Thursday, June 1, 2023
Homeಇದೀಗ ಬಂದ ಸುದ್ದಿಇಸ್ಕಾನ್, ಅದಮ್ಯಚೇತನ ಯೋಜನೆಗೆ ಕೊಕ್ : ಬ್ಯಾಂಕ್‍ಗೆ ಹಣ ಜಮಾ

ಇಸ್ಕಾನ್, ಅದಮ್ಯಚೇತನ ಯೋಜನೆಗೆ ಕೊಕ್ : ಬ್ಯಾಂಕ್‍ಗೆ ಹಣ ಜಮಾ

- Advertisement -

ಬೆಂಗಳೂರು,ಮೇ 26- ಬರುವ ಜೂನ್ ಒಂದರಿಂದ ಪೌರಕಾರ್ಮಿಕರಿಗೆ ನೀಡಲಾಗುತ್ತಿದ್ದ ಬಿಸಿಯೂಟ ಬಂದ್ ಆಗುವ ಸಾಧ್ಯತೆಗಳಿವೆ. ಪ್ರತಿನಿತ್ಯ ಪೌರ ಕಾರ್ಮಿಕರಿಗೆ ಅದಮ್ಯಚೇತನ ಹಾಗೂ ಇಸ್ಕಾನ್ ಸಂಸ್ಥೆಗಳ ಮೂಲಕ ಪೌರ ಕಾರ್ಮಿಕರಿಗೆ ಬಿಸಿಯೂಟ ನೀಡಲಾಗುತ್ತಿತ್ತು.

ಈ ಸಂಸ್ಥೆಗಳು ನೀಡುವ ಊಟದಲ್ಲಿ ಉಪ್ಪು ಇಲ್ಲ, ಖಾರ ಇಲ್ಲ, ರೂಚಿಯಂತ್ತು ಮೊದ್ಲೆ ಇಲ್ಲ ಅಂತ ಪೌರಕಾರ್ಮಿಕರು ಬಿಬಿಎಂಪಿಗೆ ಕಳೆದ ನಾಲ್ಕು ವರ್ಷಗಳಿಂದ ಶಾಪ ಹಾಕ್ತ ಇದ್ದರು. ಹೀಗಾಗಿ ಬಿಬಿಎಂಪಿ ಮುಖ್ಯ ಅಯುಕ್ತ ತುಷಾರ್ ಗಿರಿನಾಥ್ ಅವರು ಬಿಸಿಯೂಟ ಯೋಜನೆ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ.

ಬಿಬಿಎಂಪಿಯಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ 15700 ಪೌರ ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದು, ಅವರಿಗೆ ಕಳೆದ 4 ವರ್ಷಗಳಿಂದ ಅದಮ್ಯ ಚೇತನ ಹಾಗೂ ಇಸ್ಕಾಂ ಸಂಸ್ಥೆಗಳ ಮೂಲಕ ಬಿಸಿಯೂಟ ಪೂರೈಕೆ ಮಾಡಲಾಗುತ್ತಿದೆ.
ಪೌರ ಕಾರ್ಮಿಕರಿಗೆ ಊಟ ಪೂರೈಸುತ್ತಿದ್ದ ಎರಡು ಸಂಸ್ಥೆಗಳಿಗೆ ಬಿಬಿಎಂಪಿಯಿಂದಲೆ ಹಣ ಪಾವತಿ ಮಾಡಲಾಗುತ್ತಿತ್ತು. ಆದರೂ ಪೌರಕಾರ್ಮಿಕರು ಆಹಾರದ ಬಗ್ಗೆ ಒಂದಲ್ಲ ಒಂದು ರೀತಿ ಅಸಮಧಾನ ವ್ಯಕ್ತಪಡಿಸುತ್ತಲೆ ಇದ್ದರು.

ಮೇ.29 ರಂದು NVS-01 ಉಪಗ್ರಹ ಉಡಾವಣೆಗೆ ಇಸ್ರೋ ಸಿದ್ಧತೆ

15 ಸಾವಿರಕ್ಕೂ ಹೆಚ್ಚು ಪೌರ ಕಾರ್ಮಿಕರಲ್ಲಿ ಶೇ.30 ರಿಂದ 40 ರಷ್ಟು ಪೌರಕಾರ್ಮಿಕರು ಮಾತ್ರ ಊಟ ಸೇವಿಸುತ್ತಿದ್ದರೂ ಉಳಿದ ಆಹಾರ ಪ್ರತಿನಿತ್ಯ ವ್ಯರ್ಥವಾಗುತ್ತಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಆಹಾರ ನೀಡುವುದರ ಬದಲು ಪೌರ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ಯೋಜನೆ ರೂಪಿಸಿತ್ತು.

ಆಹಾರ ವ್ಯರ್ಥವಾಗುವುದರ ಬದಲು ಹಣವನ್ನೇ ಪೌರ ಕಾರ್ಮಿಕರ ಖಾತೆಗೆ ವರ್ಗಾವಣೆ ಮಾಡುವಂತೆ ಬಿಬಿಎಂಪಿ ಸಲ್ಲಿಸಿದ್ದ ಮನವಿಗೆ ಬಿಜೆಪಿ ಸರ್ಕಾರದಲ್ಲಿ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಆದರೆ, ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರುತ್ತಿದ್ದಂತೆ ಬಿಬಿಎಂಪಿಗೆ ಮನವಿಗೆ ಅನುಮೊದನೆ ಸಿಕ್ಕಿದೆ.
ಸರ್ಕಾರದ ಅನುಮತಿ ದೊರೆಯುತ್ತಿದ್ದಂತೆ ತಿಂಡಿ ಹಣ ನೇರವಾಗಿ ಪೌರಕಾರ್ಮಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಲೂ ಪ್ಲಾನ್ ರೂಪಿಸಿರುವ ಬಿಬಿಎಂಪಿ ಪೌರ ಕಾರ್ಮಿಕರ ಖಾತೆಗೆ 50 ರೂ. ವರ್ಗಾವಣೆ ಮಾಡಲು ತೀರ್ಮಾನಿಸಿದೆ.

ಪ್ರತಿ ಊಟಕ್ಕೆ ಜಿಎಸ್‍ಟಿ ಸೇರಿದಂತೆ ಸುಮಾರು 50 ರೂ ಜಮಾ ಮಾಡಲಾಗುವುದು ಈ ಹಣದಲ್ಲಿ ಅವರು ತಮಗೆ ಅನುಕೂಲವಾಗುವ ಕಡೆ ತಿಂಡಿ ಮಾಡಬಹುದಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್ ರಾಯ್‍ಪುರ ತಿಳಿಸಿದ್ದಾರೆ.

ಬಿಬಿಎಂಪಿ ಈ ನಿರ್ಧಾರದಿಂದ ನಿಟ್ಟುಸಿರು ಬಿಟ್ಟಿರುವ ಪೌರ ಕಾರ್ಮಿಕರು ಈಗಲಾದರೂ ನಮಗೆ ಉಪ್ಪು,ಉಳಿ, ಖಾರ ಇಲ್ಲದ ಊಟ ಮಾಡುವುದು ತಪ್ಪಿತ್ತಲ್ಲ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸೋಲಿನ ಆಘಾತದಿಂದ ಇನ್ನೂ ಹೊರ ಬಾರದ ಬಿಜೆಪಿ

ಬಿಬಿಎಂಪಿಯವರು ನಮ ಖಾತೆಗೆ ಪ್ರತಿನಿತ್ಯ 50 ರೂ. ಹಣ ಜಮಾ ಮಾಡುವುದು ಒಳ್ಳೆಯ ನಿರ್ಧಾರ ನಾವು ಅದನ್ನು ಸ್ವಾಗತಿಸುತ್ತೇವೆ ಎನ್ನುತ್ತಾರೆ ಪೌರ ಕಾರ್ಮಿಕರು.

BBMP, #pourakarmika, #ISKCON, #AdamyaChetana, #lunch,

- Advertisement -
RELATED ARTICLES
- Advertisment -

Most Popular