರು ದೂರುಗಳನ್ನು ನೀಡಬಹುದಾಗಿತ್ತು. ಆದರೆ ಇಲ್ಲಿಯವರೆಗೂ ಆ್ಯಪ್‍ನ್ನು ಕೂಡ ಅನಾವರಣ ಮಾಡಿಲ್ಲ.

ವೇದಿಕೆ ಬಿಟ್ಟಿಳಿಯದ ನಾಯಕರು, ತಳಮಟ್ಟದಲ್ಲಿ ಸೊರಗುತ್ತಿರುವ ಕಾಂಗ್ರೆಸ್

ನಗರದ ಗುಂಡಿ ಮುಕ್ತ ರಸ್ತೆಯನ್ನಾಗಿ ಮಾಡುವಂತೆ ಇಂಜಿನಿಯರ್‍ಗಳಿಗೆ ಡಿ.31ಕ್ಕೆ ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಡೆಡ್‍ಲೈನ್ ನೀಡಿದ್ದರು. ಆದರೆ ಯಾವ ಗುರಿಯನ್ನೂ ಪಾಲಿಕೆ ಮುಟ್ಟಿಲ್ಲ. ಇದರಿಂದ ಸಾರ್ವಜನಿಕರಲ್ಲಿ ಮತ್ತಷ್ಟು ಆಕ್ರೋಶ ಹಿಡಿಶಾಪಕ್ಕೆ ಗುರಿಯಾಗಿದೆ.

BBMP, pothole free, road,

Articles You Might Like

Share This Article