ಬೆಂಗಳೂರು,ಜ.13-ದೇಶದ ಪ್ರಪ್ರಥಮ ಎಂಬ ಹಿರಿಮೆಗೆ ಪಾತ್ರವಾಗಿದ್ದ ನಗರದ ರ್ಯಾಪಿಡ್ ರಸ್ತೆ ಅವ್ಯವಸ್ಥೆಗೆ ಕಿಡಿ ಕಾರಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರ್ಯಾಪಿಡ್ ರಸ್ತೆ ನಿರ್ಮಾಣಕ್ಕೆ ಬ್ರೇಕ್ ಹಾಕಲು ತೀರ್ಮಾನಿಸಿದ್ದಾರೆ.
ಡಾಂಬರು ಮತ್ತು ವೈಟ್ ಟಾಪಿಂಗ್ ರಸ್ತೆಗೆ ಪರ್ಯಾಯವಾಗಿ ರ್ಯಾಪಿಡ್ ರಸ್ತೆ ನಿರ್ಮಾಣಕ್ಕೆ ಬಿಬಿಎಂಪಿ ತೀರ್ಮಾನಿಸಿತ್ತು. ಪ್ರಾಯೋಗಿಕವಾಗಿ ನಗರದ ಹೊರ ವಲಯದಲ್ಲಿ ರ್ಯಾಪಿಡ್ ರಸ್ತೆ ನಿರ್ಮಿಸಲಾಗಿತ್ತು.
ಬೇರೆ ಮಾದರಿಯ ರಸ್ತೆಗಳಿಗಿಂತ ದುಬಾರಿಯಾದರೂ ಶೀಘ್ರ ನಿರ್ಮಾಣ ಮಾಡಬಹುದು ಹಾಗೂ ಬಹು ಕಾಲ ಬಾಳಿಕೆ ಬರಲಿದೆ ಎಂಬ ಕಾರಣಕ್ಕೆ ರ್ಯಾಪಿಡ್ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ರಸ್ತೆ ನಿರ್ಮಿಸಿ ಒಂದು ತಿಂಗಳು ಕಳೆಯುವುದರೊಳಗೆ ರ್ಯಾಪಿಡ್ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ರ್ಯಾಪಿಡ್ ರಸ್ತೆ ನಿರ್ಮಾಣಕ್ಕೆ ಬ್ರೇಕ್ ಬಿದ್ದಿದೆ.
ಜೋಶಿಮಠದಲ್ಲಿ 12 ದಿನಗಳಲ್ಲಿ 5.4ಸೆಂ,ಮೀ ಭೂಮಿ ಮುಳುಗಡೆ
ರ್ಯಾಪಿಡ್ ರಸ್ತೆ ಗುಣಮಟ್ಟ ಪರಿಶೀಲನೆ ಹೊಣೆಯನ್ನು ಐಐಎಸ್ಸಿ ವಹಿಸಲಾಗಿತ್ತು. ವರದಿ ಕೈ ಸೇರುವ ಮುನ್ನವೇ ರಸ್ತೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಮುಖ್ಯಮಂತ್ರಿಗಳು ರಸ್ತೆ ನಿರ್ಮಾಣ ಮಾಡುವುದು ಬೇಡ ಎಂದು ಬಿಬಿಎಂಪಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ರ್ಯಾಪಿಡ್ ರಸ್ತೆ ನಿರ್ಮಾಣ ಬೇಡ ಎಂದು ತಜ್ಞರು ಸಲಹೆ ನೀಡಿದ್ದರೂ ಆದರೂ ಬಿಬಿಎಂಪಿ ಅಕಾರಿಗಳು ಅದರಲ್ಲೂ ಪ್ರಧಾನ ಅಭಿಯಂತರ ಪ್ರಹ್ಲಾದ್ ಅವರು ಹಠಕ್ಕೆ ಬಿದ್ದವರಂತೆ ರ್ಯಾಪಿಡ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದರು.
ತಜ್ಞರು ಬೇಡ ಎಂದು ಸಾರ್ವಜನಿಕರ ತೆರಿಗೆ ಹಣದಲ್ಲಿ ಕೋಟಿ ಕೋಟಿ ಖರ್ಚು ಮಾಡಿ ರ್ಯಾಪಿಡ್ ರಸ್ತೆ ನಿರ್ಮಾಣ ಮಾಡಿದ್ದ ಪ್ರಹ್ಲಾದ್ ಅವರನ್ನು ಸಿಎಂ ತರಾಟೆಗೆ ತೆಗೆದುಕೊಂಡ ನಂತರ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
BBMP, rapid road, construction, CM Bommai,