ರಣಮಳೆಯಲ್ಲಿ ಕೊಚ್ಚಿ ಹೋಯ್ತಂತೆ 445 ಕೋಟಿ ರೂ.

Social Share

ಬೆಂಗಳೂರು,ಅ.3-ನಗರದಲ್ಲಿ ಇತ್ತಿಚೆಗೆ ಸುರಿದ ರಣ ಮಳೆಯಿಂದ ಆಗಿರುವ ನಷ್ಟ ಎಷ್ಟು ಗೊತ್ತಾ..! ಒಂದು ಅಂದಾಜಿನ ಪ್ರಕಾರ ನಗರದಲ್ಲಿ ಮಳೆಯಿಂದಾಗಿ 445 ಕೋಟಿ ರೂ.ಗಳಿಗೂ ಹೆಚ್ಚು ಹಾನಿಯಾಗಿದೆಯಂತೆ. ಕಂಡು ಕೇಳರಿಯದ ಮಹಾಮಳೆಯಿಂದ ಆಗಿರುವ ನಷ್ಟವನ್ನು ಬಿಬಿಎಂಪಿ ಅಂದಾಜಿಸಿದ್ದು, ಬರೊಬ್ಬರಿ 445 ಕೋಟಿ ರೂ.ಗಳಿಗೂ ಹೆಚ್ಚು ಹಾನಿಯಾಗಿರುವುದನ್ನು ಪತ್ತೆ ಹಚ್ಚಲಾಗಿದೆ.

ನಗರದಲ್ಲಿ ಸಂಭವಿಸಿರುವ ಮಳೆ ಹಾನಿಯ ಬಗ್ಗೆ ಲೆಕ್ಕ ಹಾಕಿ ಸಂಪೂರ್ಣ ಹಾನಿ ಕುರಿತಂತೆ ಕಂದಾಯ ಇಲಾಖೆಗೆ ಬಿಬಿಎಂಪಿ ಪತ್ರ ಬರೆದಿದೆ. ಮಳೆಯಿಂದ ಎಷ್ಟು ಲಾಸ್ ಮಾಡಿದೆ. ಎಷ್ಟು ಮನೆಗಳಿಗೆ ನೀರು ನುಗ್ಗಿದೆ. ಮಹದೇವಪುರ ವಲಯದಲ್ಲಿ ಎಷ್ಟು ಕೋಟಿ ರೂ. ನಷ್ಟವಾಗಿದೆ. ಎಷ್ಟು ಕಿ.ಮೀ ರಸ್ತೆ ಹಾಗೂ ಫುಟ್‍ಪಾತ್ ಹಾನಿಯಾಗಿದೆ. ಹಾನಿಯಾದವರಿಗೆ ನೀಡಿರುವ ಪರಿಹಾರ ಸೇರಿದಂತೆ ಒಟ್ಟು 400 ಕೋಟಿ ರೂ.ಗಳ ನಷ್ಟ ಸಂಭವಿಸಿದೆಯಂತೆ.

ಎಲ್ಲೆಲ್ಲಿ ನಷ್ಟ: ಪೂರ್ವ ವಲಯದಲ್ಲಿ ಒಟ್ಟು ಹಾನಿ 37.53 ಕೋಟಿ, ಹಾಳಾದ ರಸ್ತೆಯ ಉದ್ದ 83.46 ಕಿಮೀ, ಹಾನಿಗೊಳಾಗದ ಮನೆಗಳು – 1549, ಪಶ್ಚಿಮ ವಲಯದಲ್ಲಿ ಯಾವುದೇ ಹಾನಿಯಾಗಿಲ್ಲ. ದಕ್ಷಿಣ ವಲಯದಲ್ಲಿ ಒಟ್ಟು ಹಾನಿ 50ಕೋಟಿ, ಹಾಳಾದ ರಸ್ತೆಯ ಉದ್ದ 56.45 ಕಿಮೀ ಹಾಗೂ ಹಾನಿಗೊಳಾಗದ ಮನೆಗಳು 88, ಬೊಮ್ಮನಹಳ್ಳಿ ವಲಯದಲ್ಲಿ ಒಟ್ಟು ಹಾನಿ 15 ಕೋಟಿ, ಹಾಳಾದ ರಸ್ತೆಯ ಉದ್ದ 23ಕಿಮೀ ಹಾಗೂ ಹಾನಿಗೊಳಾಗದ ಮನೆಗಳ ಸಂಖ್ಯೆ 340 ಆದರೆ, ದಾಸರಹಳ್ಳಿ ವಲಯದಲ್ಲಿ ಯಾವುದೇ ಹಾನಿಯಾಗಿಲ್ಲ.

ಮಹದೇವಪುರ ವಲಯ ದಲ್ಲಿ ಒಟ್ಟು ಹಾನಿ 331 ಕೋಟಿ, ಯಾವುದೇ ರಸ್ತೆ ಹಾಗೂ ಮನೆ ಹಾಳಾಗಿಲ್ಲ. ರಾಜರಾಜೇಶ್ವರಿ ನಗರ ವಲಯದಲ್ಲಿ ಒಟ್ಟು ಹಾನಿ 10 ಕೋಟಿ, ಹಾಳಾದ ರಸ್ತೆಯ ಉದ್ದ 39 ಕಿಮೀ ಆದರೆ ಇಲ್ಲಿ ಯಾವುದೆ ಮನೆಗಳಿಗೆ ಹಾನಿಯಾಗಿಲ್ಲ.

ಯಲಹಂಕ ವಲಯದಲ್ಲಿ ಒಟ್ಟು ಹಾನಿ 1.5 ಕೋಟಿ, ಹಾಳಾದ ರಸ್ತೆಯ ಉದ್ದ 2.5 ಕಿಮೀ ಹಾಗೂ 342 ಮನೆಗಳು ಮಳೆಯಿಂದಾಗಿ ಹಾನಿಗೊಳಗಾಗಿವೆ. ಒಟ್ಟಾರೆ ಕಳೆದ ತಿಂಗಳು ನಗರದಲ್ಲಿ ಸುರಿದ ರಣಮಳೆಗೆ ಇದುವರೆಗೂ 445 ಕೋಟಿ ರೂ.ಗಳ ನಷ್ಟ ಸಂಭವಿಸಿದ್ದರೆ, 204 ಕಿ.ಮೀ ರಸ್ತೆಗಳು ಹಾಗೂ 2319 ಮನೆಗಳು ಹಾಳಾಗಿವೆ ಎಂದು ಬಿಬಿಎಂಪಿ ಅಕಾರಿಗಳು ಲೆಕ್ಕ ಹಾಕಿದ್ದಾರಂತೆ.

Articles You Might Like

Share This Article