ಪೋಷಕರ ಖಾತೆಗೆ ಹಣ ಹಾಕಬೇಡಿ, ನಮಗೆ ಸ್ವೆಟರ್ ಕೊಡಿ ಪ್ಲೀಸ್

Social Share

ಬೆಂಗಳೂರು,ಅ.20- ಚಳಿಗಾಲ ಬಂತು ಸ್ವೆಟರ್ಸ್ ಕೊಡಿ ಪ್ಲೀಸ್ ಎಂದು ಅಂಗಲಾಚುತ್ತಿರುವ 23 ಸಾವಿರ ಬಿಬಿಎಂಪಿ ಶಾಲಾ ಮಕ್ಕಳ ಕೂಗು ಪಾಲಿಕೆ ಆಡಳಿತಕ್ಕೆ ಕೇಳಿಸದಿರುವುದು ಮಾತ್ರ ದುರಂತವೇ ಸರಿ. ಸ್ವೆಟರ್ಸ್ ಕೊಡದೆ ಅದರ ಹಣವನ್ನು ಪೋಷಕರ ಖಾತೆಗೆ ಜಮಾ ಮಾಡಲು ಮುಂದಾಗಿರುವ ಬಿಬಿಎಂಪಿ ಕ್ರಮಕ್ಕೂ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಚಳಿಗಾಲ ಆರಂಭವಾಗಿದೆ ಸ್ವೆಟರ್ಸ್ ಕೊಡುವ ಬದಲು ಅದರ ಬೆಲೆಯಷ್ಟು ಹಣವನ್ನು ನಮ್ಮ ಪೋಷಕರ ಖಾತೆಗೆ ಹಾಕಿದರೆ ಆ ಹಣವನ್ನು ನಮ್ಮ ಪೋಷಕರು ತಮ್ಮ ಕಷ್ಟಕ್ಕೆ ಬಳಸಿಕೊಂಡರೆ ನಮ್ಮ ಪಾಡೇನು ಎಂದು ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ.

ಟೆಂಡರ್ ಗೊಂದಲಕ್ಕೆ ಸ್ವೆಟರ್ಸ್ ಬಲಿ : ಟೆಂಡರ್ ಗೊಂದಲದಿಂದಾಗಿ ಮಕ್ಕಳಿಗೆ ಪ್ರತಿ ವರ್ಷ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದ್ದ ಸ್ವೇಟರ್ ವಿತರಣೆಯಾಗಿಲ್ಲ. ಟೆಂಡರ್ ನಲ್ಲಿ ಪಾಲ್ಗೊಂಡಿದ್ದ ಇಬ್ಬರ ಪೈಕಿ ಎಲ್ ವಿ ಟಿ ಕಂಟೈನರ್ ಏಜೆನ್ಸಿಯವನು ಬೋಗಸ್ ದಾಖಲೆ ಸಲ್ಲಿಸಿದ್ದರಿಂದ ಅನರ್ಹಗೊಂಡಿದ್ದಾನೆ. ಉಳಿದಂತೆ ಎಕ್ಸೆಲ್ ಕಂಪೆನಿಯವರಿಗೆ ಸಿಗ್ಬೇಕಿರುವ ಗುತ್ತಿಗೆ ಅವಕಾಶವನ್ನು ಸಿಂಗಲ್ ಟೆಂಡರ್ ಎನ್ನುವ ಕಾರಣಕ್ಕೆ ನಿರಾಕರಿಸಲಾಗುತ್ತಿದೆ. ತಾಂತ್ರಿಕವಾಗಿ ಎಕ್ಸೆಲ್ ಕಂಪೆನಿಯವರು ಶ್ವೆಟರ್ ಪೂರೈಕೆಗೆ ಅರ್ಹವಾಗಿದ್ದರೂ ಅವರನ್ನೇಕೆ ಹೊರಗಿಡಲಾಗುತ್ತಿದೆ ಎಂಬುದೇ ಆರ್ಥವಾಗುತ್ತಿಲ್ಲ.

ಬಿಡ್ ನಲ್ಲಿ ಪಾಲ್ಗೊಂಡ ಗುತ್ತಿಗೆದಾರರ ಪೈಕಿ ಯಾರು ಅನರ್ಹವಾಗುತ್ತಾರೋ ಅದರ ನಂತರದ ಅವಕಾಶ ಮತ್ತೊಬ್ಬರಿಗೆ ಸಿಗಬೇಕು ಎನ್ನುವುದು ಕೆಟಿಟಿಪಿ ಕಾಯ್ದೆ ಉದ್ದೇಶ, ಆದರೆ, ಸ್ವೇಟರ್ಸ ವಿತರಿಸಲು ಎಕ್ಸೆಲ್ ಕಂಪೆನಿಯವರು ಅರ್ಹವಾಗಿದ್ದರೂ ಬೇಕಂತಲೇ ಅದನ್ನು ನಿರಾಕರಿಸುತ್ತಿರುವುದರ ಹಿಂದೆ ಯಾವ್ ಲಾಭಿ ಇದೆಯೋ ಗೊತ್ತಾಗ್ತಿಲ್ಲ ಎಂದು ಬಿಬಿಎಂಪಿ ಮಾಜಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರೊಬ್ಬರು ಅಪಾದಿಸಿದ್ದಾರೆ.

ಎಲ್ ವಿಟಿ ಕಂಪೆನಿ ಟೆಂಡರ್ ರಿಜೆಕ್ಟ ಆಗ್ತಿದ್ದಂಗೆ ಎಕ್ಸೆಲ್ ಕಂಪೆನಿ ಟೆಂಡರ್ ನಮಗೆ ಸಿಕ್ಕಿಬಿಡ್ತು ಎನ್ನುವ ಅತ್ಯುತ್ಸಾಹದಲ್ಲಿ ಸ್ವೆಟರ್ಸ್ ದಾಸ್ತಾನನ್ನು ಮಾಡಿಟ್ಟುಕೊಂಡಿದ್ದರು. ಆದರೆ ಈಗ ಆ ಅವಕಾಶವನ್ನೇ ಕಸಿದುಕೊಂಡಿರುವುದರಿಂದ ಅಷ್ಟೊಂದು ಸ್ಟಾಕ್ ನ್ನು ಏನ್ ಮಾಡ್ಬೇಕೆಂದು ಗೊತ್ತಾಗದೆ ಪೇಚಿಗೆ ಸಿಲುಕಿದ್ದಾರೆ.

ಬಹಳಷ್ಟು ಅವಧಿಗೆ ಸ್ವೆಟರ್ಸ್ ಗಳನ್ನು ವಿತರಿಸಿರುವ ಅನುಭವ ಇರುವ ಎಕ್ಸೆಲ್ ಕಂಪೆನಿಯ ಆಡಳಿತ ತಮಗಾದ ಅನ್ಯಾಯ ಪ್ರಶ್ನಿಸಿ ಕಾನೂನಾತ್ಮಕ ಮೊರೆ ಹೋಗಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

90 ಮೀ. ಎತ್ತರದ ಏರಿಯಲ್ ಲ್ಯಾಡರ್ ವಾಹನಗಳಿಗೆ ಚಾಲನೆ

ಬಿಬಿಎಂಪಿ ಶಾಲೆಗಳಿಗೆ ಬರುವುದು ಕಡುಬಡವರ ಮಕ್ಕಳು, ಅಂತಹ ಮಕ್ಕಳಿಗೆ ಸಿಗಬೇಕಾದ ಸೂಕ್ತ ಸವಲತ್ತು ಸಿಗದಿದ್ದರೆ ಯಾರು ತಾನೇ ಶಾಲೆಗಳಿಗೆ ಬರುತ್ತಾರೆ. ಇಂತಹ ಪರಿಸ್ಥಿತಿಯಿಂದಲೆ ಬಿಬಿಎಂಪಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರು ಹಿಂದುಮುಂದು ನೋಡುವುದು ಇಂತಹ ಪರಿಸ್ಥಿತಿ ಹೊಗಲಾಡಿಸಬೇಕು ಎಂದು ಸಲಹೆ ನೀಡುತ್ತಾರೆ ನಿವೃತ್ತ ಮುಖ್ಯೋಪದ್ಯಾ ಯರೊಬ್ಬರು.

ಹಾಗಾದ್ರೆ ಪರಿಹಾರ ಏನು: ಇಂತಹ ಸನ್ನಿವೇಶದಲ್ಲಿ ಮತ್ತೆ ಟೆಂಡರ್ ಕರೆದು ಸ್ವೆಟರ್ ವಿತರಿಸಲು ಮೂರ್ನಾಲ್ಕು ತಿಂಗಳು ಬೇಕು. ಹೀಗಾಗಿ ಸ್ವೆಟರ್ ಮೌಲ್ಯದ ಹಣವನ್ನು ವಿದ್ಯಾರ್ಥಿಗಳ ಪೋಷಕರ ಖಾತೆಗೆ ಜಮಾ ಮಾಡಲು ತೀರ್ಮಾನಿಸಿದ್ದೇವೆ ಎನ್ನುತ್ತಾರೆ ವಿಶೇಷ ಆಯುಕ್ತ ರಾಮ್‍ಪ್ರಸಾತ್ ಅವರು. ಆದರೆ ಈ ಪ್ಲ್ಯಾನ್ ಅವರು ಅಂದುಕೊಂಡಷ್ಟು ಸಲೀಸಾಗಿ ವರ್ಕೌಟ್ ಆಗುತ್ತೆನ್ನುವ ನಂಬಿಕೆ ಯಾರಿಗೂ ಇಲ್ಲ.

ಬಿಬಿಎಂಪಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಬಹುತೇಕ ಪೋಷಕರು ಕೂಲಿ ನಾಲಿ ಮಾಡಿ ಬದುಕುವವರು ಅಂತವರು ತಮ್ಮ ಖಾತೆಗೆ ಬರುವ ಹಣದಿಂದ ಸ್ವೆಟರ್ ಖರೀದಿಸುವ ಬದಲು ಬೇರೆ ಉದ್ದೇಶಕ್ಕೆ ಬಳಸಿಕೊಂಡರೆ ನಾವೇನು ಮಾಡೋದು ಎನ್ನುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

ನಕಲಿ ಶಿಕ್ಷಕರ ನೇಮಕಾತಿ CID ಪೊಲೀಸರ ದಾಳಿ: ಕೆಲವರು ವಶಕ್ಕೆ

ಬೇಡ ಸಾರ್ , ನಮ್ಮಪ್ಪ ಕುಡೀತಾರೆ.. ನನ್ನ ಸ್ವೆಟರ್ ಹಣವನ್ನೂ ಉಳಿಸೊಲ್ಲ: ಇದು ಬಿಬಿಎಂಪಿ ಶಾಲೆಯೊಂದರಲ್ಲಿ ಓದುತ್ತಿರುವ ವಿದ್ಯಾರ್ಥಿಯ ನೋವು. ದಿನಂಪ್ರತಿ ಕಷ್ಟಪಟ್ಟು ಬೆಳಗ್ಗೆ ಅವರಿವರ ಮನೆಗೆ ಪೇಪರ್ ಹಾಕ್ಕೊಂಡು ಓದುತ್ತಿರುವ ಈ ವಿದ್ಯಾರ್ಥಿ ಪೋಷಕರ ಖಾತೆಗೆ ಸ್ವೆಟರ್ ಅಮËಂಟ್ ಹಾಕೋ ವಿಚಾರದ ಬಗ್ಗೆಆಕ್ಷೇಪ ವ್ಯಕ್ತಪಡಿಸ್ತಾನೆ. ಇದಕ್ಕೆ ಕಾರಣ ಅವರಪ್ಪನ ಕುಡಿತದ ಚಟ.

ಹಾಗಾಗಿ ಮಕ್ಕಳ ಪೋಷಕರ ಖಾತೆಗಳಿಗೆ ಹಣವನ್ನು ಜಮಾ ಮಾಡಿ ಅವರೇ ಸ್ವೆಟರ್ಸ್ ಕೊಳ್ಳು ವಂತೆ ಮಾಡಲು ಹೊರಟಿರುವ ವಿನೂತನ ವ್ಯವಸ್ಥೆಯಿಂದ ಪ್ರಯೋಜನಗಳಿಗಿಂತ ಸಮಸ್ಯೆನೇ ಹೆಚ್ಚಾಗುವ ಆತಂಕವಿರುವುದರಿಂದ ಬಿಬಿಎಂಪಿಯವರು ಪಾರದರ್ಶಕ ವಾಗಿ ಮಕ್ಕಳಿಗೆ ಸ್ವೆಟರ್ ಪೂರೈಕೆ ಮಾಡುವುದು ಸೂಕ್ತ ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.

Articles You Might Like

Share This Article