ಬೆಂಗಳೂರು,ಮಾ.14- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್ ಬಂದ್ ಮಾಡಲು ಶೆಫ್‍ಟಾಕ್ ಸಂಸ್ಥೆ ನಿರ್ಧರಿಸಿದೆ. ಇಂದಿರಾ ಕ್ಯಾಂಟೀನ್‍ಗೆ ಬಿಡುಗಡೆ ಮಾಡಬೇಕಾದ ಅನುದಾನದವನ್ನು ಕಳೆದ ಐದು ವರ್ಷಗಳಿಂದ ಬಿಬಿಎಂಪಿ ಬಿಡುಗಡೆ ಮಾಡದೆ ಸತಾಯಿಸುತ್ತಿರುವುದರಿಂದ ಸಂಸ್ಥೆ ಇಂತಹ ನಿರ್ಧಾರ ಕೈಗೊಂಡಿದೆ.
ಕಳೆದ ಐದು ವರ್ಷಗಳಿಂದ 47 ಕೋಟಿ ಬಾಕಿ ಹಣ ಬರಬೇಕಿದೆ. ಬಿಲ್ ಬಿಡುಗಡೆ ಮಾಡುವಂತೆ ಬಿಬಿಎಂಪಿ ಆಯುಕ್ತರಿಗೆ ಪದೇ ಪದೇ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶೆಫ್‍ಟಾಕ್ ಸಂಸ್ಥೆ ತಿಳಿಸಿದೆ.
ನಗರದ ಕಡು ಬಡವರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯೂಟ ನೀಡುತ್ತಿದ್ದ ಇಂದಿರಾ ಕ್ಯಾಂಟಿನ್‍ಗಳಲ್ಲಿ ಈಗಾಗಲೇ ರಾತ್ರಿ ಊಟ ಸ್ಟಾಪ್ ಮಾಡಲಾಗಿದೆ.
ಮಾಡಾಳು ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನು ಅರ್ಜಿಯ ಮೇಲ್ಮನಿ ವಿಚಾರಣೆಗೆ ಸುಪ್ರೀಂ ಸಮ್ಮತಿ
ಕ್ಯಾಂಟೀನ್ ಸಿಬ್ಬಂದಿಗಳಿಗೆ ಸಂಬಳ. ದಿನಸಿ ಅಂಗಡಿಯ ಬಿಲ್ ಕಟ್ಟಬೇಕಾಗಿದೆ. ಇದರ ಜತೆಗೆ ಎಷ್ಟು ಅಂತ ಸಾಲ ಮಾಡಿ ಕ್ಯಾಂಟೀನ್ ನಡೆಸೋದು ಸಂಸ್ಥೆಯ ಅಧಿಕಾರಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಮಾ. 30 ರ ಒಳಗೆ ಕ್ಯಾಂಟೀನ್ ಬಾಕಿ ಬಿಲ್ ಪಾವತಿ ಅಗದಿದ್ರೆ ಕ್ಯಾಂಟೀನ್ ಗೆ ಅಹಾರ ಪೂರೈಕೆ ಸ್ಥಗಿತ ಮಾಡಲಾಗುವುದು ಎಂದು ಶೆಫ್ ಟಾಕ್ ಮುಖ್ಯಸ್ಥರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಈ ಬಾರಿಯ ಬಿಬಿಎಂಪಿ ಬಜೆಟ್‍ನಲ್ಲಿ ಇಂದಿರಾ ಕ್ಯಾಂಟಿನ್‍ಗಳಿಗಾಗಿ 50 ಕೋಟಿ ರೂ.ಗಳ ಅನುದಾನ ನೀಡಲಾಗಿದೆ. ಇದು ಯಾವುದಕ್ಕೂ ಸಾಕಾಗುವುದಿಲ್ಲ. ಇಂದಿರಾ ಕ್ಯಾಂಟಿನ್‍ಗಳಿಗೆ ಆಹಾರ ಪೂರೈಕೆ ಮಾಡುತ್ತಿರುವ ಮೂರು ಸಂಸ್ಥೆಗಳಿಗೆ 70 ಕೋಟಿ ರೂ.ಗಳ ಬಿಲ್ ಪಾವತಿಸಬೇಕಿದೆ.
ಸಂಸತ್‍ನಲ್ಲಿ ಇಂದೂ ಪ್ರತಿಧ್ವನಿಸಿದ ರಾಹುಲ್ ವಿವಾದಿತ ಹೇಳಿಕೆ
ಬಿಬಿಎಂಪಿ ಆಡಳಿತ ಮಂಡಳಿಯವರು ಉದ್ದೇಶಪೂರ್ವಕವಾಗಿ ಬಿಲ್ ತಡೆಹಿಡಿದು ವ್ಯವಸ್ಥಿತವಾಗಿ ಇಂದಿರಾ ಕ್ಯಾಂಟಿನ್‍ಗಳನ್ನು ಬಂದ್ ಮಾಡಿಸಲು ಹುನ್ನಾರ ನಡೆಸುತ್ತಿರಬಹುದು ಎಂಬ ಅನುಮಾನ ಕಾಡತೊಡಗಿದೆ.
ಕಳೆದ ಎರಡು ವರ್ಷಗಳಿಂದ ಇಂದಿರಾ ಕ್ಯಾಂಟಿನ್‍ಗೆ ಬಿಬಿಎಂಪಿ ವತಿಯಿಂದಲೆ ಅನುದಾನ ಪಾವತಿಸಲಾಗುತ್ತಿದೆ.
ಹಣ ಬಿಡುಗಡೆ ಮಾಡಬೇಕಾದ ಸರ್ಕಾರ ಎಲ್ಲ ಗೊತ್ತಿದ್ದು, ಕಣ್ಮುಚ್ಚಿ ಕುಳಿತಿರುವುದರಿಂದ ಬಿಬಿಎಂಪಿ ಕೂಡ ಅನುದಾನ ಬಿಡುಗಡೆ ಮಾಡುವುದನ್ನು ನಿಲ್ಲಿಸಿದೆ ಎನ್ನಲಾಗಿದೆ.
BBMP, shuts, Indira Canteens, Bengaluru,