ಬೆಂಗಳೂರು,ಫೆ.15- ರಾಜಧಾನಿ ಬೆಂಗಳೂರಿನಲ್ಲಿ ಇನ್ನು ಮುಂದೆ ರಸ್ತೆ ಅಗೆಯುವಾಗ ಕೇಬಲ್ ಕಂಪನಿಯವರು ಕಡ್ಡಾಯವಾಗಿ ಅನುಮತಿ ಪಡೆದೆ ಕಾಮಗಾರಿಯನ್ನು ಆರಂಭಿಸಲು ನಿಯಮಾವಳಿ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಕಾಂಗ್ರೆಸ್ ಸದಸ್ಯ ಭೈರತಿ ಸುರೇಶ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಖಾಸಗಿ ಟೆಲಿಕಾಂ ಸಂಸ್ಥೆಗಳು ಒಎಸ್‍ಸಿ ಕೇಬಲ್ ಅಳವಡಿಸುವ ವೇಳೆ ಬಿಡಬ್ಲ್ಯುಎಸ್‍ಎಸ್‍ಬಿ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿಯನ್ನು ಕಡ್ಡಾಯವಾಗಿ ಪಡೆಯಲೇಬೇಕು. ಈ ಸಂಬಂಧ ನಿಯಮಾವಳಿಗಳನ್ನು ಜಾರಿ ಮಾಡುವುದಾಗಿ ಹೇಳಿದರು.
ರಸ್ತೆಗಳನ್ನು ಅಗೆಯುವ ಮುನ್ನ ಟೆಲಿಕಾಂ ಕಂಪನಿಯವರು ಸಂಬಂಧಪಟ್ಟ ಇಲಾಖೆಗೆ ರಸ್ತೆಯನ್ನು ರಿಪೇರಿ ಮಾಡಿಕೊಡಲು ಠೇವಣಿ ಇಡಬೇಕು, ಅಕೃತವಾಗಿದ್ದರೆ ಸರ್ಕಾರವೇ ಠೇವಣಿ ಭರಿಸಲಿದೆ. ಅನಕೃತವಾಗಿದ್ದರೆ ಖಾಸಗಿಯವರೇ ಠೇವಣಿ ಕಾಮಗಾರಿ ಆರಂಭಿಸಬೇಕೆಂದು ಸೂಚಿಸಿದ್ದರು. ಖಾಸಗಿಯವರು ಎಲ್ಲೆಂದರಲ್ಲಿ ರಸ್ತೆಗಳನ್ನು ಅಗೆಯುವುದರಿಂದ ರಸ್ತೆಗಳು ಹಾಳಾಗುತ್ತಿದ್ದವು ಇನ್ನು ಮುಂದೆ ಭೂಸ್ವಾನ ಪರಿಹಾರವನ್ನು ಖಾಸಗಿಯವರೇ ಭರಿಸಿಕೊಡಿಬೇಕು. ಹೀಗಾಗಿ ಸರ್ಕಾರ ನಿಯಮಾವಳಿ ಜಾರಿ ಮಾಡಿದೆ ಎಂದರು.
ಕೇಬಲ್ ಅಳವಡಿಸಿದಾಗ ರಸ್ತೆಗಳನ್ನು ಅಗೆದರೆ ಖಾಸಗಿಯವರೇ ರಸ್ತೆ ರಿಪೇರಿ ಮಾಡಬೇಕು. ಒಂದು ವೇಳೆ ಅವರು ಮಾಡಿ ಕೊಡದಿದ್ದರೆ ಅವರ ಮೇಲೆ ಶಿಸ್ತುಕ್ರಮ ಜರುಗಿಸುವುದಾಗಿ ಎಚ್ಚರಿಸಿದರು.
ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 8 ವಾರ್ಡ್‍ಗಳಲ್ಲಿ ಕೇಬಲ್ ಅಳವಡಿಸುವಾಗ ರಸ್ತೆ ಅಗೆದು ಹಾಗೆ ಬಿಟ್ಟಿದ್ದಂತಹ ಕಂಪನಿಗಳ ಮೇಲೆ ಐದು ಎಫ್‍ಐಆರ್ ಹಾಗೂ 1 ಕೋಟಿ ದಂಡ ವಸೂಲಿ ಮಾಡಲಾಗಿದೆ. ಕ್ಷೇತ್ರ ವ್ಯಾಪ್ತಿಯ ಕಳೆದ 3 ವರ್ಷಗಳಲ್ಲಿ 90 ಕಿ.ಮೀ ವ್ಯಾಪ್ತಿ ಕೇಬಲ್ ಅಳವಡಿಸಲಾಗಿದೆ. ಹೆಚ್ಚುವರಿಯಾಗಿ 1.25 ಕಿ.ಮೀ ರಸ್ತೆ ಅಗೆದಿದ್ದರಿಂದ ದಂಡ ವಿಸಲಾಗಿದೆ.
