ಬಿಬಿಎಂಪಿ ಶಾಲಾ ಶಿಕ್ಷಕರಿಗೆ ‘ಫಾರಿನ್ ಟೂರ್’ ಭಾಗ್ಯ

Social Share

ಬೆಂಗಳೂರು,ನ.4- ಬಿಬಿಎಂಪಿ ಶಾಲೆಗಳಿಗೆ ವಿದೇಶಿ ಪ್ರವಾಸ ಯೋಗ ಕೂಡಿ ಬಂದಿದೆ. ಬಿಬಿಎಂಪಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಆಕರ್ಷಿಸುವ ಉದ್ದೇಶದಿಂದ ನೂರರಷ್ಟು ಫಲಿತಾಂಶ ತಂದುಕೊಡುವ ಶಾಲೆಗಳಿಗೆ ವಿದೇಶ ಪ್ರವಾಸದ ಯೋಗ ಕಲ್ಪಿಸಲು ಬಿಬಿಎಂಪಿ ತೀರ್ಮಾನಿಸಿದೆ.

ಈ ಹಿಂದೆ ಸರ್ಕಾರಿ ಶಾಲೆಗಳ ಫಲಿತಾಂಶ ವೃದ್ಧಿಗೆ ಬಳ್ಳಾರಿಯಲ್ಲಿ ಮಾಡಲಾಗಿದ್ದ ವಿದೇಶಿ ಪ್ರವಾಸ ಭಾಗ್ಯ ಯೋಜನೆಯನ್ನು ಇದೀಗ ಬಿಬಿಎಂಪಿ ಜಾರಿಗೊಳಿಸಲು ಮುಂದಾಗಿದೆ. ಬಳ್ಳಾರಿಯಲ್ಲಿ ವಿದೇಶಿ ಪ್ರವಾಸದ ಯೋಜನೆ ಯಶಸ್ವಿಯಾಗಿ ಅಲ್ಲಿನ ನೂರಾರು ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿತ್ತು.

ಹೀಗಾಗಿ ಪ್ರತಿವರ್ಷ ಕಡಿಮೆ ಫಲಿತಾಂಶ ಬರುತ್ತಿರುವ ಬಿಬಿಎಂಪಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಶೇ.100ರಷ್ಟು ಫಲಿತಾಂಶ ತಂದುಕೊಡುವ ಶಾಲೆಗಳ ಶಿಕ್ಷಕರಿಗೆ ವಿದೇಶಿ ಪ್ರವಾಸ ಭಾಗ್ಯ ಕಲ್ಪಿಸಲು ತೀರ್ಮಾನಿಸಲಾಗಿದೆ.

ವಿದೇಶಿ ಪ್ರವಾಸ ಭಾಗ್ಯದ ಯೋಜನೆಯ ಎಲ್ಲ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಮೇಲಕಾರಿಗಳ ಒಪ್ಪಿಗೆ ದೊರೆತ ಕೂಡಲೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಪೊಲೀಸ್ ಕಾನ್ಸ್‌ಟೇಬಲ್‌ ನೇಮಕಾತಿ ವಯೋಮಿತಿ 2 ವರ್ಷ ಹೆಚ್ಚಳ

ಯೋಜನೆ ಜಾರಿಗೂ ಮುನ್ನ ಪಾಲಿಕೆ ಬಿಬಿಎಂಪಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು ಹಾಗೂ ಶಾಲೆಗಳ ಹಾಜರಾತಿ ಮತ್ತು ನೋಂದಣಿ ಹೆಚ್ಚಿಸಬೇಕಾಗಿದೆ. ಮಾತ್ರವಲ್ಲ ,ಯೋಜನೆ ಜಾರಿಗೆ ಪಾಲಿಕೆ ಹಣ ಪೋಲಾಗದಂತೆ ನೋಡಿಕೊಳ್ಳುವ ಅವಶ್ಯಕತೆ ಇದೆ.

Articles You Might Like

Share This Article