ಬೆಂಗಳೂರು,ಮೇ.30- ನಾಡಿನ ಜನರಿಗೆ ನೀಡಿರುವ ಐದು ಗ್ಯಾರಂಟಿಗಳನ್ನು ಈಡೇರಿಸಲು ಸಂಪನ್ಮೂಲ ಕ್ರೋಡೀಕರಣದತ್ತ ಗಮನ ಹರಿಸಿರುವ ಕಾಂಗ್ರೆಸ್ ಸರ್ಕಾರ ಆದಾಯ ಸಂಗ್ರಹಕ್ಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಅಸ್ತಿತೆರಿಗೆಯಿಂದ ಬರುವ ಆದಾಯದ ಮೇಲೆ ಕಣ್ಣು ಹಾಕಿರುವ ಸರ್ಕಾರ ತೆರಿಗೆ ಹೆಚ್ಚಳ ಮಾಡುವ ಮೂಲಕ ಗ್ಯಾರಂಟಿ ಯೋಜನೆಗಳಿಂದ ಆಗುವ ನಷ್ಟವನ್ನು ತಕ್ಕಮಟ್ಟಿಗೆ ತಗ್ಗಿಸಿಕೊಳ್ಳಲು ಪ್ಲಾನ್ ರೂಪಿಸಿದೆ ಎನ್ನಲಾಗಿದೆ.
ವಸತಿ ಕಟ್ಟಡಗಳಿಗೆ ಶೇ. 10 ರಿಂದ 15 ತೆರಿಗೆ ಏರಿಕೆ ಸಾಧ್ಯತೆ ಹಾಗೂ ವಾಣಿಜ್ಯ ಕಟ್ಟಡಗಳಿಗೆ ಶೇ. 15 ರಿಂದ 20 ರಷ್ಟು ತೆರಿಗೆ ಏರಿಕೆ ಮಾಡುವ ಸಾಧ್ಯತೆಗಳಿವೆ. ಕಳೆದ 12 ವರ್ಷಗಳಿಂದ ಅಸ್ತಿ ತೆರಿಗೆ ಏರಿಕೆ ಅಗಿಲ್ಲ.ಈಗ ಅಸ್ತಿ ತೆರಿಗೆ ಏರಿಕೆ ಮಾಡೋದಕ್ಕೆ ಉಪಮುಖ್ಯ ಮಂತ್ರಿ ಡಿಕೆ ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
BIG NEWS: ಯಾವುದೇ ಷರತ್ ಇಲ್ಲ, ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ: ಸಚಿವ ರಾಮಲಿಂಗಾರೆಡ್ಡಿ
ಕಳೆದ 12 ವರ್ಷಗಳಿಂದ ಆಸ್ತಿ ತೆರಿಗೆ ಹೆಚ್ಚಳ ಮಾಡಿಲ್ಲ. ಹೀಗಾಗಿ ನಾವು ಈ ಬಾರಿ ತೆರಿಗೆ ಹೆಚ್ಚಳ ಮಾಡಲು ರೂಪುರೇಷೆ ಸಿದ್ದಪಡಿಸಿದ್ದೇವೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. ಪಾಲಿಕೆಯ ಕಾನೂನು ಹಾಗು ನಿಯಮಗಳ ಪ್ರಕಾರ, ಪ್ರತಿ 3 ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಮೊತ್ತವನ್ನು ಶೇ. 20 ರಿಂದ 25 ಹೆಚ್ಚಿಸಲು ಅವಕಾಶವಿದೆ.
ಆದರೆ ಕಳೆದ 12 ವರ್ಷಗಳಿಂದ ಅಸ್ತಿ ತೆರಿಗೆ ಮೊತ್ತ ಹೆಚ್ಚಳವಾಗಿಲ್ಲ. ಇದ್ರಿಂದಾಗಿಯೇ ಬಿಬಿಎಂಪಿಯ ಆಸ್ತಿ ತೆರಿಗೆ ಗುರಿ 3500 – 4000 ಕೋಟಿಗೆ ಮಾತ್ರ ಸೀಮಿತವಾಗಿದೆ. ಆದ್ರೆ ತೆರಿಗೆಯನ್ನು ಕೇವಲ 5 ಪರ್ಸೆಂಟ್ ಹೆಚ್ಚಳ ಮಾಡೋದ್ರಿಂದ ಪಾಲಿಕೆಗೆ ಆದಾಯದ ಪ್ರಮಾಣ ಕೂಡ ಹೆಚ್ಚಾಗಲಿದ್ದು, ಇದನ್ನು ಸರ್ಕಾರ ಬಳಸಿಕೊಳ್ಳಲು ನಿರ್ಧರಿಸಿದೆ.
ಪ್ರಸಕ್ತ ಸಾಲಿನಲ್ಲಿ 4100 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಲಾಗಿದ್ದು, ಇದಕ್ಕಾಗಿ ಪಾಲಿಕೆ ವಸತಿ ಕಟ್ಟಡಗಳಿಗೆ ಶೇ. 10 ರಿಂದ 15 ಹಾಗು ವಾಣಿಜ್ಯ ಕಟ್ಟಡಗಳಿಗೆ ಶೇ. 15 ರಿಂದ 20 ರಷ್ಟು ತೆರಿಗೆ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಸರ್ಕಾರ ಅವಧಿಯ 20,000 ಕೋಟಿ ರೂ.ಗಳ ಬಿಲ್ ಪಾವತಿಗೆ ತಡೆ
ಚುನಾವಣೆಗೂ ಮುನ್ನ ಮತದಾರರಿಗೆ ನೀಡಿದ ಗ್ಯಾರಂಟಿ ಯೋಜನೆಗಳ ಸಾಕಾರಕ್ಕೆ ತೆರಿಗೆದಾರರ ಮೇಲೆ ಹೊರೆ ಹೊರಿಸುವುದು ಸರಿಯೇ ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರ ನೀಡಬೇಕಿದೆ.
BBMP, #Property, #Tax, #Increase, #CongressGuarantee,