ಬಿಬಿಎಂಪಿಯ ಶಾಲಾ-ಕಾಲೇಜುಗಳಿಗೆ ಹೈಟೆಕ್ ಸ್ಪರ್ಶ

Social Share

ಬೆಂಗಳೂರು, ಮಾ.2- ಬಿಬಿಎಂಪಿಯ ಎಲ್ಲಾ ಶಾಲಾ-ಕಾಲೇಜುಗಳನ್ನು ಮೇಲ್ದರ್ಜೆಗೇರಿಸಿ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಕನಸಿನ ಶಾಲೆ, ಮನೆ ಬಾಗಿಲಿಗೆ ಶಾಲೆ, ಓದುವ ಬೆಳಕು ಯೋಜನೆಯನ್ನು ರೂಪಿಸಿದೆ.

ಆಡಳಿಧಿತಾಕಾರಿ ರಾಕೇಶ್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರ ಸಮ್ಮುಖದಲ್ಲಿ ವಿಶೇಷ ಆಯುಕ್ತ ಜಯರಾಮ್ ರಾಯಪುರ ಅವರು ಪ್ರಸಕ್ತ ಸಾಲಿನ ಪಾಲಿಕೆ ಬಜೆಟ್ ಮಂಡಿಸಿ ಮಾತನಾಡಿದ ಅವರು, ಬೆಂಗಳೂರಿನ ಬೆಳವಣಿಗೆ ಎಂದರೆ ಕೇವಲ ರಸ್ತೆ, ಉದ್ಯಾನವನವಗಳಷ್ಟೇ ಅಲ್ಲ, ಬದಲಿಗೆ ಶಾಲೆಗಳು, ಆಸ್ಪತ್ರೆಗಳು, ಜೈಲುಗಳು, ಶೌಚಾಲಯಗಳು ಎಂದು ಕನ್ನಡದ ಖ್ಯಾತ ಕವಿ ಹೆಚ್.ಎಸ್.ಶಿವಪ್ರಕಾಶ್ ಹೇಳಿದ್ದಾರೆ. ಕವಿವರ್ಯರಿಂದ ದೊರೆತ ಸಾಲುಗಳು ನಮಗೆ ಬೆಂಗಳೂರಿಗರ ಜೀವನದ ಗುಣಮಟ ್ಟ ಹಾಗೂ ಬೆಂಗಳೂರಿನ ಮೂಲಭೂತ ಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಆದರ್ಶವಾಗಿವೆ ಎಂದಿದ್ದಾರೆ.

ಕವಿತೆಯ ಪಂಕ್ತಿಗಳಲ್ಲಿನ ಸವಾಲುಗಳನ್ನು ಮೀರಿ ಬೆಂಗಳೂರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪಾಲಿಕೆಯು ಬದ್ದವಾಗಿದೆ. ಈ ನಿಟ್ಟಿನಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಕೈಗೊಂಡಿದೆ.

11 ಸಾವಿರ ಕೋಟಿಯ ಬಿಬಿಎಂಪಿ ದಾಖಲೆ ಬಜೆಟ್

ಅಮೃತ ನಗರೋತ್ತಾನ ಯೋಜನೆಯಲ್ಲಿ 160 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆಯ ಶಾಲಾ ಕಟ್ಟಡಗಳ ನವೀಕರಣ ಕಾಮಗಾರಿ ಕೈಗೊಂಡಿದ್ದು, 20 ಕೋಟಿ ರೂ. ವೆಚ್ಚದಲ್ಲಿ ಪಿಠೋಪಕರಣ, ಸ್ಮಾರ್ಟ್ ತರಗತಿಗಳು ಸೇರಿದಂತೆ ಮೂಲಸೌಲಭ್ಯ ಹೆಚ್ಚಿಸಲು ಹಣ ಮೀಸಲಿಡಲಾಗುತ್ತಿದೆ. ಕಲಿಯುವ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಕಾಲುಚೀಲ, ಶೂ, ಬ್ಯಾಗ್ ವಿತರಿಸಲಾಗಿದೆ ಎಂದರು.

ಸ್ವಟರ್ ಪೂರೈಕೆಯಲ್ಲಿ ವಿಳಂಬವಾದ ಕಾರಣ ಮಕ್ಕಳ ಪೋಷಕರ ಖಾತೆಗೆ ಹಣ ನೀಡಲಾಗಿದೆ. ಪಿಯುಸಿ ಮತ್ತು ಪದವಿ ವಿದ್ಯಾರ್ಥಿ ವೇತನ, ಐಸಿಟಿ ಲ್ಯಾಬ್, ಅಟಲ್ ಟಿಂಕರಿಂಗ್ ಲ್ಯಾಬ್, ಆಟದ ಮೈದಾನಗಳನ್ನು ಸಿದ್ದಗೊಳಿಸಲಾಗಿದೆ ಎಂದರು.

ಬೆಂಗಳೂರು ಸಂಚಾರ ದಟ್ಟಣೆಗೆ ನಿಯಂತ್ರಣಕ್ಕೆ ಬಿಬಿಎಂಪಿ ಮಹತ್ವದ ನಿರ್ಣಯ

ಎಪಿಜಿ ಅಬ್ದುಲ್ ಕಲಾಂ ಅವರ ಕನಸಿನ ಶಾಲೆ ಮತ್ತು ಗ್ರಂಥಾಲಯ ಸೌಲಭ್ಯ ದೊರಕಿಸಲು ಓದುವ ಬೆಳಕು ಯೋಜನೆಯನ್ನು ಜಾರಿಗೊಳಿಸಲಾಗಿದೆ. ದುಡಿಯುವ ದಿನಕೂಲಿ ನೌಕರರ ಮಕ್ಕಳ ಶಿಕ್ಷಣಕ್ಕೆಂದು ಮನೆ ಬಾಗಿಲಿಗೆ ಶಾಲೆ ಯೋಜನೆಯಡಿ ಹತ್ತು ಮೊಬೈಲ್ ಶಾಲೆಗಳನ್ನು ತೆರೆದು, ಅಲೆಮಾರಿ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.
ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿ ಉತ್ತಮ, ಸಮಾನ ಗುಣಮಟ್ಟದ ಶಿಕ್ಷಣ ಹಾಗೂ ಮೂಲಸೌಲಭ್ಯ ದೊರಕಿಸಲು ಬೆಂಗಳೂರು ಸಾರ್ವಜನಿಕ ಶಾಲೆ ಮಾದರಿಯಲ್ಲಿ ಸೌಲಭ್ಯ ಹಾಗೂ ಗುಣಮಟ್ಟವನ್ನು ಸ್ಥಿರೀಕರಿಸುವ ಯೋಜನೆ ಇದೆ.

2023-24ರಲ್ಲಿ ಜಾರಿಯಾಗಲಿರುವ ಯೋಜನೆಯಂತೆ ಪಾಲಿಕೆ ಎಲ್ಲಾ ಶಾಲಾ-ಕಾಲೇಜುಗಳನ್ನು ಮೇಲ್ದರ್ಜೆಗೇರಿಸಿ ಗುಣಮಟ್ಟದ ಶಿಕ್ಷಣ ನೀಡಲು 65 ಕೋಟಿ ರೂ. ಮೀಸಲಿಡಲಾಗಿದೆ. ಒಟ್ಟಿನಲ್ಲಿ ಬಿಬಿಎಂಪಿಯ ಶಾಲಾ- ಕಾಲೇಜುಗಳಲ್ಲಿ ಐಟೆಕ್ಸ್ ಸ್ಪರ್ಶ ನೀಡಿ ಗುಣಮಟ್ಟದ ಉತ್ತಮ ಶಿಕ್ಷಣ ನೀಡಲು ಹಲವು ಯೋಜನೆಗಳನ್ನು ಕೈಗೊಂಡಿದೆ.

BBMP, school, high-tech, touch,

Articles You Might Like

Share This Article