ಮೋದಿ ಬೆಂಗಳೂರು ಭೇಟಿಗೆ 9 ಕೋಟಿ ರೂ. ಖರ್ಚು ಮಾಡಿದ ಬಿಬಿಎಂಪಿ..!

Social Share

ಬೆಂಗಳೂರು,ನ.12- ಪ್ರಧಾನ ಮಂತ್ರಿ ನರೇಂದ್ರ ಮೋದಿ ನಗರಕ್ಕೆ ಭೇಟಿ ನೀಡಿದ್ದು ಆಯ್ತು, ಹೋಗಿದ್ದೂ ಆಯ್ತು, ಆದರೆ, ಅವರ ಬಂದು ಹೋಗಲು ಬಿಬಿಎಂಪಿ ಮಾಡಿರೋ ಖರ್ಚು ನೋಡಿದರೆ ಬೆಚ್ಚಿ ಬೀಳುವಂತಿದೆ.
ಮೋದಿ ಅವರ ಭೇಟಿ ಸಂದರ್ಭದಲ್ಲಿ ಬಿಬಿಎಂಪಿ ಮಾಡಿರೋದು ಬರೊಬ್ಬರಿ 10 ಕೋಟಿ ರೂ. ಅಂತ ಲೆಕ್ಕ ಸಿಕ್ಕಿದೆ. ಜನರು ಪಾವತಿಸುವ ತೆರಿಗೆ ಹಣದಲ್ಲಿ ಮೋದಿ ಖರ್ಚು ವೆಚ್ಚವನ್ನು ಆದೇ ಹಣದಲ್ಲಿ ಬಳಕೆ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಇದೀಗ ಎಲ್ಲರನ್ನೂ ಕಾಡುತಿದೆ.

ಮೋದಿ ಹೆಸರಲ್ಲಿ ಬಿಬಿಎಂಪಿ ಖರ್ಚು ಮಾಡಿದೇಷ್ಟು..? ಮೋದಿ ಭೇಟಿ ಸಂದರ್ಭದಲ್ಲಿ ಬಿಬಿಎಂಪಿ ಎನ್ ಘನಕಾರ್ಯ ಮಾಡಿದೆ ಅನ್ನೊದನ್ನ ಈ ಲೆಕ್ಕ ನೋಡಿ ನೀವೆ ತೀರ್ಮಾನಿಸಿ. ಮೋದಿ ಸಂಚರಿಸುವ ಮಾರ್ಗವನ್ನು ಬಿಬಿಎಂಪಿಯವರು ಹಗಲು ರಾತ್ರಿ ಕಷ್ಟಪಟ್ಟು ಲಕ ಲಕ ಅಂತ ಹೊಳೆಯುವ ಹಾಗೆ ಮಾರ್ಪಾಟು ಮಾಡಿದ್ದರು.

ಬಿಬಿಎಂಪಿ ಅಧಿಕಾರಿಗಳು ಪಟ್ಟಿರುವ ಈ ಕಷ್ಟ ನೋಡಿ ಅಯ್ಯಯ್ಯೋ ಪಾಪ ಅಂತಾ ಫೀಲ್ ಆಗ್ಬೇಡಿ. ಯಾಕೆ ಅಂದ್ರೆ, ಮೋದಿ ಹೆಸರಲ್ಲಿ ಬಿಬಿಎಂಪಿ ಎಷ್ಟು ಹಣ ಖರ್ಚು ಮಾಡಿದೆ ಅಂತ ಕೇಳುದ್ರೆ ನೀವು ಬೆಚ್ಚಿ ಬೀಳ್ತಿರಿ…
ಮೋದಿ ಸಂಚರಿಸಿದ ರಸ್ತೆ ಪಕ್ಕದಲ್ಲಿ ಬ್ಯಾರಿಕೇಡ್ಗಾಗಿ ಬರೊಬ್ಬರಿ ಮೂರು ಕೋಟಿ ರೂ. ಖರ್ಚು ಮಾಡಲಾಗಿದೆ. ಅದೇ ರೀತಿ ನಾಲ್ಕು ಕಿ.ಮೀ ಉದ್ದ ರಸ್ತೆ ನಿರ್ಮಾಣ, ಸುಣ್ಣ ಬಣ್ಣ ಅಂತಾ ಹತ್ತತ್ರಾ ನಾಲ್ಕು ಕೋಟಿ ರೂ. ಉಳಿದಂತೆ ಸಣ್ಣ..ಪುಟ್ಟ ಖರ್ಚುಗಳು ಎರಡು ಕೋಟಿ ರೂ. ಖರ್ಚು ಮಾಡಲಾಗಿದೆಯಂತೆ.

ಮೋದಿ ಭೇಟಿ ಸಂದರ್ಭದಲ್ಲಿ ಹದಗೆಟ್ಟ ರಸ್ತೆಗಳು ಕಾಣಬಾರದು ಹಾಗೂ ರಸ್ತೆ ಅಕ್ಕಪಕ್ಕಗಳಲ್ಲಿ ಬ್ಯಾರಿಕೇಡ್ ನಿರ್ಮಿಸುವ ಹೊಣೆಯನ್ನು ಸರ್ಕಾರ ಬಿಬಿಎಂಪಿಗೆ ವಹಿಸಿತ್ತು.ಸರ್ಕಾರದ ಸೂಚನೆ ಮೇರೆಗೆ ಮೇಖ್ರಿ ವೃತ್ತದಿಂದ ವಿಧಾನಸೌಧಕ್ಕೆ ಮೋದಿ ತೆರಳುವ ಮಾರ್ಗದ ರಸ್ತೆಗಳನ್ನು ಬಿಬಿಎಂಪಿ ಲಕ ಲಕ ಅಂತಾ ಹೊಳೆಯುವ ಹಾಗೆ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿತ್ತು.

ವಿಧಾನಸೌಧದಿಂದ ರೈಲ್ವೆ ನಿಲ್ದಾಣ, ರೈಲ್ವೆ ನಿಲ್ದಾಣದಿಂದ ವಾಪಸ್ ಮೇಖ್ರಿ ಸರ್ಕಲ್ ಅಲ್ಲಿಂದ ಏರ್ ಪೋರ್ಟ್ ಗೆ ಬಿಬಿಎಂಪಿ ಬ್ಯಾರಿಕೇಡ್ ಹಾಕಿತ್ತು. ಈ ಕಾರ್ಯಕ್ಕೆ ಮೂರು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದು ಅಕಾರಿಗಳು ಲೆಕ್ಕ ನೀಡಿದ್ದಾರೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.ಇನ್ನು ಸಂಗೊಳ್ಳಿ ರಾಯಣ್ಣ ಮೇಲ್ಸೆತುವೆಯಿಂದ ರೈಲ್ವೆ ನಿಲ್ದಾಣವರೆಗೂ ಡಾಂಬರೀಕರಣ ಮಾಡಲು ಹಾಗೂ ಸುಣ್ಣ ಬಣ್ಣ ಬಳೆಯಲು ಅಂದಾಜು ನಾಲ್ಕು ಕೋಟಿ ರೂ. ಇದರ ಜತೆಗೆ ಇತರ ಖರ್ಚು ಎಂದು ಎರಡು ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆಯಂತೆ.

ಟಿಕೆಟ್ ಹಂಚಿಕೆಯಲ್ಲಿ ಗುಜರಾತ್ ಮಾಡೆಲ್ : 25 ಬಿಜೆಪಿಶಾಸಕರಿಗೆ ಕೊಕ್..!

ಒಟ್ಟಾರೆ, ಮೋದಿ ನಗರಕ್ಕೆ ಬಂದು ಹೋಗಿದ್ದರಿಂದ ಬಿಬಿಎಂಪಿ ಬರೊಬ್ಬರಿ 9 ಕೋಟಿ ರೂ.ಗಳನ್ನು ಖರ್ಚು ಮಾಡಿರುವುದಾಗಿ ಲೆಕ್ಕ ಹೇಳಲಾಗಿದೆ.ಯಾಕೆ ಇಷ್ಟೆಲ್ಲಾ ಖರ್ಚು ಮಾಡಲಾಗಿದೆ ಎಂದು ಬಿಬಿಎಂಪಿ ಅಕಾರಿಗಳನ್ನು ಲೆಕ್ಕ ಕೇಳಿದರೆ, ಅವರು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಈಗ ಲೆಕ್ಕ ಕೊಟ್ರೆ ಎಲ್ಲಿ ತಮ್ಮ ಬಂಡವಾಳ ಬಯಲಾಗುತ್ತೆ ಅಂತಾ ಯಾರು ಕೂಡಾ ಖರ್ಚಿನ ಬಗ್ಗೆ ಸರಿಯಾದ ಮಾಹಿತಿನೇ ನೀಡುತ್ತಿಲ್ಲ. ಮೂಲಗಳ ಪ್ರಕಾರ ಸಿಕ್ಕ ಮಾಹಿತಿಯಲ್ಲಿ ಒಂಭತ್ತು ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಕಾರಿಗಳು ಸರಿಯಾದ ಲೆಕ್ಕ ನೀಡಿದ ನಂತರ ಇನ್ನೆಷ್ಟು ಕೋಟಿ ರೂ.ಗಳ ಲೆಕ್ಕ ನೀಡುತ್ತಾರೊ ಕಾದು ನೋಡಬೇಕಿದೆ.

ಸರಿಯಾಗದ ರಸ್ತೆ: ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಮುಂಭಾಗದ ರಸ್ತೆಯಲ್ಲಿ ಮೋದಿ ಸಂಚರಿಸುತ್ತಾರೆ ಎಂದು ಈ ಹಿಂದೆ ಮಾಹಿತಿ ನೀಡಲಾಗಿತ್ತು. ಹೀಗಾಗಿ ವೈಟ್ ಟಾಪಿಂಗ್ ಮಾಡಬೇಕಾದ ರಸ್ತೆಯಲ್ಲಿ ತರಾತುರಿಯಲ್ಲಿ ಡಾಂಬರು ಹಾಕಲು ಬಿಬಿಎಂಪಿಯವರು ರಸ್ತೆ ಕೆರೆದು ಹಾಕಿದ್ದರು.

ಆದರೆ, ಕೊನೆ ಗಳಿಗೆಯಲ್ಲಿ ಮೋದಿ ಅವರು ಈ ರಸ್ತೆಯಲ್ಲಿ ಸಂಚರಿಸುವುದಿಲ್ಲ ಎಂದು ತಿಳಿದುಬರುತ್ತಿದ್ದಂತೆ ಕೆರೆದು ಹಾಕಿದ್ದ ರಸ್ತೆಗೆ ಡಾಂಬರು ಹಾಕದೆ ಹಾಗೆ ಬಿಟ್ಟಿರುವುದರಿಂದ ರೈಲ್ವೇ ನಿಲ್ದಾಣದ ರಸ್ತೆ ಹಾಳಾಗಿದೆ.

ಎಚ್ಚೆತ್ತ ಸರ್ಕಾರ: ಮೋದಿ ನಗರಕ್ಕೆ ಬಂದು ಹೋಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸರ್ಕಾರ ಬಿಬಿಎಂಪಿ ಮಾಡಿರುವ ಎಲ್ಲಾ ಕಾಮಗಾರಿಗಳ ಲೆಕ್ಕ ಕೇಳಿದೆ.ಕಳೆದ 15 ದಿನದಲ್ಲಿ ಡಾಂಬರ್ ಹಾಕಿರುವ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಬಿಬಿಎಂಪಿ ಗೆ ಸರ್ಕಾರ ಸೂಚನೆ ನೀಡಿದೆ.

ಡಾಂಬರು ಹಾಕಿರುವುದು ಹಾಗೂ ರಸ್ತೆ ಗುಂಡಿಗಳನ್ನು ಮುಚ್ಚಿರುವ ಬಗ್ಗೆ ಈ ಕೂಡಲೆ ವರದಿ ಸಲ್ಲಿಸುವಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ಬಿಬಿಎಂಪಿಗೆ ಖಡಕ್ ಸೂಚನೆ ನೀಡಲಾಗಿದೆ. ಸರ್ಕಾರದ ಈ ಸೂಚನೆಯಿಂದ ಬೆಚ್ಚಿ ಬಿದ್ದಿರುವ ಪಾಲಿಕೆ ಅಧಿಕಾರಿಗಳು ರಾತ್ರೋರಾತ್ರಿ ಪ್ರೋಗ್ರೆಸ್ ರಿಪೋರ್ಟ್ ಸಿದ್ದಪಡಿಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

Articles You Might Like

Share This Article